ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892122Next >

ಇಂ

ಇನ್ನು, ಉನ್ನು ಮುಂದೆ (ಪಂಚಧನುಶ್ಶತಂ ಪವಣ್ಣೆಲೆ ನರರ್ಗೆ ಎಂದೊಡೆ ಇಂ ನಿಮಿರೆ ಬಣ್ಣಿಸಲ್ಕಾನಱಯೆಂ ವಿದೇಹಮಂ: ಆದಿಪು, ೧. ೫೧)

ಇಂ ಬೞಯಂ

ಆ ಬಳಿಕ (ಇತ್ತ ವಿಕ್ರಮಾರ್ಜುನನುಂ ಓಲಗಂ ಪರಿದಿಂ ಬೞಯಂ ತನ್ನ ಪವಡಿಸುವ ಮಾಡಕ್ಕೆ ಒಡನೊಡನೋಲಗಿಸುತ್ತುಂ ಬಂದ: ಪಂಪಭಾ, ೪. ೬೯ ವ)

ಇಂಕೆವರ್

ಬತ್ತು, ಇಂಗಿಹೋಗು (ಇಂಕೆವಂದು ಎಯ್ದೆ ಕಂಪಲ್ ಮಸಗುತ್ತುಂ ಬತ್ತೆ ತೆರ್ಪಂಬಡೆದ ಅಋಷುಗೆಱೆಗಳ್: ಜಗನ್ನಾವಿ, ೧೭. ೬೨)

ಇಕ್ಕಿ ಮೆಟ್ಟು

ಬೀಳಿಸಿ ತುಳಿ (ಪುದಿದ ಜಸಂ ಪೊದಳ್ದ ಚಳಂ ಒಂದಿದ ಅಳಂಕೃತಿ ಕೈತ ದೇಸಿ ಎಂಬುದಂ ಎನೆ ವಸ್ತುವಿದ್ಯೆಯೆನೆ ಕಬ್ಬಮೆ ಮುನ್ನಂ ಅವಂತಿವಲ್ಲದಲ್ಲದೆ ಪೆಱವಿಲ್ಲ ಕಬ್ಬಂ ಎನೆ ಮುನ್ನಿನ ಕಬ್ಬಮನೆಲ್ಲಮಂ ಇಕ್ಕಿಮೆಟ್ಟಿದುವು ಸಮಸ್ತಭಾರತಮುಂ ಆದಿಪುರಾಣ ಮಹಾಪ್ರಬಂಧಮುಂ: ಪಂಪಭಾ, ೧೪. ೫೯)

ಇಕ್ಕು

ಇಡು (ಒಂಬತ್ತು ತಿಂಗಳ ಗರ್ಭಿಣಿಯಂ ಪೊಒತ್ತು ಪೋಗಿ ಆಕೆಯನಲ್ಲಿಕ್ಕಿ ಇಂತೆಂದರ್: ವಡ್ಡಾರಾ, ಪು. ೧೧೨, ಸಾ. ೭); ಧರಿಸು ಕೊರಲೊಳಿಕ್ಕಿದ ಎಕ್ಕಸರದ ಕೆಂಬಟ್ಟೆಯ ತೊಂಗಲ್ ಅನಂಗಜಗಮಲತೆಯ ತಳಿರ ತೊಂಗಲಂತೆ ಪೊಳೆಯೆಯುಂ: ಮಲ್ಲಿನಾಪು, ೪. ೬೪ ವ); ಬಿಸಾಕು (ಸಕಳಾವನಿತಳವಲ್ಲಭನಂ ಭೋಂಕನೆತ್ತಿ ಪೊತ್ತಿರ್ದಂ ಇಕ್ಕಲೊಲ್ಲದೆ ನೆಲದೊಳ್: ಆದಿಪು, ೧೪. ೧೧೧); ಪ್ರಯೋಗಿಸು; ನಿಕ್ಷೇಪಮಾಡು; ನೀಡು; ಹೊಡೆ, ಹನನಗೈ (ಇಕ್ಕಿದಂ ಅಭವಂ ಪಾರ್ಥನಂ ಇಕ್ಕಿದನಾ ತ್ರಿಪುರಹರನಂ ಅರ್ಜುನಂ: ಪಂಪಭಾ, ೮. ೨೨)

