ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶಂಬರಾರಿ

ಕಾಮ.

ಶಬರಿ

1. ಬೇಡರ ಹೆಂಗಸು.

2. ರಾಮನ ಭಕ್ತೆಯಾದ ಒಬ್ಬ ಬೇಡರ ತಪಸ್ವಿನಿ.

ಶಬಲ

1. ಅನೇಕ ಬಣ್ಣ.

2. ಚುಕ್ಕೆಗಳಿಂದ ಕೂಡಿದುದು.

ಶಬಲ

ಅನೇಕ ಬಣ್ಣಗಳಿಂದ ಕೂಡಿರುವ.

ಶಬಳ

1. ಅನೇಕ ಬಣ್ಣ.

2. ಬೆರಕೆ.

ಶಬ್ದ

1. ಸದ್ದು.

2. ವ್ಯಾಕರಣದಲ್ಲಿ ಅಕ್ಷರಗಳ ಗುಂಪು.

ಶಬ್ದಕೋಶ

ನಿಘಂಟು.

ಶಬ್ದಚಿತ್ರ

1. (ಬಾನುಲಿಯಲ್ಲಿ) ಬಿತ್ತರಿಸುವ, ಶಬ್ದಗಳಿಂದ ಕೂಡಿದ ನಾಟಕ ಮುಂತಾದುವು.

2. ಶಬ್ದಾಲಂಕಾರ.

ಶಬ್ದಜ್ಞ

ವ್ಯಾಕರಣವನ್ನು ತಿಳಿದವನು.

ಶಬ್ದರೂಪ

1. ವ್ಯಾಕರಣಬದ್ಧವಾದ ಪದದ ರೂಪ.

2. ಶಬ್ದಪ್ರಧಾನವಾದುದು.

ಶಬ್ದವಿದ್ಯೆ

ವ್ಯಾಕರಣಶಾಸ್ತ್ರ.

ಶಬ್ದವೇದಿ

ಶಬ್ದಜ್ಞ.

ಶಬ್ದವೇಧಿ

1. ಕಣ್ಣಿಗೆ ಕಾಣದಿರುವ ವಸ್ತುವಿನ ಕಡೆಗೆ ಕೇವಲ ಶಬ್ದವನ್ನು ಅನುಸರಿಸಿ ಬಾಣವನ್ನು ಪ್ರಯೋಗಿಸುವಿಕೆ,- ಶಬ್ದಗ್ರಹಣ ಮಾತ್ರದಿಂದ ಗುರಿ ಹಿಡಿದು ಹೊಡೆಯುವುದು.

2. ಶಬ್ದಗ್ರಹಣಮಾತ್ರದಿಂದ ಬಾಣ ಪ್ರಯೋಗ ಮಾಡುವವನು.

3. ಒಂದು ಬಗೆಯ ಬಾಣ.

4. ಬಿಲ್ಲುಗಾರ.

5. ಯೋಧ.

6. ದ±

ಶಬ್ದಸಂಗ್ರಹ

ಗ್ರಂಥಗಳಿಂದ ಪದಗಳನ್ನು ಆಯ್ದು ಶೇಖರಿಸುವಿಕೆ.

ಶಬ್ದಸಂಪತ್ತು

ಪದಗಳ ವಿಪುಲತೆ,- ಆಧಿಕ್ಯ.

ಶಬ್ದಾಲಂ(ಳಂ)ಕಾರ

ಅನುಪ್ರಾಸ, ಯಮಕ ಮೊದಲಾದ ಶಬ್ದಪ್ರಧಾನವಾದ ಅಲಂಕಾರ.

ಶಂಭು

1. ಸುಖ ಮತ್ತು ಸಂಪತ್ತನ್ನು ಹೊಂದಿರುವವನು.

2. ಶಿವ.

3. ಬ್ರಹ್ಮ.

4. ವಿಷ್ಣು.

5. ಯುಧಿಷ್ಠಿರ.

6. ಅರ್ಹಂತ.

ಶಮ

1. ನೆಮ್ಮದಿ.

2. ಮನೋನಿಗ್ರಹ.

ಶಮನ

1. ಶಾಂತಗೊಳಿಸುವುದು.

2. ನಿವಾರಣೆ.

3. ನೋವು, ರೋಗ ಮೊದಲಾದುವನ್ನು ತಗ್ಗಿಸುವುದು,- ಕಡಮೆ ಮಾಡುವುದು.

4. ನಾಶಗೊಳಿಸುವುದು.

5. (ಯಜ್ಞಯಾಗಾದಿಗಳಲ್ಲಿ ಪ್ರಾಣಿಗಳನ್ನು) ಕೊಲ್ಲುವಿಕೆ.

6. ದಕ್ಷಿಣ ದಿಕ್ಕಿನ ಅಧಿಪತಿ.

7. ಮೇಲುಹೊದಿಕೆ.

ಶಮಲ

1. ಮಲ.

2. ದೋಷ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App