ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಳ್ಳೊಳ

ಗದ್ದಲ (ಬೇಲಿಯ ಕೆಲದೊಳಲ್ಲದೆ ಪೆಱಗಣ ಉಲುಪಿಂಗಂ ಉಳ್ಳೊಳಕ್ಕಂ ಗೆಂಟಾಗಿ ಬೀಡಂ ಬಿಡಿಸಿ: ಪಂಪಭಾ, ೫, ೪೭ ವ)

ಉಳ್ಳೋಳ

ಕೋಲಾಹಲ, ಕ್ಷೆಭೆ (ದಳ್ಳಿಸಿ ಕುಕಿಲುತ್ತಂಬುಧಿಯ ಉಳ್ಳೋಳಂ ನೆಗೞೆ: ಆದಿಪು, ೧೩. ೫೩)

ಉೞ

ಬಿಡು (ಭವದಾನನಕ್ಕೆ ಸೋಲ್ತು ಆತ್ಮವಿಲಾಸಮಂ ಉೞದ ತೆಱದೆ ರುಚಿಗೆಟ್ಟು ದಿಗಂತ ವಿಲಂಬಿಬಿಂಬಂ ಅಂಬುರುಹವೈರದಿಂದ ಉಡುಪಂ ಉಡುಪನಾದಂತಾದಂ: ಶಾಂತಿಪು, ೫. ೮೮); ಹೊರತಾಗು (ಪಲಂಬರ್ ಪರದರ್ ಸತ್ತರ್ ಉೞದರೆಲ್ಲಂ ಓಡಿ ಕೆಟ್ಟೊಡೆ: ವಡ್ಡಾರಾ, ಪು. ೭೬, ಸಾ. ೧೩); ಮೀರು (ಮನನಿಸದೆ ತಂದೆಯಂ ಪೊೞಲಂ ನೆಱೆ ಕಾಡುತ್ತುಂ ಅೞಲಿಸುತ್ತುಂ ದೂರ್ತಿದಂ ನೃಪಸುತನಿರೆ ಮತ್ತಂ ತನ್ನಾಣೆಯಂ ಉೞದುದರ್ಕೆ ಮುಳಿದು ನರೇಂದ್ರಂ: ಧರ್ಮಾಮೃ, ೨. ೫೯) ಬದುಕಿರು (ಭೂಪೋತ್ತಮನ ಆಜ್ಞೆಯಂ ತಲೆಯೊಳಾಂತು ಪದಾನತನಾಗಿ ಕಪ್ಪಮಂ ತೆತ್ತು ಉೞ, ಗಂಡುಗೆಯ್ಯದೆ ಇಱವಿಟ್ಟಿಗೆ ಜಟ್ಟಿಗನಾಗಿ ಬಾೞ್ವುದು ಅತ್ಯುತ್ತಮ ಪಕ್ಷಂ: ಪಂಪರಾ, ೮. ೨೬); ಬಿಟ್ಟದ್ದು, ಲಾಭವಾದುದು (ನಾಲ್ಕರ್ಥಕ್ಕೆ: ಉೞದುದೆಂದು ಬಿಟ್ಟುದು: ಶಬ್ದಮದ, ೩೩ ವೃತ್ತಿ, ೧೭೭); ಶಕುನದ ಹಕ್ಕಿ (ಅದಲ್ಲದೆಯುಂ ಪ್ರಯಾಣಶಕುನದೊಳ್ ಉೞಯನೊಂದಂ ಕಂಡಂತೆ ಕಳಿಯೆ ತಡೆಯದೆ ಗರವೊಡೆದಂತೆ ಮೇಲ್ವಾಯ್ದೆವಪ್ಪೊಡೆ, ತಮ್ಮ ಮೇಲೆ ತಾವೆ ಮರಂಗಡಿದರೆಂಬಂತಕ್ಕುಂ: ಪಂಚತಂತ್ರ, ೨೮೦ ವ)

ಉೞ

ಒಂದು ನೋಂಪಿ (ಉೞ [ಉಗಿ] ಎಂದೊಂದು ನೋಫಿ, ಶಬ್ದಮದ, ಪ್ರಸಾ, ೩೪)

ಉೞಕು

ಉಳಿದದ್ದು (ಒಂದರ್ಥಕ್ಕೆ: ಉೞಕು, ಉೞವು, ಕೞವು ಎಂಬಿವು ಭಾವವಾಚಿಗಳ್: ಶಬ್ದಮದ, ೩೩ ವೃತ್ತಿ ೧೫)

ಉೞಗಿರ್

ತಪಸ್ಸುಮಾಡು (ಪರಿದು ವಿಮಾನದ ಓವರಿಗಳೊಳ್ ಪಡಿಗೆತ್ತು ಉರಿಗಿರ್ಪೆನೋ .. .. ಏತೆಱದಿಂದೆ ವಂಚಿಪೆಂ: ಆಚವರ್ಧ, ೧೦. ೫೭)

ಉೞತ

ಕತ್ತಿಕಾಳಗದ ಒಂದು ವರಸೆ (ಆಗಳಿರ್ವಲದ ಕಡಿತಲೆಕಾಱರ್ ಅಲಗಿನೊಳ್ ಪಳಂಚೆ ತಾಗಿ ನಿರ್ಘಾತ ಉಪ್ಪರಂ ತಾಳವಟ್ಟಂ ಅವಿತಂ ಉೞತಂ ಎಂಬ ಪಲವುಂ ತೆಱದದ ಇಱವ ಬಿನ್ನಣದೊಳ್ ನೆಱೆದು ತಾಳುಂತಟ್ಟುಂ ಪೊಯ್ಯೆ: ಪಂಪರಾ, ೧೩. ೫೪ ವ)

