ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234567891920Next >

ಕನ್ನಡ ವರ್ಣಮಾಲೆಯ ಹನ್ನೆರಡನೆಯ ವರ್ಣ.

ಒಂದು ಅನುಕರಣಾವ್ಯಯ.

ಒಕ್ಕಣಿಕೆ

1. ಪೈರಿನಿಂದ ಕಾಳನ್ನು ಬೇರ್ಪಡಿಸುವ ಕೆಲಸ.

2. ವ್ಯಾಖ್ಯಾನ.

ಒಕ್ಕಣೆ

ಒಕ್ಕಣಿಕೆ.

ಒಕ್ಕಣ್ಣ

ಒಂದು ಕಣ್ಣುಳ್ಳವನು.

ಒಕ್ಕತನ

ಕೂಡಿ ಬಾಳುವೆ ಮಾಡುವುದು.

ಒಕ್ಕಂದಿ

1. ವರ್ಷಕ್ಕೊಮ್ಮೆ ಕರು ಹಾಕುವ ಹಸು.

2. ಒಂದು ಕರುವನ್ನು ಹಾಕಿದ ಹಸು.

ಒಕ್ಕರೆ

ಕೊಳ.

ಒಕ್ಕಲಗಿತ್ತಿ

1. ಒಕ್ಕಲಿಗನ ಹೆಂಡತಿ.

2. ಕೆಲಸದವಳು.

ಒಕ್ಕಲಾಗು

ಜೀವಿಸು.

ಒಕ್ಕಲಿಕ್ಕು

1. ಬಡಿ.

2. ಅಸ್ತವ್ಯಸ್ತವಾಗಿಸು.

3. ನೆಲಸು.

ಒಕ್ಕಲಿಗ

1. ವ್ಯವಸಾಯ ಮಾಡುವವನು.

2. ಚತುರ್ಥವರ್ಣಕ್ಕೆ ಸೇರಿದವನು.

ಒಕ್ಕಲು

1. ಒಕ್ಕುವಿಕೆ.

2. ಮನೆತನ.

3. ಬೇಸಾಯಗಾರ.

4. ನಿವಾಸಿ.

5. ಹೆಂಡತಿ.

6. ಗುತ್ತಿಗೆದಾರ.

ಒಕ್ಕಲುತೆಗೆ

ಊರು ಬಿಟ್ಟು ಹೋಗು.

ಒಕ್ಕಲುಮಕ್ಕಳು

1. ವ್ಯವಸಾಯ ಮಾಡುವ ರೈತರು.

2. ಜೀತಗಾರರು.

ಒಕ್ಕಲೆತ್ತು

ಸಂಸಾರಸಹಿತವಾಗಿ ಮನೆ ಬಿಟ್ಟು ಹೋಗು.

ಒಕ್ಕಲ್

1. ಒಕ್ಕುವಿಕೆ.

2. ಮನೆ.

3. ಮನೆತನ.

4. ಬೇಸಾಯಗಾರ.

ಒಕ್ಕಲ್ತನ

1. ಗೃಹಸ್ಥತನ.

2. ಬೇಸಾಯ.

ಒಕ್ಕಳ

ಒಂದು ಕೊಳಗ ಪ್ರಮಾಣ.

ಒಕ್ಕಿಲ್

ಒಕ್ಕುವಿಕೆ.
< previous1234567891920Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App