ಇಕ್ಕುಂಗೂೞ್

ಇತರರು ನೀಡುವ ಅನ್ನ, ಭಿಕ್ಷೆ (ಪೆಱನಿಕ್ಕುಂಗೂೞೊಳಂ ಕೀೞಲೊಳಂ ಅಳವಿಗೆಟ್ಟಿರ್ಪ ನಿಮ್ಮಿರ್ಪುದಕ್ಕಂ .. .. ನೀಗು ನೀಂ ಭೀಮಸೇನಾ: ಪಂಪಭಾ, ೮. ೭೧)

ಇಕ್ಕುಪಡು

ಸೋಲು ಅನುಭವಿಸು (ಸುಮಿತ್ರನೊಳ ಪೋರಲೆಂದು ಆತನ ಪೊೞಲ್ಗೆ ವಂದು ರಂಗದೊಳ್ ಗೆಲ್ದೋಡಿ ಇಕ್ಕುಪಟ್ಟ ಸುಮಿತ್ರಂ: ಚಾವುಂಪು, ೨೭೯. ಸಾ. ೫)

ಇಕ್ಕುವಡು

ಸೋಲು ಅನುಭವಿಸು, ಹೊಡೆಯಲ್ಪಡು (ಮೆಯ್ಯನೀಡಾಡಿ ದಾರುಣಮೆನಿಪ ದಾಹಜ್ವರದಿಂ ಇಕ್ಕುವಟ್ಟಂತೆ ಏನಾನುಂ ವ್ಯಾಧಿ ಕೆಯ್ಕೊಂಡಂತೆ ಆರೊಳಂ ನುಡಿಯದೆ: ಕಾದಂಸಂ, ೫. ೯೫ ವ)

ಇಕ್ಕುೞ್

ಒಂದು ರೋಗ ಮತ್ತು ಪಟಿಕಾರ (ಎರಡರ್ಥಕ್ಕೆ: ಇಕ್ಕುೞೆಂದು ವ್ಯಾಧಿವಿಕಾರಮುಂ ಸಂದಂಶಮುಂ ಅಕ್ಕುಂ: ಶಬ್ದಮದ, ೩೩ ವೃತ್ತಿ ೧೩೨); ಇಕ್ಕುಳ (ಪುಸಿ ಬಸನಮೆಂದು ಕೆಲಬರ್ ಕುಸಿವರ್ ನಾಲಗೆಯಂ ಇಕ್ಕುೞೊಳ್: ಆದಿಪು, ೫. ೮೭)

ಇಕ್ಕೆ

ಇರುವ ಜಾಗ, ಮನೆ (ತನಗೆ ಇಕ್ಕೆಯಾದ ಕಡಲಂ ಕುಂಭಂಗಳಂ ಪೊಕ್ಕ ದೇವನಿಕಾಯಂಗಳನಿಂದ್ರಂ .. .. ಪವಿತ್ರಮೆನಿಸಿತ್ತು: ಆದಿಪು, ನರಸಿಂ, ೭. ೯೬)

ಇಕ್ಕೆದಾಣ

ಬಿಡದಿ, ಬಿಡಾರ (ಭವನ ಇಕ್ಕೆದಾಣಮೆಂದೊಂದು ವಿಶೇಷಪ್ರೀತಿಯಿಂದೆ ಕೈಲಾಸನಗೇಂದ್ರವೆ ಬಳಸಿದುದು ಎಂಬಂತಿರೆ: ಕಾದಂಬ, ೨. ೩)

ಇಕ್ಷು

ಕಬ್ಬು (ಸರೋರುಹಷಂಡದಿಂ ಇಕ್ಷು ಪುಷ್ಪವಾಟಂಗಳಿಂ ಆವ ಮಂಡಲಮುಮಂ ಗೆಲೆವಂದುದು ವೆಂಗಿಮಂಡಲಂ: ಅಜಿತಪು, ೧. ೨೧)

ಇಕ್ಷುಕಾಂಡ

ಕಬ್ಬಿನ ಜಲ್ಲೆ (ಕಂಡರಿಸಿದೊಡೆ ಇಕ್ಷುಕಾಂಡಮೆನೆ ಸೀಯನೆ ಸದ್ರಸಂ ಉಣ್ಮದಿರ್ದೊಡಂ: ರಾಜಶೇವಿ, ೧. ೫೧)

