ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಇಳಾವಲ್ಲಭ

ಇಳಾಧಿಪ (ಆ ವಿವಿಧ ಕಳಕಳಿಕ್ಕೆ ವನಾವಳಿಯಿಂ ಪಾಱ ಮೊಱೆವ ಮಧುಪಶ್ರೇಣೀರಾವದ ಘೋಷಣೆ ಕಳೆದುದು ಇಳಾವಲ್ಲಭಸುತನ ಪಡೆಯ ಮಥನಶ್ರೀಯಂ: ಶಾಂತಿಪು, ೮. ೬)

ಇಳಿಂಕೆ

ಅವಜ್ಞೆ (ರಾಘವಂ ಪೋಗೆ ಕಣ್ಣಂ ಬಗೆಗಂ ಇಳಿಂಕೆಯಧತ್ತು ಆ ಸಭಾಚಕ್ರಪಾಲಂ: ಪಂಪರಾ, ೬. ೧೫೬)

ಇಳಿಕೆ

ತಿರಸ್ಕಾರ, ಅವಜ್ಞೆ (ರಾಘವಂ ಪೋಗೆ ಕಣ್ಗಂ ಬಗೆಗಂ ಇಳಿಕೆಯಾದತ್ತೂ ಆ ಸಭಾಚಕ್ರವಾಲಂ: ಪಂಪರಾ, ೬. ೧೫೬)

ಇಳಿಂಕೆಗೆಯ್

ತಾತ್ಸಾರದಿಂದ ನೋಡು (ಆ ಮೃಗಾಂಕನ ಉಜ್ವಳಮಂ ಇಳಿಕೆಂಗೆಯ್ದು: ರಾಜಶೇವಿ, ೧೩. ೬೦)

ಇಳಿಂಕೆಗೊಳ್

ಕಡೆಗಣಿಸು, ಅಪಹಾಸಗೈ ಗುರುವೃದ್ಧರ ಪೇೞ್ದ ಹಿತೋಪದೇಶಮಂ ಮನದೊಳ್ ಇಳಿಂಕೆಗೊಂಡು: ಗದಾಯು, ೫. ೪೦)

ಇಳಿಕೆಯ್

ತಾತ್ಸಾರದಿಂದ ನೋಡು (ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೆ ಏಂ ಸ್ಮರಚಾಮಂ ಇಳಿಕೆಯ್ವರೇ: ಯಶೋಧಚ, ೨. ೪೨)

ಇಳಿಕೆವಡೆ

ಉಪೇಕ್ಷೆಗೊಳಗಾಗು (ಸಿಂಗದ ಮುಪ್ಪುಂ ನೆಗೞ ಗಾಂಗೇಯರ ಮುಪ್ಪುಂ ಇಳಿಕೆವಡೆಗುಮೇ ವನಮಾತಂಗಂಗಳಿಂ ಅಸುಹೃತ್ ಚತುರಂಗಬಲಂಗಳಿಂ ಅದೆಂತುಮಂಗಾಧಿಪತೀ: ಪಂಪಭಾ, ೧೦. ೧೯)

ಇಳಿಗಾಱ

ತಿರಸ್ಕರಿಸುವವನು (ಇೞಗಾಱರ ಪರಪಿದ ಮಾತುಂ ಪುರಾಣಮಕ್ಕೆ ಎಮಗೇನೋ: ನೇಮಿನಾಪು, ೧. ೨೯)

ಇಳಿದಾಗು

ಕ್ಷೀಣವಾಗು (ಬಿಗುರ್ವಣೆ ರಘೂದ್ವಹ ಸನ್ನಿಧಿಯಿಂದ ಅದೃಶ್ಯಮಪ್ಪುದುಂ ಇಳಿದಾಯ್ತು ಚಾಪಲತೆ: ಪಂಪರಾ, ೫. ೮೬)

ಇಳಿದು

ಕೀಳಾದ, ಕ್ಷೀಣವಾದ (ಬೇವಂ ಮೆಚ್ಚಿದ ಕಾಗೆಗೆ ಮಾವು ಇಳಿದಪ್ಪಂತೆ: ಯಶೋಧಚ, ೨. ೪೫)

ಇಳಿಪು

ಕೆಳಕ್ಕೆ ತರು, ಇಳಿಸು, ಕೀಳುಗಳೆ (ಬೆಳ್ಳಿಯ ಬೆಟ್ಟಂಗಳಂ ಇಳಿಪ ಜೈನನಿಳಯಂಗಳಂ ಈ ಸೃಷ್ಟಿಯೊಳೆ ಕೂಡೆ ಮಾಡಿದ ರಟ್ಟಂ ಶಂಖಾವನೀಶನೆನೆ ಪೊಗೞದರಾರ್: ಸಮಯಪ, ೧. ೩೭)

