ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶಮಿ

1. ಶಾಂತಸ್ವಭಾವದವನು.

2. ಬನ್ನಿಯ ಮರ.

3. ಕಾಳುಗಳ ಅಥವಾ ಧಾನ್ಯಗಳ ಮೇಲಿನ ಸಿಪ್ಪೆ,- ಹೊಟ್ಟು.

4. ಕಾಯಿ.

5. ಕರಿಯ ಜಾಲಿಮರ.

ಶಮಿ

ನೆಮ್ಮದಿಯಿಂದ ಕೂಡಿದ.

ಶಮಿಸು

1. ಶಾಂತಗೊಳಿಸು.

2. ಲಯವಾಗು.

ಶಮೀಪೂಜೆ

(ವಿಜಯದಶಮಿಯ ದಿನ) ಬನ್ನಿಯ ಮರಕ್ಕೆ ಮಾಡುವ ಪೂಜೆ,- ಅರ್ಚನೆ.

ಶಮೆ

ಮನೋನಿಗ್ರಹ.

ಶಯನ

1. ಮಲಗಿರುವಿಕೆ.

2. ನಿದ್ರೆ.

3. ಹಾಸುಗೆ.

4. ಮಂಚ.

5. ಕೂಟ.

ಶಯನಸದನ

ಮಲಗುವ ಕೋಣೆ.

ಶಯನಿಸು

ಮಲಗು.

ಶಯನೋತ್ಸವ

ದೇವರ ಮೂರ್ತಿಯನ್ನು ಮಲಗಿಸುವ ಒಂದು ಪೂಜಾವಿಧಾನ.

ಶಯು

ಒಂದು ಬಗೆಯ ಹಾವು.

ಶಯ್ಯಾಗೃಹ

ಶಯನಸದನ.

ಶಯ್ಯೆ

1. ಹಾಸುಗೆ.

2. ನಿದ್ರೆ.

3. (ಕಾವ್ಯ ಮೀಮಾಂಸೆಯಲ್ಲಿ) ಶಬ್ದ ಅಥವಾ ಪದಗಳ ಜೋಡಣೆ.

ಶರ

1. ಬಾಣ.

2. ಒಂದು ಬಗೆಯ ಹುಲ್ಲು.

3. ಹಾಲಿನ ಕೆನೆ.

4. ನೀರು.

5. ಸರೋವರ.

6. ತೆನೆಯ ಕಾಳಿನ ಮೇಲಿರುವ ಸುಂಕು,- ಮುಳ್ಳು.

7. ಐದು ಎಂಬ ಸಂಖ್ಯೆಯ ಸಂಕೇತ.

8. ಕನ್ನಡದ ಆರು ಬಗೆಯ ಷಟ್ಪದಿಗಳಲ್ಲಿ ಒಂದು.

9. (ಛಂದಸ್ಸಿನಲ್ಲಿ) ರುದ್ರಗಣ.

10. ಚಿತ್ರಕಾವ್ಯದ ಒಂದು ಬಗೆ.

ಶರಚೌಪದಿ

(ಛಂದಸ್ಸಿನಲ್ಲಿ) ನಾಲ್ಕು ಪಾದಗಳಾಗಿ ಮಾರ್ಪಟ್ಟ ಶರಷಟ್ಪದಿ.

ಶರಚ್ಚಂದ್ರ

ಶರದ್ರುತುವಿನ ಚಂದ್ರ.

ಶರಜನ್ಮ

ಲಾಳದ ಕಡ್ಡಿಯ ಪೊದರಿನಲ್ಲಿ ಹುಟ್ಟಿದವನು.

ಶರಣ

1. ಆಶ್ರಯ.

2. ಕಾಪಾಡುವವನು.

3. ಮನೆ.

4. ದೇವರಿಗೆ ತನ್ನನ್ನು ಸಮರ್ಪಿಸಿಕೊಂಡವನು.

5. ಶಿವಭಕ್ತ.

ಶರಣಸ್ಥಲ

ಷಟ್ಸ್ಥಲಗಳಲ್ಲಿ ಐದನೆಯದು.

ಶರಣಾಗತ

ರಕ್ಷಣೆ ಪಡೆಯಲು ಬಂದ ವ್ಯಕ್ತಿ.

ಶರಣಾಗತ

ರಕ್ಷಣೆಗಾಗಿ ಬಂದ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App