ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಡುಗೊಱೆ

ಕಾಣಿಕೆ (ಶ್ರೀವಿಜಯಂ ಸುತಾರೆಯೊಳ್ ನೆರೆದು .. .. ಅನೇಕ ಪಸದನದುಡುಗೊಱೆಸಹಿತಂ ಕಳಿಪೆ: ಶಾಂತಿಪು, ೬. ೨೩ ವ)

ಉಡುತತಿ

ನಕ್ಷತ್ರಗಳ ಸಮೂಹ (ಕೊಳನಂ ಗಗನಂ ನೀರ್ವೂಗಳಂ ಉಡುತತಿ ನೀರಂ ಅಚ್ಚವೆಳ್ದಿಂಗಳ ಬೆಳ್ಪಳಿಸೆ: ಅಜಿತಪು, ೬. ೪೪)

ಉಡುಪ

ಚಂದ್ರ (ಉಡುಪ ವಿರಹ ದುಸ್ಸಹವಾಸರಂಗಳಂ ಕೞಪಲ್ಕೆ ಕುಮುದಿನಿಯಿರ್ಪ ತಾಂ ಸಿಡಿಲ ಕಿಚ್ಚಿನ ಬೇಗೆಯ ಪಾಱಸಲ್ ಜಲಧರಸಂಕುಲಮಿರ್ಪ ತಾಣಂ: ಕಾದಂಬ, ೭. ೨೩), ಅಂಗಹೀನ (ಭವದಾನನಕ್ಕೆ ಸೋಲ್ತು ಆತ್ಮವಿಲಾಸಮಂ ಉೞದ ತೆಱದೆ ರುಚಿಗೆಟ್ಟು ದಿಗಂತ ವಿಲಂಬಿ ಬಿಂಬಂ ಅಂಬುರುಹವೈರದಿಂದ ಉಡುಪಂ ಉಡುಪನಾದಂತಾದಂ: ಶಾಂತಿಪು, ೫. ೮೮)

ಉಡುಪತಿವಂಶ

ನಕ್ಷತ್ರಗಳ ರಾಜ[=ಚಂದ್ರ]ವಂಶ[ದಲ್ಲಿ ಹುಟ್ಟಿದವನೇ] (ನುಡಿವೊಡೆ ರಾಜಕಾರ್ಯನಯಮೆತ್ತ ಅಬಲಾಜನದ ಬುದ್ಧಿಯೆತ್ತ ಉಡುಪತಿವಂಶ ನೋಡುವೊಡೆ ಇದೊಂದಘಟಂ: ಪಂಪಭಾ, ೭. ೪೫)

ಉಡುಪಾನನೆ

ಚಂದ್ರಮುಖಿ (ಒಡನಿರ್ದ ನಲ್ಲನಂ ಬಿಸುಟು ಉಡುಪಾನನೆ ಪರಿಯೆ: ಹರಿವಂಶ, ೧. ೪೬)

ಉಡುಪಾಸ್ತೆ

ಉಡುಪಾನನೆ (ಪಡೆಗುಂ ಜಯಮಂ ಮದನಂಗೆ ಉಡುಪಾಸ್ಯೆಯ ಚೆಲ್ವನಪ್ಪ ಕಿಱುದೊಡೆಯ ನಯಂ: ಹರಿವಂಶ, ೭. ೨೫)

ಉಡುಮೊಗ

ಶಿರೀಷದ ಹೂವಿನಂತೆ ಕೋಮಲ ಮುಖವುಳ್ಳವನು (ಬಂದರ್ ನಗೆಮೊಗದ ಉಡುಮೊಗದ ಮುದ್ದುಮೊಗದ ಅಂಗನೆಯರ್: ಜಗನ್ನಾವಿ, ೪. ೧೨೩)

ಉಡುರಾಜಾನನೆ

ಚಂದ್ರಮುಖಿ, ಸುಂದರಿ (ಉಡುರಾಜಾನನೆ ರಾಜಶೇಖರನನೊರ್ವಳ್ ಕೂರ್ಮೆಯಿಂ ನೋಡಿದಳ್: ರಾಜಶೇವಿ, ೭. ೧೩)

ಉಡುವರ

ಚಂದ್ರ (ಮಧುರ ತಾರಕಾವಸನಂ ಭಾಸುರ ಚಂದ್ರಕಾತಿಲಕಂ ಉಡುವರ ಕಾಂತಿಯುತಂ ಬೆಡಂಗುವೆತ್ತ್ತಾಗಳ್: ಅಜಿತಪು, ೬. ೩೯)

