ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಏತ

1. ಮೇಲೇರುವಿಕೆ.

2. (ಬಾವಿಯಿಂದ) ನೀರನ್ನು ಮೇಲೆತ್ತುವ ಸಾಧನ.

3. ಬತ್ತವನ್ನು ಕುಟ್ಟುವ ಸಾಧನ.

4. ಚಿತ್ರ ವಿಚಿತ್ರವಾದ ಬಣ್ಣ.

ಏತಿಪ್ರೇತಿ

ಸರಸ ವಿರಸ.

ಏದು

ಮೇಲುಸಿರುಬಿಡು.

ಏದು

ಮುಳ್ಳುಹಂದಿ.

ಏದುಸಿರು

(ಆಯಾಸದಿಂದ ಬಿಡುವ) ಮೇಲುಸಿರು.

ಏನ

ಪಾಪ.

ಏನ್(ನು)

ಪ್ರಶ್ನಾರ್ಥಕ ಸರ್ವನಾಮ.

ಏಬರಾಸಿ

ಅವಿವೇಕಿ.

ಏಮಾರು

1. ಮೋಸಹೋಗು.

2. ಉಪೇಕ್ಷಿಸು.

ಏರಂಡ

ಹರಳುಗಿಡ.

ಏರಣಿಗ

ಚಿನ್ನದ ಕೆಲಸ ಮಾಡುವವನು.

ಏರಾಟ

ಸ್ಪರ್ಧೆ.

ಏರಿ

1. ಎತ್ತರವಾದ ಕಟ್ಟೆ.

2. ಕೆರೆ.

3. ಒಂದು ಜಾತಿಯ ಮೀನು.

ಏರಿಕೆ

ಹೆಚ್ಚುವಿಕೆ.

ಏರಿಸು

1. ಮೇಲೇರಿಸು.

2. ಮುಡಿಸು.

3. ಆರೋಪಿಸು.

ಏರಿಹೊಡೆ

ಒಡ್ಡುಹಾಕು.

ಏರಿಳಿತ

1. ಉಬ್ಬರ ಮತ್ತು ಇಳಿತ.

2. ಹೆಚ್ಚು ಕಡಿಮೆ.

ಏರು

ಹತ್ತು.

ಏರು

1. ದಿಣ್ಣೆ.

2. ಏರ್.

3. ಎತ್ತಿನ ಜೊತೆ.

ಏರುಜವ್ವನ

ಏರುತ್ತಿರುವ ಯೌವನ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App