ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಇಡುವರ್ಣ

ಗಾಢವಾಗಿ ಬಳಿದ ಬಣ್ಣ (ತೆಡೆವ ಬೆರಸುವ ತೆರಳ್ಚುವ ಇಡುವರ್ಣದ ತೆರ್ಳವರ್ಣದ ಅರ್ಧೋದಕದ ಬಹುವಿಧದ ವರ್ಣಕ್ರಮುಂ: ಆಚವರ್ಧ, ೭. ೩ ವ)

ಇಡುವಲೆ

ಬೀಸುವ ಬಲೆ (ಎಳೆಯಳ ಕಣ್ಗದಿರೋಡುವ ಗಿಳಿಗಳ ಬೆಂಬತ್ತಿ .. .. ತೋರ್ಕುಂ ಪೊಳೆವ ಇಡುವಲೆಯಿಡೆಯವಳವನೊಳಗಾಗಿಸಿದಂತೆ ನೋಳ್ಪ ಪಥಿಕರ್ಗಾಗಳ್: ರಾಜಶೇವಿ, ೨. ೧೯)

ಇಡುವೞ

ಇರಿಸಿದ ಸ್ಥಿತಿ (ಇಡುವೞಯಲಿರ್ಪವಲ್ ಮೇೞ್ಪಡಿಸಿದಂ ಇಂತೆನ್ನಂ ಎನಗೆ ವಸುದೇವನೆನಲ್: ಜಗನ್ನಾವಿ, ೫. ೬೦)

ಇಡುವು

ಸಂದಿಗೊಂದಿ, ಇಕ್ಕಟ್ಟು (ಇಡಿದಿರೆ ಪೂತಮರದ್ರುಮದ ಇಡುವುಗಳೊಳ್ ಬದ್ದವಣದ ಪುಡಿವೊಲ್: ಆದಿಪು, ೭. ೭೩); ರಾಶಿ, ಮೊತ್ತ (ನೆಣದ ಪಳ್ಳಂಗಳಂ ಪಾಯ್ದುಂ ನೆತ್ತರ ತೊಱೆಗಳಂ ಬಂಚಿಸಿಯುಂ ಅಡಗಿನ ಇಡುವುಗಳಂ ದಾಂಟಿಯುಂ: ಪಂಪಭಾ, ೧೩. ೫೩ ವ)

ಇಂಡೆ

ರಾಶಿ, ಹಿಂಡು (ನಾಟಕಶಾಲೆಯೊಳೆಯ್ದೆ ರಕ್ತಪುಷ್ಪಾಂಜಳಿಗೆಯ್ದ ಮಾೞ್ಕೆಯವೊಲಿರ್ದುವು ಖಂಡದಿಂಡೆಗಳ್: ಪಂಪಭಾ, ೮. ೭೮); ಹೂವಿನ ದಂಡೆ (ಖಂಡೇಂದುಧರನಂ ಅರ್ಚಿಸಿ ಇಂಡೆಗಳುಚ್ಚಳಿಸಿ ಕೆಯ್ಗೆ ಬಾರದೊಡೆ ಆಗಳ್ ಮಂಡೆಯನರಿದೇಱಸುವಂ: ಸಮಯಪ, ೯. ೩೮)

ಇಡೆ ಮುಡಿವು

ಪ್ರಯೋಗಿಸಿ ತೀರು, ಮುಗಿದುಹೋಗುವ ಹಾಗೆ [ಬಾಣ] ಬಿಡು (ಪಿಡಿಕೆಯ್ಯ ದೊಣೆಯ ಪೊದೆಯಂಬು ಇಡೆ ಮುಡಿವಿನಂ ಎಚ್ಚು: ಪಂಪಭಾ, ೧೦. ೭೫)

ಇಂಡೆಗಟ್ಟು

ಹೂವಿನ ದಂಡೆಯನ್ನು ಕಟ್ಟು (ಎಡ್ಡವೆನಲಿಂಡೆಗಟ್ಟುವ ಗಡ್ಡುಗೆಗುಡುವೆಡೆಗೆ ನೀರನಡಕುವ ಫಲಮಂ ಬಡ್ಡಿಸಿ ನಿವೇದ್ಯಮೀವ: ಜಗನ್ನಾವಿ, ೧೬. ೫೬)

ಇಂಡೆಯಾಟ

ಚೆಂಡಾಟ (ನೆರೆದುದು ಪೆಂಡವಾಸದ ಎಳವೆಂಡಿರ ತಂಡಮದು ಇಂಡೆಯಾಟದೊಳ್: ಪುಷ್ಪದಂಪು, ೧೨. ೨೧)

