ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬಟಾಣಿ

(ಕಡಲೆಯ ಜಾತಿಗೆ ಸೇರಿದ) ಒಂದು ಬಗೆಯ ದ್ವಿದಳಧಾನ್ಯ.

ಬಂಟು

1. ಪರಾಕ್ರಮ.

2. ಸೇವೆ.

3. ಸೈನ್ಯ.

4. ಸೇವಕ.

ಬಟು

1. ಗುಂಡಾಗಿರುವ ವಸ್ತು.

2. ವಟು.

ಬಂಟುಗೆಡು

ಶೌರ್ಯಗುಂದು.

ಬಂಟುತನ

ಪರಾಕ್ರಮ.

ಬಟುವು

ಬಟು.

ಬಟ್ಟ

ವೃತ್ತ.

ಬಟ್ಟಗಡಲೆ

ದುಂಡಗಿರುವ ಒಂದು ಬಗೆಯ ಕಡಲೆ.

ಬಟ್ಟಗೆಯ್ದು

ಗುಂಡಾಗಿ ಇರುವ ಆಯುಧ.

ಬಟ್ಟದೆನೆ

ವೃತ್ತಾಕಾರವಾದ ಕೋಟೆಯ ತೆನೆ.

ಬಟ್ಟಬಯಲ್(ಲು)

ಶೂನ್ಯವಾದ ಸ್ಥಳ.

ಬಟ್ಟಮೊಗ

ದುಂಡಗೆ ಇರುವ ಮುಖ.

ಬಟ್ಟಲು

1. ಬಟ್ಟಲ್.

2. ತಟ್ಟೆ.

3. ಮಂಡಿಯ ಚಿಪ್ಪು.

ಬಟ್ಟಲ್

ಗುಂಡಗಿರುವ ಸಣ್ಣಪಾತ್ರೆ.

ಬಟ್ಟವಾಲು

ಕಾಯಿಸಿ ಗಟ್ಟಿಯಾದ ಹಾಲು.

ಬಟ್ಟವೆಱೆ

ಗುಂಡಾಗಿರುವ ಚಂದ್ರ.

ಬಟ್ಟಳೆ

ಗಟ್ಟಿಮಜ್ಜಿಗೆ.

ಬಟ್ಟಾಡು

1. ಚೆಂಡು, ಗೋಲಿ, ಬಚ್ಚ ಮೊದಲಾದುವುಗಳಿಂದ ಆಟವಾಡು.

2. (ಕಣ್ಣೀರು) ತೊಟ್ಟಿಕ್ಕು.

ಬಟ್ಟಿ

1. ಉದರ.

2. ಒಂದು ಬಗೆಯ ಹೊಟ್ಟೆಯ ರೋಗ.

3. ಧಾನ್ಯಗಳನ್ನು ಅಳೆಯುವ ಒಂದು ಅಳತೆ,- ಪರಿಮಾಣ.

4. ಮದ್ಯ ಮೊದಲಾದುವುಗಳ ಅರ್ಕವನ್ನು ತಯಾರಿಸಲು ಬಳಸುವ ಹಬೆಯ ಸಾಧನ.

5. ಕಡಲೆ, ಪುರಿ, ಅವಲಕ್ಕಿ ಮುಂತಾದುವನ್ನು ಹುರಿ ಯುವ ಸ್ಥಳ.

ಬಟ್ಟಿಗೆ

ಬಣ್ಣ ಬಳಿಯುವ ಕುಂಚ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App