ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬಕ್ಕತ(ದ)ಲೆ

1. ಕೂದಲು ಉದುರಿ ಬೋಳಾದ ತಲೆ.

2. ಟೋಪಿ, ಪೇಟಮೊದಲಾದುವನ್ನು ಧರಿಸದಿರುವ ತಲೆ.

ಬಕ್ಕನೆತ್ತಿ

ಬಕ್ಕತಲೆ.

ಬಕ್ಕಂಬಯಲ್

1. ತೆರಪಾದ ಜಾಗ.

2. ಬರಿದು.

ಬಕ್ಕಬೋರಲು

ತಲೆಕೆಳಗು.

ಬಕ್ಕರಿ

ಜೋಳದ ರೊಟ್ಟಿ.

ಬಕ್ಕರೆ

1. ಮಡಕೆಯ ಚೂರು.

2. ಮುಚ್ಚಳ.

ಬಕ್ಕುಡಿ

1. ಆಶ್ಚರ್ಯ.

2. ಅಂಜಿಕೆ.

3. ದೈನ್ಯ.

4. ಕಾತರ.

5. ಚರ್ಚೆ.

6. ಒಂದು ಬಗೆಯ ಸಸ್ಯ.

ಬಕ್ಕುಡಿಗುಟ್ಟು

ಚರ್ಚಿಸು.

ಬಕ್ಕುಡೆಯ

ವಿತಂಡವಾದ ಮಾಡುವವನು.

ಬಕ್ಕೆ

1. ಸಿಹಿಯಾದುದು.

2. ಒಂದು ಬಗೆಯ ಹಲಸು.

ಬಕ್ಕೆವ(ಹ)ಲಸು

ಒಂದು ಬಗೆಯ ಹಲಸಿನ ಮರ ಮತ್ತು ಅದರ ಹಣ್ಣು.

ಬಕ್ಷಿ

ಅರಮನೆಯ ಮುಖ್ಯಾಧಿಕಾರಿ.

ಬಕ್ಷೀಸು

(ಮೆಚ್ಚುಗೆಯಿಂದ ಕೊಡುವ) ಬಹುಮಾನ.

ಬಖೈರು

ದೇಶಭಾಷೆಗಳಲ್ಲಿ ಗದ್ಯರೂಪವಾಗಿ ಬರೆದ ಐತಿಹಾಸಿಕ ವಿವರಗಳನ್ನೊಳಗೊಂಡ ಗ್ರಂಥ,- ಪುಸ್ತಕ.

ಬಂಗ

1. ಕಷ್ಟ.

2. ಅವಮಾನ.

3. ಭಿನ್ನವಾದುದು.

4. ವೃತ್ತಿ.

ಬಗಟು

1. ಕಾಲುಗಳನ್ನು ಅಗಲಿಸು.

2. ಪಾಲುಮಾಡು.

ಬಂಗಡೆ

ಒಂದು ಬಗೆಯ ಕಡಲ ಮೀನು.

ಬಗದ(ದಾ)ಳ

ಭಗಂದರ ಹುಣ್ಣು.

ಬಗನಿ

ತಾಳೆಜಾತಿಗೆ ಸೇರಿದ ಒಂದು ಬಗೆಯ ಮರ.

ಬಂಗರ

1. ಚಿನ್ನ.

2. ಒಂದು ಬಗೆಯ ಆಟದ ವಸ್ತು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App