ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಗ್ರ

ಭಯಂಕರವಾದ (ಉಗ್ರಸಂಗ್ರಾಮಗ್ರನಪ್ಪೆನಗೆ .. .. ದಂಡವು ಅಪಹಾಸ್ಯವಪ್ಪುದು: ಜಗನ್ನಾವಿ, ೫. ೬೧ ವ)

ಉಗ್ರಕರ

ತೀಕ್ಷ್ಣ ಕಿರಣಗಳನ್ನುಳ್ಳವನು, ಸೂರ್ಯ (ಉಗ್ರಕರಂ ಅತುಳ .. .. ಈ ವಿತತಾಟವಿಯಲ್ಲಿ ಸಲಿಸನೆಂದುಂ ಕರಮಂ: ಚಂದ್ರಪ್ರಪು, ೫. ೫೧)

ಉಗ್ರಖಡ್ಗಿ

ಭಯಂಕರ ಖಡ್ಗಮೃಗ (ಶರಭ ವ್ಯಾಘ್ರ ಉಗ್ರಖಡ್ಗಿ ಪ್ರಕರಖರಭಯಾಕ್ರಾಂತಮಂ .. .. ನೀನೆಂತು ಪೊಕ್ಕೈ: ಪಂಚತಂತ್ರ, ೧೧೧)

ಉಗ್ರಗ್ರಾಹ

ಮೊಸಳೆ (ತರಳತರಂಗತುರಂಗಂ ಕರಿಮಕರಕರೀಂದ್ರಮಖಿಳಫರಪದಾತ್ಯುತ್ಕರಂ ಉಗ್ರಗ್ರಾಹ ರಥಂ ಭರತಂಗಿತ್ತುದು ಪಯೋಧಿಬಳವಿಳಸನಮಂ: ಆದಿಪು, ೧೨. ೭೮)

ಉಗ್ರಘೋಷ

ಭಯಂಕರ ಧ್ವನಿ (ಪೆರ್ಚಿತ್ತು ಉಗ್ರಘೋಷಂ ಪ್ರಳಯಘನಘಟಾಟೋಪಗಂಭೀರಘೋಷಂ: ಆದಿಪು, ೧೩. ೩೬)

ಉಗ್ರವಾಣಿ

ಕೋಪದ ಮಾತನ್ನಾಡುವವನು (ಆ ಪ್ರಸ್ತಾವದೊಳ್ ಆತನ ಪರಿವಾರಾಮರರ್ ನಾನಾವಿಧಾಯುಧವ್ಯಗ್ರಪಾಣಿಗಳುಂ ಉದಾರವೀರರಸರಭಸೋಗ್ರವಾಣಿಗಳುಂ ಆಗಿ: ಆದಿಪು, ೧೨. ೯೨ ವ)

ಉಗ್ರವೈರಿ

ಕಡುವಿರೋಧಿ (ಉಗ್ರವೈರಿ ಮದವನ್ಮಾತಂಗಕುಂಭ ಆರ್ದ್ರ ಮೌಕ್ತಿಕ ಲಗ್ನೋಜ್ಜ್ವಲಬಾಣನಂ ಪ್ರವಿಲಸತ್ ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣಕಳಾಪ್ರವೀಣನಂ ಇಳಾಭಾರಕ್ಷಮ ಅಕ್ಷೂಣನಂ: ಪಂಪಭಾ, ೧. ೧೩೪)

ಉಗ್ರಸಾಯಕ

ಭಯಂಕರ ಬಾಣ (ತನ್ನಂಕದೊಂದುಗ್ರ ಸಾಯಕದಿಂ ನಾಯಕರಂ ಪಡಲ್ವಡಿಸುತುಂ: ಪಂಪಭಾ, ೧. ೭೪)

ಉಗ್ರಾಸಿ

[ಉಗ್ರ+ಅಸಿ] ತುಂಬ ಹರಿತವಾದ (ಅರಿಕೇಸರಿಗೆ ಆತ್ಮಜರ್ ಅರಿನೃಪಶಿರೋದಳನ ಪರಿಣತೋಗ್ರಾಸಿ ಭಯಂಕರರ್ ಆ ಇರ್ವರೊಳ್ ಆರ್ ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್: ಪಂಪಭಾ, ೧. ೨೨)

ಉಗ್ರೇಷು

[ಉಗ್ರ+ಇಷು] ಭಯಂಕರವಾದ ಬಾಣ (ಎಯ್ತಂದರಂ ತೊಱೆಕೊಳ್ವಂತಿರೆ ಕೊಂಡುವು ಅಂದು ಅರಿಗನೆಚ್ಚು ಉಗ್ರೇಷುಧಾರಾಜಳಂ: ಪಂಪಭಾ, ೫. ೨೧)

