ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಅಂತಶ್ಚಕ್ಷು

ಒಳಗಣ್ಣು.

ಅಂತಸ್ತು

1. ಒಂದರ ಮೇಲೆ ಒಂದರಂತೆ ಅಳವಟ್ಟಿರುವ ಶ್ರೇಣಿ.

2. ಮಹಡಿ.

3. ಹಂತ.

ಅಂತಿಕ

1. ಹತ್ತಿರ.

2. ಕೊನೆ.

ಅಂತಿಮ

ಕಡೆಯ.

ಅಂತು

1. ಕೊನೆ.

2. ಒಳಗುಟ್ಟು.

ಅಂತು

1. ಹಾಗೆ.

2. ಒಟ್ಟಿನಲ್ಲಿ.

ಅಂತುಟು

ಹಾಗೆ.

ಅಂತುಟು

ಅಷ್ಟು.

ಅಂತೆ

1. ಹಾಗೆ.

2. ಹಾಗೆಯೇ.

ಅಂತೇವಾಸಿ

ಗುರುವಿನ ಸಮೀಪದಲ್ಲಿ ವಾಸ ಮಾಡುವ ಶಿಷ್ಯ.

ಅಂತ್ಯ

ಕಡೆಯ.

ಅಂತ್ಯ

1. ಕಡೆ.

2. ಸಾವು.

3. ಪ್ರಳಯ.

ಅಂತ್ಯಕ್ರಿಯೆ

ಸತ್ತವರಿಗೆ ಮಾಡುವ ಸಂಸ್ಕಾರ ಕಾರ್ಯ.

ಅಂತ್ಯಜ

1. ಶೂದ್ರ.

2. ಚಂಡಾಲ.

ಅಂತ್ಯಪ್ರಾಸ

ಪದ್ಯದ ಪಾದಗಳ ಕೊನೆಯಲ್ಲಿ ಬರುವ ಪ್ರಾಸ.

ಅಂತ್ಯಸಂಸ್ಕಾರ

ಅಂತ್ಯಕ್ರಿಯೆ.

ಅಂತ್ಯಾಕ್ಷರಿ

ಒಬ್ಬರು ಹೇಳಿದ ಪದ್ಯದ ಅಥವಾ ಪದದ ಕಡೆಯ ಅಕ್ಷರದಿಂದ ಮತ್ತೊಬ್ಬರು ಮುಂದಿನ ಪದ್ಯ ಅಥವಾ ಪದವನ್ನು ಆರಂಭಿಸಿ ಹೇಳುವ ಒಂದು ಸ್ಪರ್ಧೆ.

ಅಂತ್ರ

ಕರುಳು.

ಅಂತ್ರವೃದ್ಧಿ

ಕರುಳು ಕೆಳಕ್ಕೆ ಇಳಿಬೀಳುವ ಒಂದು ರೋಗ.

ಅಂದ

1. ಚೆಲುವು.

2. ರೀತಿ.

3. ಉದ್ದೇಶ.

4. ಇರುವ ವಿಷಯ.

5. ಸ್ವಭಾವ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App