ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಇೞಕೆ

ಕೀಳು (ರಾಘವಂ ಪೋಗೆ ಕಣ್ಗಂ ಬಗೆಗಂ ಇೞಕೆಯಾದತ್ತಾ ಸಭಾ ಚಕ್ರವಾಲಂ: ಪಂಪರಾ, ೬. ೧೫೬)

ಇೞಕೆಯ್

ಕೀಳುಮಾಡು (ಸಂಸಾರಸಮುದ್ರಮಂ ತೃಣಪಯಃಕಣದಿಂ ಇೞಕೆಯ್ದು .. .. ಶ್ರುತಪಯೋಧಿಯಂ ಈಸಿದ ವರ್ಧಮಾನ ಭಟ್ಟಾರಕರಂ .. .. ಅರ್ಚಿಪೆಂ: ಪಂಪರಾ, ೧. ೧೪)

ಇೞದು

ಸಾಮಾನ್ಯ (ಸ್ತ್ರೀರತ್ನಂ ಭುವನತ್ರಯಸಾರಮಲ್ಲದೊಡೆ ನಿನ್ನಂ ಒಲಿಸುವುದು ಇೞದೇ: ಲೀಲಾವತಿ, ೫. ೭)

ಇೞದುಮಾಡು

ಕೀಳು ಮಾಡು (ಪದ್ಮಸಂಭವನ ಸೃಷ್ಟಿಯಂ ಇೞದುಮಾಡುವಂತೆಯುಂ ಅನಂತಶೋಭಾನಿಲಯಮಾಗಿ: ಲೀಲಾವತಿ, ೧೨. ೮ ವ)

ಇೞಪು

ಕೆಳಕ್ಕೆ ತಂದಿರಿಸು (ಬಲದೇವ ವಾಸುದೇವರನಿೞಪುದು .. .. ಮಲ್ಲಪನ ಪೊನ್ನಮಯ್ಯನ ಚರಿತಂ: ಅಜಿತಪು, ೧. ೩೩); ಕಳೆದುಕೊಳ್ಳು (ಮಹಾಬಳ ಖಚರೇಂದ್ರಂ ಪ್ರಾಯೋಪಗಮನ ವಿಧಿಯಿಂದಮಾತ್ಮೀಯ ಶರೀರಭಾರಮನಿೞಪೆ: ಆದಿಪು, ೨.೬೧ ವ)

ಇೞಯುಂಬೊೞ್ತು

ಇಳಿಹೊತ್ತು, ಸಾಯಂಕಾಲ (ಬಹುಳ ಗ್ರಹಣದಿಕಾರಾಂತದ ಪದದೊಳ್ ಉಕಾರಂ ಬರೆ ಬಿಂದುವಕ್ಕುಂ: ಸಿಡಿಯುಂದಲೆ, ಇೞಯುಂಬೊೞ್ತು: ಶಬ್ದಮದ, ೧೮೧. ಪ್ರ)

ಇೞವಿೞ

ಕೇಡು (ಆಯಿಲದ ಅಳುಪಿನ ಇೞವಿೞಯುಂ ಕುತ್ತದ ಮಱುಕದ ಚಿತ್ತವೃತ್ತಿಯುಂ ಅಪಮೃತ್ಯುವಿನ ಸತ್ವಭಾಧೆಯ ಗಂಧಾಗಂಧಮುಂ ಇಲ್ಲ: ಶಾಂತಿಪು, ೬. ೧೦೨ ವ)

ಇೞವು

ಇಳಿಯುವಿಕೆ (ಗೞಗೞ ಸುರಿವಶ್ರುವ ಕೊರಲ್ ಇೞವಿಗಂ ಅಗಿಮೞ್ಗದೞ್ವ ಮೊೞಗಿಂಗಂ: ಶಾಂತಿಪು, ೬. ೮೯)

ಇೞವೊಲ

ಇಳಿಜಾರು ಭೂಮಿ (ಇೞವೊಲದ ನೀರಂತೆ ಕುಪಥಕ್ಕೆಱಗದೆ: ಧರ್ಮಾಮೃ, ೫. ೬೪ ವ)

ಇೞವೋಗು

ಇಳಿದುಹೋಗು, ಹರಿದು ಹೋಗು (ಕೞಯೇಱ್ ಪೆತ್ತ ಇಭವೈರಿಯಂ ಎೞಕೆ ಶಿರಂ ಮಾೞ್ಪವೋಲ್ ಅವಂ ಮುಳಿಯಿಸೆ ಕೆಯ್ಗೞಯೆ ಮುನಿಪತಿಯ ಕಣ್ಗಳೊಳ್ ಇೞವೋದುವು ತೀವಿ ಕೋಪರಸದ ಪೊನಲ್ಗಳ್: ಶಾಂತಿಪು, ೭. ೬೧)

ಇೞಸು

ಕುಗ್ಗಿಸು (ಜಸಕ್ಕೆ ಅಡರ್ಪು ಅಪ್ಪನ್ನೆಗಂ ಸಂದನೀ ಜಗದೊಳ್ ಬದ್ದೆಗಂ ಅನ್ನಂ ಆವಂ ಇೞಕುಂ ಭ್ರೂಕೋಟಿಯಿಂ ಕೋಟಿಯಿಂ: ಪಂಪಭಾ, ೧. ೨೭)

ಇೞ್ಕುೞಗೊಳ್

ಸೆಳೆದುಕೊ, ಆಕರ್ಷಿಸು (ಅೞ್ಕಱಂ ಈಯೆ ಸಂಬಳಂಗೊಳ್ವವೊಲ್ ಆ ತಳೋದರಿಯ ಚಿತ್ತಮಂ ಇೞ್ಕುೞಗೊಂಡಂ ಅರ್ಜುನಂ: ಪಂಪಭಾ, ೭. ೬೮)

ಇೞ್ಕುೞ್

ಇಕ್ಕುಳ (ಉನ್ನತ ಮಸ್ತಕಸ್ಥಳದೊಳ್ ಅಂಬುಗಳ್ ಅೞ್ದುಡಿದಿರ್ದೊಡಂ ಅತ್ತಮಿತ್ತನೆೞೆತಂದು ಬಲ್ದಡಿಗರ್ ಇೞ್ಕುೞನೊಳ್ ಕಿೞೆ ನೊಂದೆಂ ಎನ್ನದೆ: ಪಂಪಭಾ, ೧೧. ೩); ಬಿಕ್ಕಳಿಕೆ

ಇೞ್ದುವರಿ

ಎಳೆದುಕೊಂಡು ಹೋಗು (ಕನ್ನೆತನಂಗೆಯ್ಯಲ್ ಬಗೆಗುಂ ನಾಣ್ ಮಿಗೆ ಮನಮುಂ ಇೞ್ದುವರಿಯಲ್ ಬಗೆಗುಂ ಕನ್ನಡಿಕುಂ ತನ್ನಳಿಪಂ ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್: ಪಂಪಭಾ ಪರಿಷತ್ತು: ೪. ೫೫)

ಇೞ್ದೆ

ಸುಲಿಗೆ, ಲೂಟಿ (ಕಳ್ಳರಾಯಿಲಮಱಯೇಱು ಮಾರಿ ಪಸವು ಇೞ್ದೆ ಬಱಂ ಪೆಱವುಂ ಭಯಂಗಳಾಕುಲಿತೆಗಳಿಲ್ಲ: ಆದಿಪು, ೧. ೫೨)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App