ಇಂಡೆಯಾಡು

ಹೂವಿನ ದಂಡೆಯನ್ನು ಎಸೆದಾಡು (ಸತ್ತವರೆತ್ತ ನೀರಿೞವರೆತ್ತ ಜನಂ ನೆರೆದಿಂಡೆಯಾಡಿ ಪಾಡುತ್ತೆಸೆದಿರ್ಪರ್ ಇಂತು ಮೃತರಾಜವಿಡಂಬಮನೇಕೆ ಕಾಣ್ಬಿರೇ: ಅಜಿತಪು, ೨. ೧೦೫)

ಇಡ್ಡಲಿಗೆ

ಇಡ್ಡಲಿ ಎಂಬ ತಿಂಡಿ (ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ: ವಡ್ಡಾರಾ, ಪು ೭೮ ಸಾ ೧೬)

ಇಣಿ

ಎತ್ತಿನ ಹಿಣಿಲು (ಪುಣ್ಬೆತ್ತ ಇಣಿಗೆಱಗೆ ನೊಣಂ ಶೀರ್ಣಶೃಂಗಾಗ್ರದಿಂ ಮಾರ್ದೊಡೆಯುತ್ತುಂ .. .. ಮಹೋಕ್ಷಂ: ನೇಮಿನಾಪು, ೮. ೧೮)

ಇಂತಪ್ಪ

ಇಂತಹ, ಇಂಥ (ಇಂತಪ್ಪ ರೂಪಮಂ ಕೈಕೊಂಡೊಡೆ: ವಡ್ಡಾರಾ, ಪು. ೭೪. ಸಾ. ೩)

ಇತರ

ಬೇರೆಯ (ನೃಪನವ್ಯಗ್ರತೆಯಿಂ ಇತರವನಿತೆಯರ ಆಗ್ರಹಮಂ ಬಿಟ್ಟಂ: ಶಾಂತಿಪು, ೧. ೭೩)

ಇತರೆ

ಸಾಮಾನ್ಯಳು (ಇತರೆಯಂತೆ ಅಲ್ಪಜನ ಸಖೀಪರಿವೃತೆಯುಂ ಉಪನೀತ ಅಶೆಷ ರಾಜಚಿಹ್ನೆಯುಂ .. .. ಆಗಿ ಬಂದು ಕುಳ್ಳಿರೆ: ಕಾದಂಸಂ, ೫. ೫೮ ವ)

ಇತರೇತರ

ಪರಸ್ಪರ (ಪ್ರವಾಹಸಹಸ್ರಂಗಳಿಂದಂ ಇತರೇತರಹೇಷಾರವ ಆಕರ್ಣನೋದೀರ್ಣರೋಷಹಯ ಹೂಂಕಾರನಿಷ್ಠುರ: ಆದಿಪು, ೧೪. ೯೫ ವ)

ಇತರೇತರೋಕ್ತಿ

ಪರಸ್ಪರ ಮಾತು (ಇತರೇತರೋಕ್ತಿಯಿಂದಂ ಆ ಭೂಮಿಪನಾಂತು ಮಧ್ಯಮಂ ಲೋಕಪಾಲನಾದಂ: ಶಾಂತಿಪು, ೮. ೧೨೪)

ಇತಸ್ತತ

ಅತ್ತ ಇತ್ತ (ಮಂದಾರ ಪಾರಿಜಾತ ಕುಸುಮವರ್ಷಮುಂ ಇತಸ್ತತಸ್ಸಂಚಲಂ ಅಮರಕರ ಪರಿತಾಡ್ಯಮಾನ ಮಹನೀಯದೇವರುಂ: ಶಾಂತಿಪು, ೧೦. ೧ ವ)

ಇತಿವೃತ್ತ

ನಾಟಕದ ಒಂದು ಭಾಗ (ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ: ಪಂಪಭಾ, ೨. ೩೪ ವ)

ಇತಿಹಾಸಕಥೆ

ಚರಿತ್ರೆ ಮತ್ತು ಕತೆಗಳು ಒಂದಾದ ಕತೆ (ನಿಜಾಭಿಖ್ಯಾತಿಯಂ ಇಳೆಯೊಳ್ ನಿಱಸಲ್ಕೀ ತೆಱದ ಇತಿಹಾಸಕಥೆಯಂ ಒಪ್ಪಿಸೆ ಕುಱತಂ: ಪಂಪಭಾ, ೧೪. ೫೧)

ಇತಿಹಾಸೋಪಾಶ್ರಯ

ಇತಿಹಾಸವನ್ನು ಅವಲಂಬಿಸಿರುವುದು (ಅತಿಶಯಂ ಇತಿಹಾಸೋಪಾಶ್ರಯಂ ಮೇಣ್ ಕಥಾವಿಶ್ರುತಚತುರವಿಕಾಶೋತ್ಪಾದಿತ ಅರ್ಥಕರಂ: ಕವಿರಾಮಾ, ೩. ೨೦೯)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App