ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345Next >

ಕೊಡು (ಈ ಪ್ರದಾನೇ: ಶಬ್ದಮದ, ಧಾ ೧); ದಾನಮಾಡು (ಪೆಣನಂ ಎತ್ತಲ್ ಸಲ್ಲೆಂದು ಆಪತ್ತುವಡಿಸಿ ಪುತ್ರನಂ ಈ ಪೊನ್ನಂ ಸಂಗತಿಗುಡುವೆವೆಂಬರ್ ತಕ್ಕರ್: ಸಮಯಪ, ೧೪. ೧೫೫); ಎಡೆಗೊಡು (ಮಣಿಮಾಲಿಯಲ್ಲದೆ ಉೞದಾರುಮಂ ಸಾರಲ್ ಈಯದೆ ಭಂಡಾರಮಂ ಕಾದುಕೊಂಡಿರ್ಪುದುಂ: ಆದಿಪು, ೨. ೧೫ ವ); ದಾನಮಾಡು (ಜೀವಮುಳ್ಳಿನಂ ಇಱದು ಅರ್ಥಮುಳ್ಳಿನೆಗಂ ಇತ್ತು ನೆಗೞ್ತೆಯನಾಂಪುದೆಂಬ ಪೆಂಪಿನ ಸಮಕಟ್ಟು: ಪಂಪಭಾ, ೫. ೭೭)

ಈಕ್ಷಂಗಳ್

ನೋಟಗಳು (ಆಕೆಯ ಹಾವಭಾವವಿಳಾಸ ವಿಭ್ರಮಕಟಾಕ್ಷ ಈಕ್ಷಂಗಳ್ ಮನಮಂ ಒನಲಿಸೆಯುಂ ಕನಲಿಸೆಯುಂ: ಪಂಪಭಾ, ೪. ೭೪ ವ)

ಈಕ್ಷಣ

ಕಣ್ಣು (ಅಲಂಪುಗಳ್ ಕನಸಿನೊಳಂ ಪಳಂಚಲೆವುದೆನ್ನೆರ್ದೆಯೊಳ್ ತರಳಾಯತೇಕ್ಷಣೇ: ಪಂಪಭಾ, ೪. ೧೦೬); ನೋಟ (ಆ ಪೀನಕುಚಂಗಳ್ ಆಕ್ಷಣದೊಳ್ ಈಕ್ಷಣಮಂ ಸೆಱೆಗೆಯ್ಯೆ: ಪಂಪರಾ, ೭. ೧೦೯)

ಈಕ್ಷಣಭದ್ರ

ನೋಡಲು ಶುಭಪ್ರದವಾದ ಧಾತಕೀಷಂಡಂ ಈಕ್ಷಣಭದ್ರಂ: ಚಂದ್ರಪ್ರಪು, ೧. ೭೨)

ಈಕ್ಷಣಹರ

ಕಣ್ಸೆಳೆಯುವ (ದಕ್ಷಿಣಕಟಮೆನೆ ಸಿವುಱುವ ದಕ್ಷಿಣರದನದೊಳೆ ಹಸ್ತಮಂ ಪೇಱುವ ಚೆಲ್ವು ಈಕ್ಷಣಹರಮೆನೆ: ಆದಿಪು, ೧೨. ೫೯)

ಈಕ್ಷಣಾಕರ್ಷಣ

ನೋಟವನ್ನು ಸೆಳೆಯುವ, ಆಕರ್ಷಕವಾದ (ಅಕೃತಕಚಿತ್ರಪ್ರಕಾರದಿಂ ಮೆಱೆದುದು ಈಕ್ಷಣಾಕರ್ಷಣಮಂ: ಮಲ್ಲಿನಾಪು, ೮. ೯೪)

ಈಕ್ಷಿಸು

ನೋಡು (ನಾಸಿಕಂ ಅಡ್ಡಂಬಂದಂದಮಂ ಈಕ್ಷಿಸಿ: ಕವಿರಾಮಾ, ೩. ೨೩೪)

ಈಗಡು

ಈಗ, ಈ ಸಮಯದಲ್ಲಿ (ಈಗಡಿನ ನೆಗೞ್ತೆಯ ಕಬ್ಬದೊಳ್ ಒಡಂಬಡಂ ಮಾಡಿದ್ ಪುರಾತನ ಕವಿಗಳ್: ಕವಿರಾಮಾ, ೧. ೩೨)

ಈಗಡೆ

ಈಗಲೇ (ಮಂತ್ರಾವಾಸದೊಳ್ ಮಂತ್ರನಿಶ್ಚಿತನಾಗಿ ಈಗಡೆ ಕಾದಿದಲ್ಲದೆ ಇಳೆಯಂ ನೀನೆಂತುಮಿತ್ತಪಯ್: ಪಂಪಭಾ, ೮. ೮೭)

ಈಗಳ್

ಈಗ (ಪೊಸತಂ ಸ್ತ್ರೀರಾಜ್ಯಮಂ ಮೇಣ್ಪಡೆದನೊ ಬಿದಿ ಲಾವಣ್ಯಸಿಂಧುಪ್ರವಾಹಂ ಪೊಸತೀಗಳ್ ಬಂದು ಬೆಳ್ಳಂಗೆಡೆದುದೊ: ಆದಿಪು, ೧. ೮೨)

ಈಚಲ್

ಈಚಲುಮರ (ತದೀಯ ತಟಂಗಳಲ್ಲಿ ಈಚಲ ಕಡೆಗೊಂಬುಗಳ್ ತುಱುಗಿ ಬಿರ್ದವೊಲಿರ್ದುವು .. .. ಮೊಸಳೆಗಳ್: ಕುಸುಮಾಕಾ, ೭. ೧೮)

