ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬ್ರಹ್ಮಜ್ಞಾನಿ

ಬ್ರಹ್ಮಜ್ಞಾನವನ್ನು ಪಡೆದವನು.

ಬ್ರಹ್ಮದಂಡ

1. ಬ್ರಾಹ್ಮಣ ಶಾಪ.

2. ಬ್ರಾಹ್ಮಣನಿಗೆ ಅರ್ಪಿಸುವ ಧನರೂಪವಾದ ಗೌರವ.

3. ಶಿವ.

4. ಋಷಿಗಳ ಕೈಯಲ್ಲಿರುವ ಯೋಗದಂಡ.

5. ಬ್ರಹ್ಮಾಸ್ತ್ರ.

6. ಬೆನ್ನೆಲುಬು.

ಬ್ರಹ್ಮದಾ(ದೇ)ಯ

ವೇದಾಧ್ಯಯನವು ಪೂರ್ಣವಾದ ನಂತರ ರಾಜನು ಬ್ರಾಹ್ಮಣನಿಗೆ ಕೊಡುತ್ತಿದ್ದ ಧನ ಮತ್ತು ಭೂರೂಪವಾದ ಆಸ್ತಿ.

ಬ್ರಹ್ಮದಾರು

ಒಂದು ಬಗೆಯ ಮರ.

ಬ್ರಹ್ಮನಾಡಿ

ಸುಷುಮ್ನಾನಾಡಿಯ ಮಧ್ಯ ಭಾಗ.

ಬ್ರಹ್ಮಪುರ(ರಿ)

1. ಬ್ರಹ್ಮನ ನಿವಾಸಸ್ಥಾನ.

2. ಬ್ರಾಹ್ಮಣರ ಕೇರಿ.

ಬ್ರಹ್ಮಯಜ್ಞ

1. ಪಂಚಮಹಾಯಜ್ಞಗಳಲ್ಲಿ ಒಂದು.

2. ವೇದಗಳನ್ನು ಹೇಳಿ ಕೊಡುವಿಕೆ.

ಬ್ರಹ್ಮರಂಧ್ರ

1. ನೆತ್ತಿಯ ಮಧ್ಯದಲ್ಲಿರುವ ಸೂಕ್ಷ್ಮವಾದ ರಂಧ್ರ.

2. ನಡುನೆತ್ತಿ.

ಬ್ರಹ್ಮರಾಕ್ಷಸ

ನೀಚಬ್ರಾಹ್ಮಣನಿಗೆ ಮರಣಾ ನಂತರ ಬರುವುದೆನ್ನಲಾದ ಪಿಶಾಚಜನ್ಮ ಮತ್ತು ಹಾಗೆ ಜನ್ಮತಾಳಿದವನು.

ಬ್ರಹ್ಮರ್ಷಿ

ಬ್ರಹ್ಮವನ್ನು ಅರಿತು ಆ ತಿಳಿವಿನಿಂದ ಋಷಿಯಾದವನು.

ಬ್ರಹ್ಮಲಿಖಿತ

ಹಣೆಯ ಬರಹ.

ಬ್ರಹ್ಮಲಿಪಿ

1. ಬ್ರಹ್ಮನಿಂದ ಬರೆಯಲ್ಪ ಟ್ಟುದು.

2. ಓದುವುದಕ್ಕೆ ಸಾಧ್ಯವಿಲ್ಲದಂತಿರುವ ಬರೆಹ.

ಬ್ರಹ್ಮವಿದ್ಯೆ

1. ವೇದಾಂತವಿದ್ಯೆ.

2. ಗಹನ ವಾದ ವಿದ್ಯೆ.

ಬ್ರಹ್ಮಸಂಕಲ್ಪ

ವಿಧಿಯ ನಿಯಮ.

ಬ್ರಹ್ಮಸೂತ್ರ

1. ಜನಿವಾರ.

2. ಬಾದರಾಯಣ ಮುನಿಯು ರಚಿಸಿದ ವೇದಾಂತಸೂತ್ರ.

ಬ್ರಹ್ಮಹತ್ಯೆ

ಪಂಚಮಹಾಪಾತಕಗಳಲ್ಲಿ ಒಂದು.

ಬ್ರಹ್ಮಾಂಡ

1. ವಿಶ್ವ.

2. ಅತ್ಯಧಿಕ ವಾದುದು.

ಬ್ರಹ್ಮಾಣಿ

1. ಬ್ರಹ್ಮನ ಹೆಂಡತಿ.

2. ದುರ್ಗಾದೇವತೆ.

3. ರೇಣುಕೆಯೆಂಬ ಸುಗಂಧದ್ರವ್ಯ.

4. ಒಂದು ಬಗೆಯಹಿತ್ತಾಳೆ.

ಬ್ರಹ್ಮಾದಾಯ

ಬ್ರಾಹ್ಮಣನಿಗೆ ದಾನವಾಗಿ ಕೊಟ್ಟ ಭೂಮಿ.

ಬ್ರಹ್ಮಾನಂದ

1. ಬ್ರಹ್ಮಸಾಕ್ಷಾತ್ಕಾರದಿಂದ ಉಂಟಾಗುವ ಆನಂದ.

2. ನಿದ್ರೆಯಲ್ಲಿ ಮೈಮರೆತು ನಿರ್ವಿಕಾರವಾಗಿರುವ ಸುಖ.

3. ಅತಿಶಯವಾದ ಸಂತೋಷ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App