ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894142Next >

ನಿರ್ದೇಶಕ ಅವ್ಯಯ (ಕಾವೇರಿಯಿಂದಂ ಆ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್: ಕವಿರಾಮಾ, ೧. ೩೬)

ಆ ವಂದ

ಅಗೋ ಬಂದ, ಆಗ ಬಂದ (ಅತಿವಿಶದವಿಶಾಲ ಊರುಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು ಉತ್ಥಿತಮಾ ವಂದಸ್ರಮಿಶ್ರಗಂಧಂ ಮುನಿಯಂ: ಪಂಪಭಾ, ೧. ೧೦೫)

ಆಕಂಠಪ್ರಮಾಣ

ಕಂಠದವರೆಗೂ (ದಿವ್ಯಾಹಾರಮಂ ಆಕಂಠಪ್ರಮಾಣಂ ಬರೆಗಂ ತಣಿಯುಂಡು: ವಡ್ಡಾರಾ, ಪು. ೭೮. ಸಾ. ೨೨)

ಆಕಂಠೋಷ್ಠಂಬರಂ

ಗಂಟಲು ಮತ್ತು ತುಟಿಯವರೆಗೆ (ಇಂಬಾಗಿರೆ ಮುದದಿಂ ಪಲವುಂ ಬಣ್ಣದ ಭಕ್ಷ್ಯರಾಶಿವೆರಸು ಆಕಂಠೋಷ್ಠಂಬರಮುಂಡೊಯ್ಯನೆ ಪಾರ್ವಂ ಬಂದಾ ಕೊಡನ ಕೆಳಗೆ ಪಟ್ಟಿರ್ದಾಗಳ್: ಪಂಚತಂತ್ರ, ೨೫೪)

ಆಕಂಪಂಗೊಳ್

ನಡುಗು, ಅಲ್ಲಾಡು (ತ್ರಿಭುವನಂಗಳ್ ಆಕಂಪಂಗೊಳೆ ಮುರಜಕೇತನವಿರಾಜಿತಮಪ್ಪ ತನ್ನ ರಥಮಂ ಅದಿರದೆ ಇದಿರಂ ಪರಿಯಿಸಿ: ಪಂಪಭಾ, ೧೩. ೧೩. ೪೪ ವ)

ಆಕಂಪನಗೊಳ್

ನಡುಗು (ಕಾಮದೇವನ ಕೂರಲಗಿನ ಧ್ವನಿಯೆಂದು ಕೋಕಿಲಧ್ವನಿಗೆ ಆಕಂಪನಗೊಳುತ್ತುಂ; ಗಿರಿಜಾಕ, ೪. ೧೨೦ ವ)

ಆಕಂಪಿಸು

ನಡುಗು (ಮುಡಿ ಸೊಪ್ಪಾಗದು ನೀವಿ ಬಿರ್ಚದು ಅಧರಂ ಬೆಳ್ಪೇಱದು ಊರುದ್ವಯಂ ಪೊಡರ್ದು ಆಕಂಪಿಸದು ಅಕ್ಷಿ ಕೆಂಪಡಸದು: ಜಗನ್ನಾವಿ, ೧೬. ೧೨೬)

ಆಕಪ್ಪು

ಗುಳಿ, ಖೆಡ್ಡ (ತಂದು ಆನೆಯಂ ಕೆಡಪು ಆಕಪ್ಪಿನೊಳ್ ಎಚ್ಚು ತೋಱ ಬಲವದ್ಭಲ್ಲೂಕಮಂ: ಉದ್ಭಟಕಾ, ೨. ೫೦)

ಆಕರಿಸು

ವ್ಯಾಪಿಸು, ಆವರಿಸು (ಕರಮೆಸೆದಂ ವಿಸ್ತರಚಂದ್ರಿಕೆ ಆಕರಿಸಿದ ಹರನೀಳನಗೇಂದ್ದಂದದಿಂ: ಕರ್ಣನೇಮಿ, ೧೨. ೨೭೫)

ಆಕರ್ಣಕೃಷ್ಟ

ಕಿವಿಯವರೆಗೆ ಸೆಳೆಯಲ್ಪಟ್ಟ (ಆಕಣ್ಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ: ಆದಿಪು, ೧೪. ೧೦೩ ವ)

