ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಜ್ವಳಿಕೆ

ಕಾಂತಿ (ಚಂದ್ರಕಿರಣದುಜ್ವಳಿಕೆಯಿಂ ಆ ಭರತನ ಮುಳಿಸಸೊಗೆಯನನುಕರಿಸಿದುದು: ಆದಿಪು, ೧೧. ೭)

ಉಟಜ

ಪರ್ಣಶಾಲೆ (ವಿರಹದೆ ರಾಮ ಬಾಣದ ಉಟಜಾಂಗಣ ರಮ್ಯಶಿಲಾತಲಂಗಳೊಳ್ ಬರೆಯೆ: ಕಾದಂಬ, ೧. ೯೭)

ಉಂಟು

ನಿಜ, ಇದೆ (ನಣ್ಪಿಂ ನಿಮಗಂ ಎಮಗಂ ಆಮ್ನಾಯದಿಂ ಬಂದುದು ಇಂತೀ ಜಿನಧರ್ಮಂ ಪ್ರಾಣಿಗಾರ್ಮಂ ಮಱೆಯದಿರಿದು ನಿನ್ನೆಂದುದು ಉಂಟು ಇಲ್ಲ ಪೇೞಂ: ಆದಿಪು, ೨. ೨೦)

ಉಂಟೊಡೆತಾಗಿ ಮಾಡು

ಹೌದು, ಇದೆ ಎಂಬುದನ್ನಾಗಿ ಮಾಡಿ (ಆತ್ಮವಿಟತ್ತ್ವಮಂ ಉಂಟೊಡೆತಾಗಿ ಮಾಡಿ ಬಾಂದೊಱೆಯನೆ ಪೊತ್ತು ಗೌರಿಗೆ ಕವಲ್ದೊಱೆಗೆಯ್ಸಿದಂ ಈ ಪ್ರದೇಶದೊಳ್: ಪಂಪಭಾ, ೭. ೭೫)

ಉಟ್ಟುದಿಕ್ಕು

[ಉಟ್ಟುದು+ಇಕ್ಕು] ಉಟ್ಟ ಬಟ್ಟೆಯನ್ನು ಬಿಡು, ದಿಗಂಬರನಾಗು (ತಲೆವಱದು ಉಟ್ಟುದಿಕ್ಕಿ ಸುರಲೋಕಸುಖಂಗಳಂ ಉಣ್ಬೆವೆಂಬ ಬತ್ತಲೆಗರ ಮಾತುಗೇಳದಿರು: ಆದಿಪು, ೨. ೯)

ಉಟ್ಟುದುವರಂ

ಉಟ್ಟ ಬಟ್ಟೆಯವರೆಗೂ (ಬಯ್ದು ಎನಿತಾನುಂ ತೆಱದಿಂದಂ ಉಟ್ಟುದುವರಂ ಕೆಯ್ದಂದು ದುಶ್ಶಾಸನಂ ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣೆಯಾ: ಪಂಪಭಾ, ೭. ೫)

ಉಡಮೊಗ

ಬಾಗೆಹೂ[ವಿನಂತಹ] ಮುಖ (ಉಡಮೊಗಮೆಂಬ ತಾವರೆಯ ನೀಳ್ದೆಸಳೊಳ್ ಮಱದುಂಬಿ ಪಾಯ್ದು ಒಡಂಬಡನೊಳಕೊಂಡು ಕಣ್ಮಲರ ಬೆಳ್ಪುಗಳ್ ಆಲಿಯ ಕರ್ಪಿನೊಳ್ ಪೊದಳ್ದು; ಪಂಪಭಾ, ೫. ೭೮)

ಉಡಲಿಕ್ಕು

ಉಡುಗೊರೆಯನ್ನು ಕೊಡು (ಸಾಸಿರ ಪೊಂಗೆಯ್ದುಂ ಚಿಃ ಕಾಸಟಮೆಂದು ಒಂದು ಲಕ್ಕಗೆಯ್ವುದಿದರ್ಕಂ ಮಾಸರಂ ಉಡಲೆಂದು ಅಧಿಕ ವಿಳಾಸದಿಂದ ಉಡಲಿಕ್ಕಿ ನೆಱೆಯೆ ಬಿಯಮಂ ಮೆಱೆದಂ: ಪಂಪಭಾ, ೩. ೪೪)

ಉಂಡಲಿಗೆ

ಕಡುಬು (ಮಂಡಗೆ ಮೇಣ್ ಹೂರಿಗೆ ಮೇಣ್ ಉಂಡಲಿಗೆಗಳಿಕ್ಕಿ .. .. ಕೊಡುವುದು ದೃಢವ್ರತಂಗಱೊಳ್: ಅನಂತಪು, ೧೦. ೭೬)

