ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234Next >

1. ಕನ್ನಡ ವರ್ಣಮಾಲೆಯ ಇಪ್ಪತ್ತೊಂದನೆಯ ಅಕ್ಷರ.

2. ಏಳು ಎಂಬ ಸಂಖ್ಯೆಯ ಸಂಕೇತ.

ಛಟೆ

1. ಸಮೂಹ.

2. ಪ್ರಕಾಶ.

ಛಡಾಳ

ಹೆಚ್ಚಳ.

ಛಡಾಳಿಸು

1. ಹೆಚ್ಚಾಗು.

2. ಪ್ರಜ್ವಲಿಸು.

3. ರಭಸಗೊಳ್ಳು.

4. ವಿರೋಧಿಸು.

ಛಡಿ

ತೆಳ್ಳಗಿರುವ ಉದ್ದವಾದ ಕೋಲು,- ಬೆತ್ತ.

ಛತ್ರ

1. (ಉಚಿತವಾಗಿ) ಊಟ, ವಸತಿ ಗಳನ್ನು ಒದಗಿಸುವ ಸ್ಥಳ.

2. ಕಲ್ಯಾಣಮಂದಿರ.

3. ಕೊಡೆ.

4. ಗೌರವಸೂಚಕವಾಗಿ ದೇವರಿಗೆ ಹಾಗೂ ರಾಜರಿಗೆ ಹಿಡಿಯುವ ಬಿಳಿಯ ಕೊಡೆ.

ಛತ್ರಪತಿ

1. ರಾಜ.

2. ಶಿವಾಜಿ ಮಹಾರಾಜನಿಗೆ ಅನ್ವಯಿಸುವ ಒಂದು ಬಿರುದು.

ಛತ್ರಭಂಗ

1. ಕೊಡೆಯು ಮುರಿದು ಬೀಳುವಿಕೆ.

2. ಅರಸೊತ್ತಿಗೆಯು ತಪ್ಪಿ ಹೋಗುವಿಕೆ.

ಛತ್ರಿ

1. ಕೊಡೆ.

2. ಕೊಡೆಯನ್ನು ಹೊಂದಿರುವವನು.

ಛಂದ

1. ಅಂದವಾದುದು.

2. ರೀತಿ.

3. ಸಂತೋಷ.

4. ಇಚ್ಛೆ.

5. ಛಂದಸ್ಸು.

6. ಇಪ್ಪತ್ತಾರು ಎಂಬ ಸಂಖ್ಯೆಯ ಸಂಕೇತ.

ಛದ

1. ಮುಸುಕು.

2. ಹಕ್ಕಿಗಳ ರೆಕ್ಕೆ.

3. ಎಲೆ.

ಛದನ

ಛದ.

ಛಂದಶ್ಶಾಸ್ತ್ರ

ಛಂದಸ್ಸನ್ನು ವಿವರಿಸುವ ಶಾಸ್ತ್ರ.

ಛಂದಸ್ಸು

1. ವೇದ.

2. ಇಚ್ಛೆ.

3. ಸ್ವೈರಾ ಚಾರ.

4. ಪದ್ಯರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ.

5. ಪದ್ಯರಚನೆಯ ನಿಯಮ.

ಛದಿ

1. (ಮನೆ ಮೊದಲಾದುವುಗಳ) ಮೇಲ್ಛಾವಣಿ.

2. ಮುಸುಕು.

ಛಂದೋಭಂಗ

ಒಂದು ಬಗೆಯ ಕಾವ್ಯ ದೋಷ.

ಛಂದೋವತಂಸ

ದೇಶೀಛಂದಸ್ಸಿಗೆ ಸೇರಿದ ಒಂದು ವೃತ್ತ.

ಛದ್ಮ

1. ಮುಸುಕು.

2. ವೇಷವನ್ನು ಮಾರ್ಪಡಿಸುವುದು.

3. ಮೋಸ.

4. ಕಾರಣ.

ಛದ್ಮನೆ

1. ಮುಸುಕು.

2. ಮೋಸ.

ಛನ್ನ

ಮುಚ್ಚಿದ.
< previous1234Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App