ಆಕರ್ಣನ

ಆಲಿಸುವುದು, ಕೇಳು (ತತ್ ವಾರ್ತಾ ಆಕರ್ಣನದಿಂ ಸಂತೋಷಂಬಟ್ಟು: ಚಾವುಂಪು, ಪು. ೪೫೩. ಸಾ. ೧೯)

ಆಕರ್ಣನೀಯ

ಆಲಿಸಲು ಯೋಗ್ಯವಾದ (ದ್ವಿರೇಫೋದಿತನಾದ ಆಕರ್ಣನೀಯಂ ಪಂಚೇಂದ್ರಿಯಸುಖದೊದವಂ ನಂದನಂ ಮಾೞ್ಪುದೆಂದು: ಚಂದ್ರಪ್ರಪು, ೧. ೧೧೨)

ಆಕರ್ಣಾಂತಂ

ಕಿವಿಯವರೆಗೂ (ಒಂದೆ ಸೂೞೆ ತೆಗೆದು ಆಕರ್ಣಾಂತಮಂ ತಾಗೆ .. .. ಸಮಂತೆಚ್ಚು ಮೆಚ್ಚಿಸಿದಂ: ಪಂಪಭಾ, ೩. ೬೩)

ಆಕರ್ಣಾಂತಂಬರಂ

ಕಿವಿಯವರೆಗೂ (ಧನಂಜಯಂ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು: ಪಂಪಭಾ, ೧೨. ೨೧೨ ವ)

ಆಕರ್ಣಾಂತವಿಶ್ರಾಂತ

ಕಿವಿಯವರೆಗೂ ಹರಡಿದ (ಜಗತೀನಾಥಂ ಆ ಕುಮಾರಂ ಒಸೆದು ಆಕರ್ಣಾಂತವಿಶ್ರಾಂತ ದೃಷ್ಟಿಗಳಿಂ ನೋಡುತ ಎಯ್ದೆವರ್ಪುದುಂ: ಸುಕುಮಾಚ, ೧೧. ೨)

ಆಕರ್ಣಿಸು

ಆಲಿಸು (ರಾಜನೀತಿಯ ಕ್ರಮಂಗಳಂ ಅತಿಕ್ರಮಿಸಿ ನಡೆವುದು ಉಚಿತಮಲ್ಲೆಂದು ನುಡಿದ ದವನಕನ ಮಾತನಾಕರ್ಣಿಸಿ: ಪಂಚತಂತ್ರ, ೧೬೯ ವ)

ಆಕರ್ಷಣ

[ಬಾಣವನ್ನು ತೊಟ್ಟು] ಎಳೆಯುವಿಕೆ (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)

ಆಕಸ್ಮಿಕ

ಅನಿರೀಕ್ಷಿತ (ನರಕ ನಗರ ಲಗ್ನಕೆ ಆಕಸ್ಮಿಕ ಅಗ್ನಿದ್ಫುಲಿಂಗಸ್ಫುರದವಿರಳ ಲಾಕ್ಷಾಗೇಹಪೂರಂ: ಆದಿಪು, ೫. ೮೯)

ಆಕಸ್ಮಿಕಪಾಂಸು

ಇದಕ್ಕಿದ್ದಂತೆ ಎದ್ದ ಧೂಳು (ಕಿಂಚ ಆಕಸ್ಮಿಕ ಪಾಂಸುಪಲ್ಲವ ಜಳಸ್ಯಂದೀ ಸದಾಸಿಂಧುರ್ ಅಪ್ರಾಗೇಯಂ ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ: ಪಂಪಭಾ, ೯. ೯೭)

ಆಕಳಿತ

ಹಿಡಿದ (ಮುನಿಪತಿಯಾಗಿರ್ದೇಕೆಂದಱಯೆಂ ದಶಧರ್ಮ ಆಕಳಿತಕರಾಗ್ರನಾದನೆನಗಿದು ಚೋದ್ಯಂ: ಆದಿಪು, ೬. ೩೦); ಸೇರಿದ (ಝಣಝ್ಝಣಿತ ಮೇಖಲಾಕಲಿತಹಾರ ಕೇಯೂರ ಭೂಷಣಪ್ರಭೆ ದಿಗಂತಮಂ ಬೆಳಗೆ: ಕಾದಂಸಂ, ೮. ೪೬)
< previous1234567894142Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App