ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಅಂತರಶಿಸ್ತೀಯ

ಒಳಶಿಸ್ತಿನಿಂದ ಕೂಡಿದ.

ಅಂತರಾತ್ಮ

1. ಜೀವಾತ್ಮ.

2. ಪರಮಾತ್ಮ.

ಅಂತರಾಯ

ಅಡೆತಡೆ.

ಅಂತರಾಳ

1. ನಡುವಣ ಜಾಗ.

2. ಒಳಭಾಗ.

3. ಅಂತರಂಗದ ಭಾವ.

ಅಂತರಿಕ್ಷ

1. ಆಕಾಶ.

2. ಭೂಮಿಗೂ ಆಕಾಶಕ್ಕೂ ನಡುವಣ ಪ್ರದೇಶ.

3. ನಿಲುಕದಷ್ಟು ಎತ್ತರ.

ಅಂತರಿಸು

1. ನಿಂತುಹೋಗು.

2. ಮರೆ ಯಾಗು.

3. ಒಳಕ್ಕೆ ಬರು.

4. ಭೇದಿಸು.

5. ಬಿಡು.

6. ತಡಮಾಡು.

7. ನಷ್ಟವಾಗು.

8. ಸಾಯು.

9. ನಡುವೆ ಜಾಗವನ್ನು ಬಿಡು – ಅಂತರಬಿಡು.

10.ಮರೆಮಾಡು.

11.ದೂರ ಸರಿ.

12.ಆಶ್ರಯಿಸು.

ಅಂತರೀಕ್ಷಣೆ

ಒಳಹೊಕ್ಕು ನೋಡುವುದು.

ಅಂತರೀಪ

ನೀರು ಸುತ್ತುವರಿದ ನಡುಗಡ್ಡೆ.

ಅಂತರೀಯ

1. ಒಳ ಉಡುಪು.

2. ನಡುವಿನಿಂದ ಕೆಳಕ್ಕೆ ಉಡುವ ವಸ್ತ್ರ.

ಅಂತರ್ಗತ

ಒಳಸೇರಿದ.

ಅಂತರ್ಗತ

ಮನಸ್ಸಿನ ಒಳಗಡೆ.

ಅಂತರ್ಗೃಹ

1. ಮನೆಯ ಒಳಭಾಗ.

2. ನೆಲಮಾಳಿಗೆ.

ಅಂತರ್ಜಾತೀಯ

ಬೇರೆ ಬೇರೆ ಜಾತಿಗಳ ನಡುವಣ.

ಅಂತರ್ದೇಶೀಯ ಪತ್ರ

ಒಂದು ದೇಶದ ಎಲ್ಲೆಯೊಳಗಿನ ಸ್ಥಳಗಳಿಗೆ ಮಾತ್ರ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಂಚೆಯ ಮೂಲಕ ಕಳುಹಿಸಬಹುದಾದ ಪತ್ರ.

ಅಂತರ್ಧಾನ

ಮಾಯವಾಗುವಿಕೆ.

ಅಂತರ್ಯಾಮಿ

ಅಂತರಂಗವನ್ನು ನಿಯಾಮಿಸತಕ್ಕವನು.

ಅಂತರ್ರಾಷ್ಟ್ರೀಯ

ಬೇರೆ ಬೇರೆ ರಾಷ್ಟ್ರಗಳಿಗೆ ಪರಸ್ಪರವಾಗಿ ಸಂಬಂಧಿಸಿದ.

ಅಂತರ್ವತ್ನಿ

ಬಸುರಿಯಾದ ಹೆಂಗಸು.

ಅಂತರ್ವಾಣಿ

1. ಶಾಸ್ತ್ರಗಳನ್ನು ಚೆನ್ನಾಗಿ ತಿಳಿದವನು.

2. ಅಂತರಾತ್ಮನ ಧ್ವನಿ.

ಅಂತವುರ

ಅಂತಃಪುರ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App