ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಇಂತು

ಹೀಗೆ, ಈ ರೀತಿಯದು (ನಿನ್ನ ಉತ್ಪತ್ತಿಯಂ ಇಂತೆಂದು ಎನ್ನರುಂ ಅಣಂ ಅಱಯರ್ ಅಱವೆನಾಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನಂಬಿಕೆ ಕೊಂತಿ ಇಂತಿವರ್ ನೆಱೆ ಬಲ್ಲರ್: ಪಂಪಭಾ, ೯. ೬೬)

ಇಂತುಟಪ್ಪುದು

ಹೀಗಿರುತ್ತದೆ (ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಲ ಚಿಂತಾಮಣಿಗೇವುದಕ್ಕ ದಳಂ ಇಲ್ಲ ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)

ಇಂತುಟು

ಇಷ್ಟು ಮಹಾದೇವಿಗೆ ಉಂತುಟೊಂದು ಬಯಕೆಯಾದುದು: ವಡ್ಡಾರಾ, ಪು. ೧೬೨, ಸಾ. ೧೪); ಹೀಗೆ (ಜಿನತತ್ವಮಂ ಇಂತುಟು ಅಂತುಟು ಎಂದು ಬಾಯ್ಗೆವಂದಂತೆ ಅಣಕಚಣಕಂಗೆಡೆದು .. .. ದುಃಖಂಬಡುವರ್: ಧರ್ಮಾಮೃ, ೪. ೨೨ ವ)

ಇಂತುಟೆ

ಇಂಥದ್ದೇ (ಉಸಿರದಿರೆ ಮನದೊಳರ್ದೆಯಂ ಪಸರಿಸುಗುಂ ಮಱುಕಂ ಅದಱಂ ಎನಗೆ ಇಂತುಟೆ ಎಂದು ಉಸಿರ್: ಪಂಪಭಾ, ೪. ೬೫)

ಇಂತುಟೆ ವಲಂ

ಇಷ್ಟೇ ಅಲ್ಲವೇ? ಹೀಗಾಯಿತೇ? (ಬಿಸುಸುಯ್ದು ಅೞಲಿಂದಂ ಇಂತುಟೆವಲಂ ಎಂದು ಮಹಾಶ್ವೇತೆ ತನ್ನಾಶ್ರಮಕ್ಕೆ ಪೋಗೆ: ಕಾದಂಬ, ೮. ೬೩ ವ)

ಇತ್ತಳತ್ತಳ್

ಈ ಕಡೆ ಆ ಕಡೆ (ಇತ್ತಳತ್ತಳ್ ಇಪ್ಪೊಚ್ಚರೆಗಣ್ಣ ನೀಱೆ ವರ ಮಲ್ಲಣಿ ದಶಬ್ದಮಾಳ್ದು ನೀನುಚ್ಚವದಿಂ: ಉದ್ಭಟಕಾ, ೧೨. ೬೭)

ಇತ್ತಿಗ

ಇತ್ತಿಗೆ, ಪಗಡೆಯಲ್ಲಿ ಎರಡು ಕಡೆ ಮೂರು ಬೀಳುವುದು (ಚೌಕ ದುಗಂ ಇದ್ದುಗಂ ಇತ್ತಿಗಂ ಬಾರಮಂ ಎಂಬ ಆರಿಸಿ ಬೇಡಿದ ದಾಳಮಳವಟ್ಟಿರೆ: ಪುಣ್ಯಾಸ್ರ, ೪. ೧೮)

ಇತ್ತುಂ ತೆತ್ತುಂ

ಕೊಡಬೇಕಾದ್ದನ್ನು ಕೊಟ್ಟು (ಪರಮಂಡಳ ವ್ಯಸನಮಂ ಆರಯ್ವಮಪ್ಪೊಡೆ ಇತ್ತುಂ ತೆತ್ತುಂ ಬಾೞ್ವ ಮಂಡಲಮಲ್ಲದೆ ಕೀಱಯುಂ ಮೀಱಯುಂ ನೆಗೞ್ವ ಮಂಡಲಮಿಲ್ಲ: ಪಂಪಭಾ, ೬. ೬೭ ವ)

ಇತ್ತೆಯೆ

[ಇತ್ತೆ+ಎ] ಈ ಕಡೆಯೇ, ಇಲ್ಲೇ (ಎಮ್ಮಾಳ್ವ ಷಟ್ಖಂಡಕ್ಕೆ ಇಂತಿದಱಂದಿತ್ತೆಯೆ ಮೇರೆ ನೋಡೆಮಗೀ ಶೈಳೇಂದ್ರಂ: ಆದಿಪು, ೧೩. ೬೯)