ಇಳಿಲೆ

ಸುಂದರಿ (ಸುರದಂಪತಿಗಳ ಪೋಲ್ವೆಯನೊಪ್ಪಿದುವು ಇಳಿಲೆಯ ಪದಯುಗನಖದಾಕೃತಿಗಳ್: ಸುಕುಮಾಚ, ೫. ೫೦ ರಗಳೆ)

ಇಳಿವೋಗು

ತಿರಸ್ಕೃತವಾಗು (ಎನಿತಾನುಂ ತೆಱದ ಲಲ್ಲೆಯಿಂ ಅಳಿಪಂ ತೋಱ ಬಾಯೞದು ತನ್ನ ನುಡಿಗಳ ಅಳಿಪು ಇಳಿವೋಗೆ ಸೈರಿಸಲಾಱದೆ: ಪಂಪಭಾ, ೮. ೬೯ ವ)

ಇಳಿಸಿ ನುಡಿ

ಅವಗಣಿಸಿ ಮಾತಾಡು (ಮರುಳೇ ಗಾಂಡಿವಿ ಯಾರೆಂದು ಇಳಿಸಿ ನುಡಿವೈ ಗಂಧರ್ವರುಯ್ವಂದು ನಿನ್ನಂ ಕರುವಿಟ್ಟಂತಿರ್ದುದಿಲ್ಲಾ ನೆರದ ಕುರುಬಲಂ ತಂದವಂ ಪಾರ್ಥನಲ್ಲಾ: ಪಂಪಭಾ, ೯. ೫೫)

ಇಳಿಸು

ಕೀಳುಗೈ (ಮದನನ ಬಿಲ್ಲೊಳಮಾತನ ಸುದತಿಯ ಬೀಣೆಯೊಳಮೆಸೆವ ದನಿಯುಮಂ ಇೞತ್ತಿದು ದಲ್: ಆದಿಪು, ೯. ೧೫); ಕಡೆಗಣಿಸು (ಇಳಿಸಲಕ್ಕುಮೇ ಗಾಂಡಿವಿಯಂ ಸುಯೋಧನಾ: ಗದಾಯು, ೨. ೩೭)

ಇಳೆ

ಭೂಮಿ, ಮಾತು (ಇಳೆಯಕ್ಕುಂ ಪೃಥ್ವಿಯುಂ ವಾಣಿಯುಂ: ಅಭಿಧಾವ, ೩. ೧. ೯೪)

ಇಳೇಶ್ವರಪುತ್ರಿ

ರಾಜಕುಮಾರಿ (ಇಳೇಶ್ವರಪುತ್ರಿ ತೀರ್ದುದಾದರದೊಳೆ ನಿನ್ನ ನೆಚ್ಚಿನ ಮನೋರಥಂ: ಆದಿಪು, ೩. ೮೫)

ಇಳೇಶ್ವರವಲ್ಲಭೆ

ಮಹಾರಾಣಿ (ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈಸೆಱೆಯೆನಿಪ ಅಂಗರಾಗಮಂ ಇಳೇಶ್ವರವಲ್ಲಭೆಯಟ್ಟಲ್ ಉಯ್ದೊಡೆ: ಪಂಪಭಾ, ೮. ೭೩)

ಇೞ

ಕೆಳಕ್ಕೆ ಬರು (ರಥದಿಂದಮಿೞದು ಮಣಿಮಯ ಪೀಠದೊಳ್ ಕುಳ್ಳಿರ್ದು: ಪಂಪಭಾ, ೯. ೨೭ ವ); ಸೋರು; ಜೋಲು ಬೀಳು ; ಕೃಶವಾಗು (ಎರಡರ್ಥಕ್ಕೆ: ಇೞದನೆಂದು ಮೆಯ್ಗುಂದಿದನುಂ ಕೆೞಗಣ್ವೆ ವಂದನುಂ ಅಕ್ಕುಂ: ಶಬ್ದಮದ, ೩೩ ವೃತ್ತಿ)

ಇೞ

ಸುಲಿಗೆ, ಲೂಟಿ (ಹುಸಿ ಹೋಗದು ಬೆಳಸು ಬಱಂ ಪಸವು ಇೞಗಳಿಂದಂ ಇಷ್ಟನಯದಿಂ ಪ್ರತಿಪಾಲಿಸುವರ್ ಮಹೀಭುಜರ್: ವರ್ಧಮಾಪು, ೧೪. ೧)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App