ಉಡೆ

ಸೊಂಟ (ಉಡೆ ಬಾಳಕಿಯರ ಪಱಕ್ಕೆ ದುಡುಕಿಂದಂ ಪಱದ ಮುಂಜಿ: ಅನಂತಪು, ೧. ೫೮); ಉಡುವ ಬಟ್ಟೆ (ಉಡೆ ಜೋಲಲ್ ನೂಲ್ ಸಡಿಲಲ್ ಮುಡಿ ಪರೆಯಲ್: ಕಾದಂಬ, ೩. ೨೭)

ಉಡೆಗಂಟೆ

ಮಕ್ಕಳಿಗೆ ಸೊಂಟಕ್ಕೆ ಕಟ್ಟುವ ಗಂಟೆಯಾಕಾರದ ಆಭರಣ (ಮಲ್ಲಗಂಟಿನ ತೊಡರ್ಚಿದ ಉಡೆಗಂಟೆಯ ಕಿರ್ಗಟ್ಟಿನ ಸುರಗೊಯ ಕಟ್ಟಿದ ಚಿಂದಿರಯ: ಗಿರಿಜಾಕ, ೬. ೫೫ ವ)

ಉಡೆದೊವಲ್

ಉಟ್ಟಿರುವ ಚರ್ಮ (ಮಣಿ ಉಡೆದೊವಲುಂ ಪೀಲಿಯ ಪಣೆಗಟ್ಟುಂ: ಶಬ್ದಮದ, ೭೫, ಪ್ರ, ೪)

ಉಡೆದೋಲು

ಉಟ್ಟಿರುವ ಚರ್ಮ (ಉಡೆದೋಲಂ ಪಣೆಕಟ್ಟುಂ ಮಡಮೇಱಸಿ ಮೆಟ್ಟಿದ ಎಕ್ಕಡಮುಂ: ವರ್ಧಮಾಪು, ೨. ೪೫)

ಉಡೆನೂಲ್

ಉಡಿದಾರ (ಮೇಲೆ ಮಿಸುಗುವ ಉಡೆನೂಲ ಪಸುರ್ವರಲ ರಶ್ಮಿಗಳಿಂ ಎಳೆವ ಅಸುರಂ: ಆಚವರ್ಧ, ೭. ೯ ವ)

ಉಡೆವಣಿ

ಗೆಜ್ಜೆಯುಳ್ಳ ಉಡಿದಾರ (ಉಡೆವಣಿ ಪಱಯದ ಮುನ್ನಮೆ ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡಲ್ವಡಿಸಿ ಪರಬಲದ ನೆತ್ತರ ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ; ಪಂಪಭಾ, ೧. ೪೬)

ಉಡ್ಡಿಸು

ಹೆದರಿಸು (ಪಿಸುಣ್ ನುಡಿಯಲ್ ಉಡ್ಡಿಸಿ ಸೂಱೆಗೊಳಲ್ ವಿಶಿಷ್ಟರಂ ಮಱುಗಿಸಲ್ .. .. ಅಣಂ ಆಗದು ಕೇಳ್ ತುೞಲಾಳ ಧರ್ಮಮಂ: ಹರಿವಂಶ, ೧೧. ೯೨)

ಉಡ್ಡೀನ

ಗಗನಯಾನ (ಸ್ಫುರತ್ ಉಡ್ಡೀನ ಮರೀಚಿರಾಜಿ ವಿಲಸತ್ಸೂತ್ರಂಗಳಂದಾಗೆ ಬಂಧುರದಂಡಂ ನಭಮಾಗೆ: ಉದ್ಭಟಕಾ. ೧೦. ೨೨)

ಉಣಸು

ಆಹಾರ (ಈ ನುಣ್ಪಳಿಯ ಉಣಸಂ ಕಂಡು ಮನ್ಯುಕೆತ್ತು ಸಯರಿಸದೆ ಇನಿಸುಂ ಕೆಟ್ಟುವೋಗಿ: ಹರಿವಂಶ, ೧೪. ೩೩ ವ)

ಉಣಿಸು

ಊಟ (ನಾಳಿನ ಉಣಿಸು ಎನಗೆ ದೊರೆಕೊಳಿಸಿ ಬಂದುದು ಕರಮೊಳ್ಳಿತ್ತಾಯ್ತೆಂದು ನಗುತಿರ್ಪನ್ನೆಗಂ: ಪಂಪಭಾ ೩. ೨೬ ವ)

ಉಣ್

ಊಟಮಾಡು (ಉಪಾಧ್ಯಾಯಂಗೆ ಕೞಮೆಯ ಕೂೞುಂ ತುಪ್ಪಮುಂ ತೊವೆಯುಂ ಉಣಲ್ಕೊಟ್ಟಟು: ವಡ್ಡಾರಾ, ಪು. ೭೫. ಸಾ. ೧೫); ಅನುಭವಿಸು (ಮಾಡಿದುದಂ ಉಣ್ ಮಹಾರಾಜ ಎಂಬಿನಂ: ಯಶೋಧಚ, ೩. ೩೨)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App