ಈಂಟಿಸು

ಕುಡಿಸು (ಕಿವಿಯಿಂದೀಂಟಿಸುವರ್ ಸಮಸ್ತರಸಮಂ: ಲೀಲಾವತಿ, ೧. ೧೨)

ಈಂಟು

ಕುಡಿ, ಪಾನಗೈ (ನೀಳಪಾಟಳ ಜಂಬೂಫಳ ಮಧುರರಸಮಂ ಈಂಟಿದೆಂ ಇಳೇಶ ಪಿರಿದೞಯಿಂ ಮನಂ ತಣಿವಿನೆಗಂ: ಕಾದಂಸಂ, ೧. ೩೧)

ಈಂಟುಜಳಧಿ

ಕುಡಿನೀರಿನ ಸಾಗರ (ಈಂಟುಜಳಧಿಯೆನಿಪ ಅಗೞ ನೀಳ್ಪಿನಿಂ ನೆಗದು ಸೊಗಯಿಸುವ ಕೋಂಟೆಯೊಳ್ಪಿನಿಂ: ಪಂಪಭಾ, ೩. ೨೨)

ಈಡಾಡು

ಚೆಲ್ಲಾಡು, ಬಿಸಾಡು (ನಿಧಾನಮಂ ಈಡಾಡುವಂತೆ ಕೂಸಂ ಗಂಗೆಯೊಳ್ ಈಡಾಡಿ ಬಂದಳ್: ಪಂಪಭಾ, ೧. ೯೫); ನಿರ್ಲಕ್ಷ್ಯದಿಂದ ಕೊಟ್ಟುಬಿಡು (ಕೊಳ್ ಎಂದು ಅರಿದು ಈಡಾಡಿದಂ ಇಂದ್ರಂಗೆ ಕವಚಮಂ ರಾಧೇಯಂ: ಪಂಪಭಾ, ೧. ೧೦೧); ಚಾಚಿಕೊ (ಕರ್ಣನ ಬೞವೞಯನೆ ತನ್ನ ಪೋಪುದನಭಿನಯಿಸುವಂತೆ ಶೋಕೋದ್ರೇಕದೊಳ್ ಮೆಯ್ಯಱಯದೆ ಕನಕರಥದೊಳ್ ಮೆಯ್ಯನೀಡಾಡಿ: ಪಂಪಭಾ, ೧೨. ೨೨೦ ವ)

ಈಡಿತ

ಹೊಗಳಲ್ಪಟ್ಟ, ಸ್ತುತ್ಯ (ಈಡಿತ ಜಿನವರ ಶಾಸನ ಚೂಡಾಮಣಿ ಬುಧರ್ಗೆ ಅನಲ್ಪ ಕಲ್ಪಕುಜಂ ಕೆಯ್ ನೀಡಿದ ಬೇೞ್ಪರ ನೆರವಿಗೆ ನೀಡಿಲ್ಲದೆ ಕುಡುವ ಉದಾತ್ತಂ ಆ ಜಿನಚಂದ್ರಂ: ಶಾಂತಿಪು, ೧. ೩೨); ಸ್ತೋತ್ರ (ಈಡಿತಂ ಸಫಳಂ ವಿರಕ್ತಿ ವಿಮುಕ್ತಿಸಂಗಮಕಾರಣಂ: ಆಚವರ್ಧ, ೧೩. ೬)

ಈಡಿಱ

ಕೊಂಬಿನಿಂದ ತಿವಿ (ಈಡಿಱವ ಕಾಡಾನೆಗಳ ಕೋಡಪೊಯ್ಲಿಂದುದಿರ್ದೆತ್ತಲುಂ ಪರೆದ ಗುರುಗಂಜಿಯಂ ನೋಡಿ: ಕಬ್ಬಿಗಕಾ, ೧೮೧ ವ); ಕಿಕ್ಕಿರಿ (ಈಡಿಱ ಶೃಂಗಸಂಕರ್ಷಣೇ: ಶಬ್ದಮದ, ಧಾ ೮೩೯)

ಈಡು

ಬಾಣದ ಗುರಿ (ಬೇಡನಂತೆ ಈಡಿಂಗೆ ವಂದು ಬಿಲ್ಗಾಱನಂತೆ ಬೆಟ್ಟೇಱಂಗೆ ವಂದು: ಧರ್ಮಾಮೃ, ೩. ೪೬ ವ); ಎಸೆತ (ದೀರ್ಘಕ್ಕೆ: ಇಡು

ಈಡು, ಬಿಡು

ಬೀಡು, ತುಡು ತೋಡು: ಶಬ್ದಮದ, ೨೨೪ ಪ್ರ)

ಈತಿ

ತೊಂದರೆ, ಕಷ್ಟ (ಉಪಶಮಿಸುಗೆ ಸಕಲೋರ್ವಿಯೊಳ್ ಉಪದ್ರವಂ ಡಿಂಬಂ ಅನಯಂ ಉಪಲಿಂಗಂ ಮಿಕ್ಕ ಉಪಸರ್ಗಂ ಅರಿಷ್ಟಂ ದುಷ್ಟಪೀಡೆ ಡಾಮರಂ ಅಜನ್ಯಂ ಈತಿಪ್ರಕರಂ: ಅಭಿಧಾವ, ಕಾಂ. ಸ. ೧)
< previous12345Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App