ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶ್ವಶುರ

ಹೆಂಡತಿಯ ಅಥವಾ ಗಂಡನ ತಂದೆ.

ಶ್ವಶ್ರು

ಹೆಂಡತಿಯ ಅಥವಾ ಗಂಡನ ತಾಯಿ.

ಶ್ವಸನ

1. ಉಸಿರು.

2. ಉಸಿರಾಡುವಿಕೆ.

3. ಗಾಳಿ.

4. ಶ್ವಾಸರೋಗ.

ಶ್ವಸಿತ

ಉಸಿರು.

ಶ್ವಸಿತ

ಉಸಿರಾಡಿದ.

ಶ್ವಾನ

ನಾಯಿ.

ಶ್ವಾಪದ

1. ಕ್ರೂರವಾದುದು.

2. ಹುಲಿ.

ಶ್ವಾಸ

1. ಉಸಿರು.

2. ಉಸಿರು ಬಿಡುವುದು.

3. ಉಬ್ಬಸ.

ಶ್ವಾಸಕೋಶ

ಉಸಿರಾಟಕ್ಕೆ ಸಹಕಾರಿಯಾದ ಅಂಗ.

ಶ್ವಿತ್ರ

ಚರ್ಮವು ಬಿಳುಪಾಗುವ ಒಂದು ಬಗೆಯ ರೋಗ.

ಶ್ವೇತ

ಬಿಳಿಯ ಬಣ್ಣದ.

ಶ್ವೇತ

1. ಬಿಳುಪು.

2. ಬೆಳ್ಳಿ.

3. ಬಿಳಿಯ ಬಣ್ಣದ ಕುದುರೆ.

ಶ್ವೇತಚ್ಛತ್ರ

1. (ಅರಸರಿಗಾಗಲಿ, ದೇವತಾ ವಿಗ್ರಹಗಳಿಗಾಗಲಿ ಹಿಡಿಯುವ) ಬಿಳಿಯ ಕೊಡೆ.

2. ನೆಲೆ.

ಶ್ವೇತಪತ್ರ

ವಿವರಣೆಯೊಡನೆ ಇದ್ದುದನ್ನು ಇದ್ದ ಹಾಗೆ ಹೇಳುವ ವರದಿ.

ಶ್ವೇತವಾಹನ

1. ಬಿಳಿಯ ಕುದುರೆಗಳನ್ನು ಹೊಂದಿರುವವನು.

2. ಚಂದ್ರ.

3. ಅರ್ಜುನ.

ಶ್ವೇತಾಂಗ

ಚರ್ಮವು ಬೆಳ್ಳಗಾಗುವ ರೋಗವಿರುವವನು.

ಶ್ವೇತಾತಪತ್ರ

ಬಿಳಿಯ ಕೊಡೆ.

ಶ್ವೇತಾದ್ರಿ

ಕೈಲಾಸ.

ಶ್ವೇತಾಂಬರ

1. ಬಿಳಿಯ ಬಣ್ಣದ ಬಟ್ಟೆ.

2. ಜೈನರಲ್ಲಿ ಒಂದು ಪಂಗಡ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App