ಇಕ್ಷುಕ್ಷೇತ್ರ

ಕಬ್ಬಿನ ಗದ್ದೆ (ಎಲ್ಲಿ ನೋಡೊದೊಡಂ ಇಕ್ಷುಕ್ಷೇತ್ರಂ ಎತ್ತೆತ್ತ ನೋಡಿದೊಡಂ ಶಾಲಿವನಂಗಳಿಲ್ಲದ ನೆಲಂ ಬೇಱಲ್ಲ ಕಾಲೂಱರಲ್: ಆಚವರ್ಧ, ೧. ೩೩)

ಇಕ್ಷುಚಾಪ

ಕಬ್ಬಿನ ಬಿಲ್ಲು, ಕಬ್ಬುವಿಲ್ಲ, ಮನ್ಮಥ (ಇಕ್ಷುಚಾಪವೆಡಗೈಯೊಳ್ ತೋಱೆ .. .. ಸಿದ್ಧಯನಿ ತಾರ್ಕ್ಷ್ಯಪುತ್ರಿ ನಮಗೀಗೆ ಇಷ್ಟಾರ್ಥಸಂಸಿದ್ಧಿಯಂ: ಧರ್ಮಪ, ೧. ೭)

ಇಕ್ಷುದಂಡ

ಕಬ್ಬಿನ ಜಲ್ಲೆ, ಕಬ್ಬಿನ ಬಿಲ್ಲು (ಉದ್ಧೃಷ್ಟರಶ್ಮಿಪಾಂಡುರಪಾಳಿತ ಕರವಾಳ ಅಡ್ಡಾಯುಧಂ ಇಕ್ಷುದಂಡಪ್ರಣೀತ ಕ್ರೀಡಾವಖಂಡಿತೋಚ್ಚಂಡ ಶುಂಡಾಳಗಾತ್ರಾಪರಪತಿ: ಆದಿಪು, ೧೩. ೪೫ ವ)

ಇಕ್ಷುಪುಷ್ಪ

ಕಬ್ಬಿನ ಹೂ, ಸೂಲಂಗಿ (ವಿಸಸನದೊಳ್ ವಿರೋಧಿನೃಪರಂ ತಱದೊಟ್ಟಲುಂ .. .. ನೋಯಿಸಿದಪುದು ಇಕ್ಷುಪುಷ್ಪದವೊಲೆನ್ನಯ ನಿಷ್ಫಲಪುಷ್ಪದರ್ಶನಂ: ಪಂಪಭಾ, ೧. ೧೧೭)

ಇಕ್ಷುಯಂತ್ರ

ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ (ಮೊರ್ಮರಾಗಿ ಕರಿವುದುಂ ಚಿಮಿಚಿಮಿಸೆ ತಾಳಿಸುವುದುಂ ಇಕ್ಷುಯಂತ್ರಗಳಿಂ ಪಿೞವುದುಂ: ಸುಕುಮಾಚ, ೧೧. ೪೭ ವ)

ಇಕ್ಷುರಸ

ಕಬ್ಬಿನ ರಸ (ಸಿದ್ಧಭಕ್ತಿಪುರಸ್ಸರಂ ಪಾಣಿಪಾತ್ರದೊಳ್ ಕನಕಪಾತ್ರದೊಳ್ ತೀವಿದಿಕ್ಷುರಸಮಂ ಪಯೋರಸಮುಮಂ ಪಾನಂಗಳಿಂದೆಱೆಯೆ: ಅಜಿತಪು, ೭. ೨ ವ)

ಇಕ್ಷುರಸಸಂಗ್ರಹಣ

ಕಬ್ಬಿನ ರಸವನ್ನುತೆಗೆಯುವುದು (ಆದಿದೇವಂ ಇಕ್ಷುರಸಸಂಗ್ರಹಣ ಸಮಯಾಹೂತ ಭೂತಳನಪ್ಪುದಱಂ ಇಕ್ಷ್ವಾಕುಕುಳತಿಳಕನುಂ: ಆದಿಪು, ೮. ೭೫ ವ)
< previous1234567892122Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App