ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಹಚ(ಚ್ಚ)ಡ

1. ದುಪ್ಪಟಿ.

2. ಬಟ್ಟೆ.

ಹಂಚಿ

1. ಒಂದು ಬಗೆಯ ಹುಲ್ಲು.

2. ಪಗಡೆಯಾಟದಲ್ಲಿ ಬೀಳುವ ಐದರ ಗರ.

ಹಂಚಿಕಡ್ಡಿ

1. ಹಂಚಿಯ ಹುಲ್ಲಿನ ಕಡ್ಡಿ.

2. ಕೆಲಸಕ್ಕೆ ಬಾರದುದು.

ಹಂಚಿಕೆ

1. ಪಾಲುಮಾಡುವಿಕೆ.

2. ಯುಕ್ತಿ.

3. ಯೋಜನೆ.

ಹಂಚು

ಪಾಲುಮಾಡು.

ಹಂಚು

1. ಮೇಲ್ಛಾವಣಿಗೆ ಹೊದಿಸಲು ಬಳಸುವ ಮಣ್ಣಿನ ಚದುರಬಿಲ್ಲೆ.

2. ಮಡಕೆಯ ಚೂರು.

3. ಕಾವಲಿ.

4. ತುಂಡು.

ಹಚ್ಚಗೆ

1. ಹಸಿರಾಗಿ.

2. ಆರಾಮವಾಗಿ.

ಹಚ್ಚಡಿಸು

1. ಹೊದಿಸು.

2. ಹಾಸು.

ಹಚ್ಚನೆಯ

ಹಸಿರು ಬಣ್ಣವುಳ್ಳ.

ಹಚ್ಚವಡಿಸು

ಹಾಸು.

ಹಚ್ಚಹಸಿರು

ಅಚ್ಚ ಹಸಿರಾದ ಬಣ್ಣ.

ಹಚ್ಚಹಸುಳೆ

ಎಳೆಯ ಮಗು.

ಹಚ್ಚಿಡು

ಉರಿಯುವಂತೆ ಮಾಡು.

ಹಚ್ಚಿಸು

1. ಕತ್ತರಿಸು.

2. (ದೀಪ, ಉರಿ ಮುಂತಾದುವನ್ನು) ಹೊತ್ತಿಸು.

3. ಬಳಿಸು.

4. (ಸಸ್ಯಗಳನ್ನು) ನೆಡಿಸು.

ಹಚ್ಚು

1. ತೊಡಗಿಸು.

2. ಬಳಿದುಕೊಳ್ಳು.

3. (ದೀಪವನ್ನು) ಅಂಟಿಸು.

4. ಬಳಿ.

5. (ಸಸಿಗಳನ್ನು) ನೆಡು.

6. ಆರಂಭಿಸು.

7. (ತರಕಾರಿಗಳನ್ನು) ಹೋಳುಮಾಡು.

8. ನೋಂದಾಯಿಸು.

ಹಚ್ಚೆ

ಮನುಷ್ಯರ ವಿವಿಧ ಅಂಗಗಳ ಮೇಲೆ ಅಲಂಕಾರಕ್ಕಾಗಿ ಚಿತ್ರ ಬರೆದು, ಹಸುರುಬಣ್ಣ ತುಂಬಿ ಚುಚ್ಚುವುದು ಮತ್ತು ಹಾಗೆ ಚುಚ್ಚಿ ಆದ ಗುರುತು.

ಹಂಜಕ್ಕಿ

1. ಹಾಲು ತುಂಬಿಕೊಂಡಿರುವ ಅಕ್ಕಿ.

2. ಅರ್ಧ ಬೆಂದ ಅಕ್ಕಿ.

ಹಂಜರ

1. ಹಕ್ಕಿ ಅಥವಾ ಮೃಗಗಳನ್ನು ಕೂಡಿಡುವ ಸಾಧನ.

2. ತಡಿಕೆ.

3. ಮುಸುಕು.

4. ಮನೆಯ ಮೇಲಿನ ಹುಲ್ಲುಹೊದಿಕೆ,- ಛಾವಣಿ,- ಸೂರು.

ಹಂಜರಕೂ(ಗೂ)ಳಿ

(ಮೀನು ಹಿಡಿಯಲು ಉಪಯೋಗಿಸುವ) ಸೀಳಿದ ಬಿದಿರಿನಿಂದಮಾಡಿದ ಬುಟ್ಟಿ.

ಹಂಜರಿಸು

1. ಹೆಣೆ.

2. ಹರಡು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App