ಉೞದ

ಬೇರೆಯ, ಮಿಕ್ಕ (ಮತ್ತಮಾ ವೃಷಭನಾಥಂ ಉೞದ ಅಪತ್ಯವರ್ಗಕ್ಕೆಲ್ಲಂ ಇಳಾತಳವಿಭಾಗಮಂ ಪಚ್ಚುಕೊಟ್ಟು: ಆದಿಪು, ೯. ೭೨ ವ)

ಉೞದರ್

ಮಿಕ್ಕವರು (ಮಣಿಮಾಳಿಯಂ ಕಂಡು ಜಾತಿಸ್ಮರನಾಗಿ ಮಣಿಮಾಲೆಯಲ್ಲದೆ ಉೞದರ್ ಆರುಮಂ ಸಾರಲೀಯದೆ: ಆದಿಪು, ೨. ೧೫ ವ)

ಉೞದುದು

ಇತರ (ಕಿವಿಯಿಂ ಬಗೆವುಗುವೊಡೆ ಕೊಂಕುವೆತ್ತ ಪೊಸನುಡಿಯೆ ಪುಗುಗುಂ ಉೞದುದು .. .. ಬಗೆಯಂ ಮುಟ್ಟುಗುಮೇ: ಆದಿಪು, ೧. ೧೮)

ಉೞಪು

ಇರುವಂತೆ ಮಾಡು; ಬದುಕಿಸು; ಮುಚ್ಚುಮರೆ ಮಾಡು (ಏಕುೞಪಿ ಪೇೞ್ವೆ ಮಗಳೇ ಪ್ರಾಕಟಮಾಗಱಯೆ ಪೇೞ: ಕರ್ಣನೇಮಿ, ೮. ೬೫)

ಉೞಯೆ ಪೋಗು

ಹಿಂದೆ ಹಾಕಿ ಹೋಗು, ದಾಟಿ ಸಾಗು (ನಾಕಿನಿಕಾಯಂ ಜ್ಯೋತಿರ್ಲೋಕಮನವಯವದಿನುೞಯೆ ಪೋಗೆ: ಆದಿಪು, ೭. ೬೦)

ಉೞವು

ಉಳಿಯುವಿಕೆ (ಎಮ್ಮ ಸಾವುಂ ಉೞವುಂ ದೈವೇಚ್ಛೆಯಾಯ್ತಾಗದೇ: ಪಂಪಭಾ, ೨. ೮೯)

ಉೞಸು

ಸಹಿಸು (ಉೞಸು ಸಹನೇ: ಶಬ್ದಮದ, ಧಾ, ೬೮೨)

ಉೞುಗ

ಶಕುನದ ಹಕ್ಕಿ (ಉೞುಗನೆಂದು ಶಕುನದ ಹಕ್ಕಿ: ಒಂದರ್ಥಕ್ಕೆ: ಶಬ್ದಮದ, ೩೩ ವೃತ್ತಿ ೧೬)

ಉೞುಗಿದಂ

ಪ್ರೀತಿಸಿದವನು ೯ಉೞಗುದನೆಂದನೆಂದು ಕೂರ್ತಂ: ಶಬ್ದಮದ, ಪ್ರಸಾ, ೩೫)

ಉೞುಗಿಸು

ಒಲಿಸು (ನಿನ್ನಂ ಉೞುಗಿಸಲುಂ ಆಜಿಯೊಳ್ ಎನ್ನಂ ಬೆಂಕೊಂಡು ಕಾದಲುಂ ಬಂದು ಈಗಳ್ ಬಿನ್ನನೆ ಮೊಗದಿಂ ಬೀರರ್ ಬೆನ್ನಿತ್ತುದಂ ಇನಿಸು ನೋಡ ಸರಸಿಜಮುಖೀ: ಪಂಪಭಾ, ೩. ೭೩)

ಉೞುಗು

ಪ್ರೀತಿಸು (ಬೊಟ್ಟೆಯನುೞುಗಿಸಲ್ ಅಳವಡಿಸೊಲಿಯಿಸಿ ಪಾಱನದಿರ್ಪಲ್: ವರ್ಧಮಾಪು, ೮. ೯೪); ಪ್ರೀತಿ (ಉಳುಗು ಎಂದು ಬೇಟಂ: ಒಂದರ್ಥಕ್ಕೆ: ಶಬ್ದಮದ, ೩೩ ವೃತ್ತಿ ೧೫)

ಉೞುಮೆ

ಉಳುವ ಕೆಲಸ, ಬೇಸಾಯ (ಕೆಯ್ಯುೞುಮೆಯಂತೆ ಕೆಯ್ಯೊಳ್ ಪದಂಬಡೆದಂತೆ ಬಿತ್ತಣದಂತೆ ರಾಶಿಯಂತೆ: ಧರ್ಮಾಮೃ, ೧೨. ೧೪ ವ)

ಉೞ್

ನೇಗಿಲಿನಿಂದ ಅಗೆ, ಉಳು (ಕುಡುಗೋಲಂ ಕೂಱಗೆಯಂ ಕೊಡಲಿ ಕುರುಂಜಿಗೆಯಂ ಉೞುವ ಪರಗುವ ಕಱುಪಿಂ ಬಿಡದೆಯಗುೞ್ದಾ ಮುಟ್ಟಂ ಕುಡರ್ ಎರವಂ ಪೆಱರ್ಗೆ: ಸಮಯಪ, ೫. ೧೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App