ಉಡಿ

ಒಡೆದುಹೋಗು (ಪೊಲಂ ಉಡುಗಿ ಬಂದುದು ಉಡಿದುದು ಪುಲ್ ಕಾಡುಂ ದಲ್ ಎಲೆಯಿಕ್ಕಿ ಘಳಿಲೆನೆ ನಿಂದುವು ತಣಿದುವು ಮೃಗಂಗಳ್ ಎತ್ತಲುಮೀಗಳ್: ಪಂಪಭಾ, ೫. ೩೭); ತುಂಡುಮಾಡು (ಕಡುಲೋಭಂ ತನ್ನ ಕಾಲ್ಗಳಂ ಪಿಡಿದು ಉಡಿದಂ: ಆದಿಪು, ೫. ೨೦); ಮುರಿದುಹೋಗು (ಎಲ್ಲಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮಂ ಅಯಸ್ಕಾಂತಮಂ ತೋಱ ತೆಗೆಯಿಸುತ್ತುಂ: ಪಂಪಭಾ, ೧೧. ೨ ವ); ಚಿಗುರಿಡು (ಪೊಲನುಡುಗಿ ಬಂದುದು ಉಡಿದುದು ಪುಲ್ ಕಾಡುಂ ದಲೆಲೆಯಿಕ್ಕಿ ಘಳಿಲೆನೆ ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ್: ಪಂಪಭಾ, ೫. ೩೭); ಚೂರು (ಎಲ್ಲಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮಂ ಅಯಸ್ಕಾಂತಮಂ ತೋಱ ತೆಗೆಯಿಸುತ್ತುಂ: ಪಂಪಭಾ, ೧೧. ೨ ವ); ಮಡಿಲು (ಪಲತೆಱದ ನಳನಳಿಸಿ ಬೆಳೆದ ಎಳವಾೞೆಯ ಸುೞಯೆಲೆಯಂ ಉಡಿಯೊಳ್ ಅಮರ್ಚಿಯುಂ: ಕಬ್ಬಿಗಕಾ, ೯೮ ವ); ಒಂದು ರೋಗ (ಉಡಿ ಮೋಟನೇ ರೋಗಭೇದೇ ಚ: ಶಬ್ದಮದ, ಧಾ ೨೭೫)

ಉಂಡಿಗೆ

ಮುದ್ರೆ (ಎಲ್ಲಡೆಗಳುಮಂ ತನ್ನಟ್ಟಿದೋಲೆಗಂ ಇಟ್ಟ ಉಂಡಿಗೆಗಂ ಬಸಂ ಮಾಡಿದ ನನೆವಿಲ್ಲ ಬಲ್ಲಹಂ ನಿಮ್ಮಡಿಗಳ ಪೆಸರಂ ಕೇಳ್ದು: ಕಬ್ಬಿಗಕಾ, ೧೩೧ ವ); ಅಪ್ಪಣೆ ಚೀಟಿ, ಅಧಿಕಾರ ಮುದ್ರೆ (ಮಾಮರಂಗಳೊಳ್ ಕನರ್ಗೊನೆ ಮೂಱು ನಾಲ್ಕು ತಲೆದೋಱದುವು ಉಂಡಿಗೆ ಸಾಧ್ಯಮಾದುದು ಇನ್ನೆನಗೆ: ಮಲ್ಲಿನಾಪು, ೫. ೨೩); ಗಂಟಲು (ಪೊಸಮುತ್ತಂ ನುಂಗಿದ ಸೋಗೆವಿಂಗಡಣಂ ಮಱುಗಿದವು ಉಂಡಿಗೆ ಬೇಯೆಕೆಂಡಮಂ ನುಂಗಿದವೋಲ್: ಪಂಪರಾ, ೭. ೯೬)

ಉಂಡಿಗೆ ಸಾಧ್ಯಂ ಮಾಡು

ತನ್ನ ಹೆಸರಿನ ಮುದ್ರೆ ಬೇರೆಡೆ ಚಲಾವಣೆಯಾಗುವಂತೆ ಮಾಡು, ಆ ಪ್ರದೇಶವನ್ನು ಗೆಲ್ಲು (ಅಂತು ಷಟ್ಖಂಡಭರತಮಂಡಳಮಂ ಉಂಡಿಗೆ ಸಾಧ್ಯಂ ಮಾಡಿ: ಆದಿಪು, ೧೫. ೩ ವ)

ಉಂಡಿಗೆಯೊತ್ತು

ಮುದ್ರೆ ಒತ್ತು, ಸ್ವಾಧೀನಪಡಿಸಿಕೊ (ಅರಸರ ಕಾಪಿನ ಪೊಲನಂ ಪೊಕ್ಕುವೆಂದು ಉಂಡಿಗೆಯೊತ್ತಿಕೊಳುತ್ತುಂ ಊೞಗವಾದೆಡೆಗಳೊಳ್ ಝಾಳೆಯಂಗೊಳುತ್ತುಂ: ಸುಕುಮಾಚ, ೭. ೩೫ ವ)

