ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶಕುತಿ

1. ಕಸುವು.

2. ಒಂದು ಬಗೆಯ ಆಯುಧ.

3. ಶಕ್ತಿದೇವತೆ.

ಶಕುನ

1. ಪಕ್ಷಿ.

2. ಶುಭಾಶುಭ ಗಳನ್ನು ಸೂಚಿಸುವ ನಿಮಿತ್ತ.

3. ಸುಳಿವು.

4. ನಿಮಿತ್ತಗಳ ಮೂಲಕ ಮುಂದಿನ ಆಗುಹೋಗುಗಳನ್ನು ತಿಳಿಸುವ ಶಾಸ್ತ್ರ.

ಶಕುನಿ

1. ಶಕುಂತ.

2. ಗುಂಡು ಮುಳುಕನ ಹಕ್ಕಿ.

3. ಕೌರವರ ಸೋದರ ಮಾವ.

4. ಭೇದೋಪಾಯ ನಿಪುಣ.

5. ಮೋಸಗಾರ.

ಶಕುನಿಗ

ಶಕುನಗಳ ಸಹಾಯದಿಂದ ಭವಿಷ್ಯವನ್ನು ಹೇಳುವವನು.

ಶಕುಲ

1. ಒಂದು ಬಗೆಯ ಸಣ್ಣ ಮೀನು.

2. ಮೀನು.

ಶಂಕುಸ್ಥಾಪನೆ

ಕಟ್ಟಡಗಳನ್ನು ಕಟ್ಟುವುದಕ್ಕೆ ಮುಂಚೆ ಖದಿರ ಮೊದಲಾದ ಮರಗಳಿಂದ ಮಾಡಿದ ಗೂಟ ಅಥವಾ ಅಡಿಗಲ್ಲನ್ನು ಇಡುವ ಒಂದು ಸಾಂಪ್ರದಾಯಿಕ ವಿಧಿ,- ಸಮಾರಂಭ.

ಶಕುಳ

ಒಂದು ಬಗೆಯ ಸಣ್ಣಮೀನು.

ಶಂಕೆ

1. ಸಂದೇಹ.

2. ಅಳುಕು.

3. ಅಂಜಿಕೆ.

4. ಭರವಸೆ.

5. ವಾದದಲ್ಲಿ ಎತ್ತುವ ಆಕ್ಷೇಪ.

6. (ದೆವ್ವ, ಪೀಡೆ ಮೊದಲಾದುವುಗಳ ಸೋಂಕಿನಿಂದುಂಟಾ ಗುವ) ಮನೋವೈಕಲ್ಯ.

7. ದೇಹದಲ್ಲಿ ಉಂಟಾಗುವ ಪ್ರಾಕೃತಿಕ ವಿಸರ್ಜನೆಯ ಪ್ರೇರಣೆ,- ಒತ್ತಡ.

ಶಕೆ

ನಿರ್ದಿಷ್ಟವಾದ ಕಾಲದಿಂದ ಆರಂಭಿಸುವ ಕಾಲಗಣನೆ.

ಶಕ್ಕುಲಿ

ಚಕ್ಕುಲಿ.

ಶಕ್ತ

ಕಸುವುಳ್ಳ.

ಶಕ್ತ

1. ಅರ್ಹನಾದವನು.

2. ಅರ್ಹವಾದುದು.

3. ದಕ್ಷತೆ.

4. ಶೂರ.

ಶಕ್ತಿ

1. ಕಸುವು.

2. ಪಾರ್ವತಿ.

3. ಒಂದು ಬಗೆಯ ಆಯುಧ.

4. ಹೆಣ್ಣು.

5. ಕತ್ತಿ.

6. ಬಲಾಢ್ಯ.

7. ಕವಿತಾರಚನೆಗೆ ಮೂಲಕಾರಣವಾದ ಪ್ರತಿಭೆ.

ಶಕ್ತಿಗುಂದು

ನಿತ್ರಾಣವಾಗು.

ಶಕ್ತಿತ್ರಯ

ಅರಸನಿಗಿರಬೇಕಾದ ಪ್ರಭು, ಮಂತ್ರ ಮತ್ತು ಉತ್ಸಾಹಗಳೆಂಬ ಮೂರು ಬಗೆಯ ಬಲಗಳು.

ಶಕ್ತ್ಯಾನುಸಾರ

ಶಕ್ತಿಗೆ ಸಾಧ್ಯವಾಗುವ ಮಟ್ಟಿನ.

ಶಕ್ಯ

1. ಸಾಧ್ಯವಾದುದು.

2. ಒಂದು ನಿರ್ದಿಷ್ಟವಾದ ಶಬ್ದದಿಂದ ಅಭಿವ್ಯಕ್ತಿಗೊಂಡ ಅರ್ಥ.

ಶಕ್ಯ

ಸಾಧ್ಯವಾದ.

ಶಕ್ರ

ದೇವತೆಗಳ ಅಧಿಪತಿ.

ಶಕ್ರಚಾಪ

ಕಾಮನ ಬಿಲ್ಲು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App