ಉಗ್ರೋಗ್ರ

[ಉಗ್ರ+ಉಗ್ರ] ಭಯಂಕರವಾದವುಗಳಲ್ಲಿ ಭಯಂಕರ, ಮಹಾಭಯಂಕರ (ಅಂತು ಉಗ್ರೋಗ್ರತಪಂಗೆಯ್ಯೆ ತತ್ ತಪಸ್ತಪನವಿಪುಳಮರೀಚಿಗಳ್ ತಮಗೆ ತಪೋವಿಘಾತಮಂ ಮಾಡುವುದುಂ: ಪಂಪಭಾ, ೮. ೧೦ ವ)

ಉಘೇ

ಜಯಘೋಷ (ಕಟ್ಟಿಗೆಗಾಱರ್ ಉಘೇ ಉಘೇ ಎನುತ್ತಿರೆ ನೃಪಲೀಲೆಯಂ ಪಡೆದಪೆಂ: ಧರ್ಮಾಮೃ, ೬. ೧೦೭)

ಉಚಿತಂ

ತಕ್ಕನಾದುದು, ಸರಿಯಾದುದು (ಜನಕಂಗೆ ಜಲಾಂಜಲಿಯಂ ತನೂಭವಂ ಕುಡುವುದು ಉಚಿತಂ ಅದುಗೆಟ್ಟೀಗಳ್ ನಿನಗಾಂ ಕುಡುವಂತಾದುದೆ ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ: ಗದಾಯು, ೪. ೬೨)

ಉಚ್ಚ

ಎತ್ತರವಾದ (ಉಚ್ಚ ಕೇತುಚಯದಿಂ ನೀಲಾಭ್ರಮಂ ಮೇಲೆ ನಿರ್ಮಿಸುತುಂ .. .. ದೇವಕುಳಂ .. .. ಅಲ್ಲಿರ್ಪುವ್ಯಾಕುಳಂ: ಲೀಲಾವತಿ, ೭. ೬)

ಉಚ್ಚಂಡ

ಹರಿತವಾದ, ಉಗ್ರವಾದ (ಉಚ್ಚಂಡಪ್ರತಾಪೋದಯಂ .. .. ಬೆಳಗುಗೆ ಜಗಮಂ ಗೋಪಮಾರ್ತಂಡದೇವಂ: ಜಗನ್ನಾವಿ, ೧. ೪)

ಉಚ್ಚಂಡಕರ

ಕೊರೈಸುವ ಕಾಂತಿ, ಬಲಿಷ್ಠ ಕೈ (ಆನತಜನಕ್ಕೆ ಆನಂದಮಂ ಮಾೞ್ಕೆ ಮಂಗಳಂ ಉಚ್ಚಂಡಕರಂ ಮಹೀವಳಯದೊಳ್ ಚಾಳುಕ್ಯಮಾರ್ತಾಂಡನಾ: ಗದಾಯು, ೧. ೪)

ಉಚ್ಚಂಬರಿ

ಮೇಲೆ ಹಾರು (ಉಚ್ಚಂಬರಿಯದೆ ತದೀಯ ಪದಪಕ್ಷದೊಳೆ ಪತಿತಮಾಗಿರ್ಪುದು: ಕರ್ಣನೇಮಿ; ೫. ೬೦ ವ)

ಉಚ್ಚಮಾಗು

ಹೆಚ್ಚಾಗು (ಆತನ ಬೆಳ್ಗೊಡೆಯ ಪಜ್ಜಳಿಸುವ ಪಜ್ಜಳಿಕೆಯೆ ತನ್ನೊಳಪೊಕ್ಕಂತೆ ಚಂದ್ರಮಂಡಲಕುಚ್ಚಮಾಗೆ ಪಳಚ್ಚನಪ್ಪ ಬೆಳ್ದಿಂಗಳುಂ: ಆದಿಪು, ೧೧. ೫ ವ); ಎತ್ತರವಾಗು (ದೆಸೆಗಳನೆಂಟುಮಂ ನೆಱೆಯೆ ಮುನ್ನಮೆ ಬಳ್ವಳನಾಗೆ ಮಾಡದೆ ಆಗಸಮುಮನುಚ್ಚಮಾಗಿ ಇನಿಸನೆತ್ತದೆ: ಆದಿಪು, ೧೧. ೩೫)

ಉಚ್ಚರತ್

ಚಿಮ್ಮುವ, ಸಿಡಿಯುವ (ಪ್ರೋದ್ಯತ್ ತರಂಗ ಉಚ್ಚರತ್ ಅಮರನದೀ ಶೀಕರೋದಾರ ತಾರಾರಾಮಂ: ಕಾದಂಸಂ, ೧. ೧)

ಉಚ್ಚರಿಸು

ಉಚ್ಚಾರಮಾಡು, ಹೇಳು (ಬರೆಪಂಬೊಕ್ಕು ಉಚ್ಚರಿಸಲ್ ಬಾರದುವು ಅಕ್ಕರಮಲ್ತು: ಶಬ್ದಮದ, ೧೨)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App