ಇತ್ತೊಂದು

ಮಗುದೊಂದು (ಬಗೆ ಮತ್ತೊಂದೆನೆಯುಂ ಗೆಯ್ವೊಗಂ ಇತ್ತೊಂದೆನೆಯುಂ ಅಂಗುಳೀ ನಖಚಯಕಾಂತಿಗಳಂ ಅವಟಯ್ಸಿ ಸಲೆ ಪಾಸಗಯದೆಸೆದೆಸೆ ಪೊರಳ್ಚಿದಂ ಮತ್ತೊರ್ವಂ: ಶಾಂತಿಪು, ೫. ೧೦೫)

ಇದಂ

ಇದು, ಈ (ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ: ಪಂಪಭಾ, ೧೪. ೨೭)

ಇಂದಗಿ

ಇಂದ್ರಜಿತು (ಮಂಡೋದರಿ ಪಡೆದಳ್ ಮುನ್ನಿಂದಗಿಯಂ ಬೞಕೆ ಮೇಘವಾಹನನಂ: ಪಂಪರಾ, ೧೦. ೧೫೧)

ಇದಂದೇವ

ಈತನೇ ದೇವ (ತ್ಯದಾದಿಗೆ ಇದಂದೇವ [ಈತನೆ ದೇವನೆಂಬರ್ಥಂ], ಅದಃಪುತ್ರ [ಈತನೆ ಪುತ್ರನೆಂಬರ್ಥಂ]: ಶಬ್ದಮದ, ೯೧ ಪ್ರ)

ಇದಾನೀಂತನ

ಈಗಿನ, ಈ ಕಾಲದ (ಕಟಕೋಪಾಧ್ಯಾಯನಾ ನಾಗವರ್ಮಂ ಇದಾನೀಂತನ ಶರ್ವವರ್ಮನೆ ಗಡಂ ಜನ್ನಂಗುಪಾಧ್ಯಾಯಂ: ಅನಂತಪು, ೧. ೩೪)

ಇಂದಿಂದಿರ

ದುಂಬಿ, ಗುಂಗೀಹುಳು (ಸಮುದ್ಯತ್ ಮಂದವ್ರಾತ ಇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕಶ್ರೇಯಸಃ; ಪಂಪಭಾ, ೯. ೯೭)

ಇದಿರಂ ನೋಡು

ನಿರೀಕ್ಷಿಸು (ಎಲ್ಲಿವೊಕ್ಕೊಡಂ ಕೊಂಡುಬಂದಪೆನೆಮದು ಬಗೆಯದೆ ಇದರಂ ನೋಡುತ್ತಿರಿಮೆಂದು: ಪಂಪಭಾ, ೭. ೩೭ ವ)

ಇದಿರಂ ಬರ್

ಎದುರುಗೊಳ್ಳು, ಸ್ವಾಗತಿಸು (ಅತಿವಿಳಾಸವಿಧೃತದುಕೂಲಂ ಧೃತರತ್ನಾರ್ಘ್ಯಂ ಬಂದಂ ಪತಿಗಿದಿರಂ ಶಂಖನಿಧಿಯೆ ಬರ್ಪಂತಾಗಳ್: ಆದಿಪು, ೧೩. ೧೨)

ಇದಿರಂ ಬೞಯಂ

ಮುಂದೆ ಮತ್ತು ಹಿಂದೆ (ಕೂಟಶಾಲ್ಮಲಿಗಳನಡರವೇೞ್ದು ಇದಿರಂ ಬೞಯಂ ಉರ್ಚುವರುಂ: ಆದಿಪು, ೫. ೮೫ ವ)

ಇಂದಿರದಿಕ್ಕು

ಪೂರ್ವದಿಕ್ಕು (ಇಂದಿರದಿಕ್ಕೆಂಬಾಳಿ ತೋರ್ಪಆ ಮುಕುರಮೆನೆ ಕರಂ ಮೂಡಿತು ಅಬ್ಜಾರಿಬಿಂಬಂ: ರಾಜಶೇವಿ, ೪. ೧೩)

ಇಂದಿರವಿಲ್

ಇಂದ್ರಬಿಲ್ಲು, ಕಾಮನಬಿಲ್ಲು (ತೋರಣಂ ಇಂದಿರೆವಿಲ್: ರಾಜಶೇವಿ, ೮. ೧೧೮)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App