ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬಚ್ಚೆವೋಗು

ವ್ಯರ್ಥವಾಗು.

ಬಂಜ

ನಿರ್ವೀರ್ಯನಾದವನು.

ಬಜಂತ್ರಿ

ಒಂದು ಬಗೆಯ ಚರ್ಮವಾದ್ಯ.

ಬಂಜರು

1. ಬೀಳುನೆಲ.

2. ವ್ಯರ್ಥವಾದುದು.

ಬಜಾಯಿಸು

1. ವಾದ್ಯವನ್ನು (ಜೋರಾಗಿ) ಬಾರಿಸು,- ನುಡಿಸು.

2. ಕಟ್ಟುನಿಟ್ಟಾಗಿಹೇಳು.

3. ಚಲಾಯಿಸು.

ಬಜಾರ(ರು)

ಪೇಟೆ.

ಬಜಾರಿ

ಕಳಪೆಯಾದ.

ಬಜಾರಿ

1. ಮಾನಗೆಟ್ಟವಳು.

2. ಜಗಳಗಂಟಿಯಾದ ಹೆಣ್ಣು.

ಬಜಾವಣೆ

ಚರ್ಮವಾದ್ಯ ಮೊದಲಾದುವನ್ನು ಬಾರಿಸುವಿಕೆ.

ಬಂಜೆ

1. ಗೊಡ್ಡು.

2. ವ್ಯರ್ಥ.

3. ಮಕ್ಕಳನ್ನು ಹಡೆಯದವಳು.

4. ಒಂದು ಬಗೆಯ ಸಸ್ಯ.

ಬಜೆ

ಉಪಯುಕ್ತ ವಾಸನೆಯುಳ್ಳ ಒಂದು ಬಗೆಯ ಸಸ್ಯ ಮತ್ತು ಅದರ ಬೇರು.

ಬಂಜೆಮಾಡು

ಹಾಳುಮಾಡು.

ಬಂಜೆವಡಿಸು

ವ್ಯರ್ಥಗೊಳಿಸು.

ಬಂಜೆವೊಱ್ತು

ವ್ಯರ್ಥವಾದ ಕಾಲ.

ಬಜ್ಜರ

1. ನವರತ್ನಗಳಲ್ಲಿ ಒಂದು.

2. ಇಂದ್ರನ ಆಯುಧ.

ಬಜ್ಜಿ

1. ಒಂದು ಬಗೆಯ ಮೇಲೋಗರ.

2. ಒಂದು ಬಗೆಯ ಕರಿದ ತಿಂಡಿ.

ಬಂಟ

1. ವೀರ.

2. ದಾಸ.

3. ಹೊಗಳುವವನು.

4. ಸ್ತುತಿ ಪಾಠಕ.

5. ಶ್ರೇಷ್ಠಜಾತಿಯ ಕುದುರೆ.

ಬಂಟತನ

1. ಪರಾಕ್ರಮ.

2. ದಾಸ್ಯತೆ.

ಬಟವಾಡೆ

ಸಂಬಳ, ಕೂಲಿ ಮುಂತಾದು ವನ್ನು ಹಂಚುವುದು,- ವಿತರಿಸುವುದು.

ಬಟಾಟೆ

ಆಲೂಗಡ್ಡೆ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App