ಉಡಿಸು

ಉಟ್ಟುಕೊಳ್ಳುವಂತೆ ಮಾಡು (ನುಡಿಸಿದನೆನ ನಲ್ಲಂ .. .. ಉಡಿಸಿದಂ ಒಳ್ಳುಡೆಯಂ: ಕವಿರಾಮಾ, ೩. ೨೬೪)

ಉಡು

ಧರಿಸು (ಅಯ್ಯಾ ಎನಗುಡಲೇನಾನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೋಡೀಯಿಂ: ವಡ್ಡಾರಾ, ಪು. ೭೭, ಸಾ. ೧೧); ಹಲ್ಲಿ ಜಾತಿಯ ಒಂದು ಪ್ರಾಣಿ (ಅಂತು ಅಪೂರ್ವಂಗಳಾಗಿ ತೊಳಗುವ ಕಿಱುದೊಡೆಗಳ್ ಉಡು ಅಡರ್ದನ್ನಮಾರೂಢ ಸರ್ವಜ್ಞ ದೊಡ್ಡ ಮಾರ್ಗಂಗಳ್ ಎಳವಾೞೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು: ಪಂಪಭಾ ಪರಿಷತ್ತು, ೨. ೩೯ ವ); ನಕ್ಷತ್ರ (ಅಮೃತಕರದ್ಯುತಿಯುಂ ಉಡುಗಣದ್ಯೋತಿಯುಂ ಅಸ್ತಮಿಸೆ: ಪಂಚತಂತ್ರ, ೨೭೮)

ಉಡುಕ

ಕುಂದುವಿಕೆ (ದಾನಗುಣಂಗಳ್ ಕಿಡೆ ತೇಜದ ಉಡುಕಮೇಂ ಪಿರಿದಾಯ್ತೇ: ಆದಿಪು, ೬. ೫೧)

ಉಡುಗಿಬರ್

ಒಕ್ಕಣೆಯಾಗು (ಪೊಲನುಡುಗಿ ಬಂದುದು ಉಡಿದುದು ಪುಲ್ ಕಾಡುಂ ದಲ್ ಎಲೆಯಿಕ್ಕಿ ಘಳಿಲೆನೆ ನಿಂದುವು ತಣಿದುವು ಮೃಗಂಗಳ್ ಎತ್ತಲುಮೀಗಳ್: ಪಂಪಭಾ, ೫. ೩೭)

ಉಡುಗಿಸು

ಪರಿಹರಿಸು (ಸೀಮೆಗಳ ತೊಡರಂ ಉಡುಗಿಸಿ ಸೀಮಂಕರನೆಂಬುದೊಂದು ಪೆಸರಂ ಪಡೆದಂ: ಆದಿಪು, ೬. ೫೭)

ಉಡುಗು

ಕ್ಷೀಣಿಸು (ಆಯುಷ್ಯಮುಡುಗಿ ಬಂದೆಡೆಯೊಳ್ ಬೇಡಿರ್ದೆಲ್ಲ ಸುಕೃತಮುಮಂ ಇತ್ತಿರ್ದೆಡೆಯಿಂದೆತ್ತಿ ಪೂಜಿಪರ್ ಸಲೆ ಜೈನರ್: ಸಮಯಪ, ೪. ೮೬); ಒಳಸೇರು; ನಿಂತುಹೋಗು; ಹಿಂತೆಗೆದುಕೊ (ಬೇಡ ಬೇಡ ಅಂಬಂ ತುಡದಿರ್ ಉಡುಗಿದರ್ ಮೃಗವಲ್ಲ ಇಲ್ಲಿ ಸಂದೆಯಮಿಲ್ಲ ಆಂ ಬಲ್ಲೆಂ: ಕರ್ಣನೇಮಿ, ೧. ೭೫ ವ); ಕಡಿಮೆ ಮಾಡು (ಕುಳಿರ್ವ ತಿಳಿನೀರಂ ಉಡುಗದೆ ತಳಿ: ಆದಿಪು, ೨. ೧೪); ಗುಡಿಸು (ನಾನಾವಿಧ ಧಾನ್ಯಂಗಳಂ ಪದನಱದು ಉಡುಗುವ ಕಣಂ ಮಾಡುವ ಒಕ್ಕುವ ಅಡುಕುವ: ಆದಿಪು, ೬. ೭೭ ವ)

ಉಡುಗೆ

ಹಾಕಿಕೊಳ್ಳುವ ಬಟ್ಟೆ (ಪಿಡಿದ ಜವನಿಕೆಯ ಮಱೆಯೊಳ್ ತೊಡವುಮಂ ಉಡುಗೆಯಂ ಅಂಗದಿಂ ಪಿಂಗಿಸಿ: ಆಚವರ್ಧ, ೧೫. ೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App