ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉತ್ಕಂಪ

ನಡುಕ (ಉತ್ಕಂಪ ದರಿದ್ರಮಧ್ಯಂ .. .. ಗಾಡಿಯನೀಯೆ ಸೌಮದರಿಯರ್: ಆದಿಪು, ೮. ೭೦)

ಉತ್ಕರ

ಸಮೂಹ, ಗುಂಪು (ದುರ್ವಾರ ದುಃಖೋತ್ಕರಂ ಎಲ್ಲಂ ನೋಡಲ್ ಎನ್ನಿಂದ್ರಿಯನಿವಹದ ದೋಷಂ ದಲಂ: ಕಾದಂಸಂ, ೮. ೩೯); ಸೀಳುವುದು (ಪರಿಗಳಿತ ಪೂತಿಗಂಧರ್ ಖರ ಕಾಕ ಸೃಗಾಲ ಕರಭ ಕೌಶಿಕ ವೃಕ ವಾನರ ವಿಷದಂಷ್ಟ್ರೋತ್ಕರ ಕುರ್ಕುರ ಕೀಟಕ ಭಲ್ಲನಿಕರ ನಿಷ್ಠುರನಿನದರ್: ಶಾಂತೀಶ್ವಪು, ೯. ೧೦೬); ಅಧಿಕ (ಅವಿಚಲಮಪ್ಪ ಲಕ್ಷ್ಮಿ ವಿವಿಧೋತ್ಕರಹೃದಯಮೆನಿಪ್ಪ ವಿದ್ಯೆ ನೋೞ್ಪವರನುರಾಗಮಂ ಪಡೆವ ರೂಪು: ಮಲ್ಲಿನಾಪು, ೩. ೨೦)

ಉತ್ಕರಣ

ಕೆತ್ತನೆ ಕೆಲಸ (ಇಂದ್ರಜಾಲಂ ಎಱಕಂ ಲೆಪ್ಪಂ ಶಿಲಾಕರ್ಮಂ ಉತ್ಕರಣಂ ಚಿತ್ರವಿವಕ್ಷೆ ವಾಸ್ತು ಶಕುನಜ್ಞಾನಂ: ಪುಷ್ಪದಂಪು, ೪. ೫೯)

ಉತ್ಕರ್ಣ

ಮೇಲಕ್ಕೆದ್ದಿರುವ ಕಿವಿ (ಚೂತಾಮೋದಕ್ಕೆ ಮೂಗಂ ತದುಕಿನ ತಳಿರ್ಗಾಸ್ವಾದಮಂ ತತ್ ಪುಳಿಂದೀಗೀತಕ್ಕೆ ಉತ್ಕರ್ಣಮಂ .. .. ಒಪ್ಪಿಇ: ನೇಮಿನಾಪು, ೫. ೯೩)

ಉತ್ಕರ್ಷ

ಹೆಚ್ಚಳ, ಏಳಿಗೆ (ಶೀರ್ಷಾಭರಣಂ ಧರೆಗೆ ಉತ್ಕರ್ಷ ವಿಳಾಸನದ ಭೂಮಿ ಸಕಳ ಕನಕ್ಕಂ: ಯಶೋಧಚ, ೧. ೨೭)

ಉತ್ಕಲಿಕೆ

ವಿರಹಕಾತರ (ಚಿತ್ತದ ಉತ್ಕಲಿಕೆಯಿಂ ನಭಕೆ ಈ ನೆಗೆತಂದಳ್ ಆಗಳುಂ ಮೊಗಮನೆ ನೋಡಲೆಂದು ಉರದೊಳ್ ಈ ನೆಲಸಿರ್ದಪಳ್: ಕಾದಂಸಂ, ೫. ೭೪); ಅಲ್ಲೋಲ ಕಲ್ಲೋಲ

ಉತ್ಕಲ್ಲೋಳ

ಎತ್ತರವಾದ ಅಲೆ (ತಾಱುದ್ದಂಬರಂ ಉತ್ಕಲ್ಲೋಳಂ ಅಸೃಕ್ಸಿಂಧು ಕಾೞ್ಪುರಂ ಬರಿವಿನೆಗಂ ತಾಳುಂ ತಟ್ಟುಂಬೊಯ್ದರ್: ಪಂಪರಾ, ೧೩. ೬೪)

ಉತ್ಕಶಿಖಂಡಿತಾಣ್ಡವ

ಉತ್ಕಂಠಿತವಾದ ನವಿಲಿನ ಕುಣಿತ (ಉತ್ಕಶಿಖಂಡಿತಾಣ್ಡವಮನೋಹರಂ: ಆದಿಪು, ೧. ೬೩)

ಉತ್ಕಳಿಕಾವಿಲಾಸ

ಮೊಗ್ಗುಗಳ ವೈಭವ (ಪುಳಕೋದ್ಗಮಂಗಳುಂ ತನುಲತೆಯೊಳ್ ಪೊದಳ್ದು ಒದವೆ ತಾಳ್ದಿದಳ್ ಉತ್ಕಳಿಕಾವಿಲಾಸಮಂ: ಪಂಪರಾ, ೭. ೧೦೬)

ಉತ್ಕಳಿಕೆ

ಮೊಗ್ಗು (ಜೋಲ್ವರ್ ಉತ್ಕಳಿಕೆಯಿನಾಮ್ರವಲ್ಲರಿಯೊಳ್ ಓಪರ್ ಆ ಪುರನಂದನಂಗಳೊಳ್: ಅನಂತಪು, ೧. ೯೫); ವಿರಹ ಕಾತರ (ನವವರನಂ ನೋಡುವ ಉತ್ಕಳಿಕೆಯಿನೇಂ ಯುವತಿಯ ಕಣ್ಣುಂ ಮನಮುಂ ಜವನಿಕೆಯಂ ಕನ್ನಮಿಕ್ಕಲಡಪಡಿಸಿದುದೋ: ಅನಂತಪು. ೬. ೫೬)

ಉತ್ಕಳಿತ

ಮೊಗ್ಗು ಒಡೆದ (ಸಕಳ ಕಳೋತ್ಕಳಿತ ಸರಸ ಸಹಕಾರಕೋರಕಕಬಳನಮದಮಧುರ ಕೋಕಿಳ ಕೋಳಾಹಳಾಕುಳಿತ ಕೃತಕಕೇಳೀಶೈಳಶಿಖರಂಗಳೇ: ಆದಿಪು, ೪. ೫೨ ವ)

ಉತ್ಕೀರ್ಣ

ಚೆದುರಿದ (ಕುಲಗಿರಿ ಶರಣಸ್ಥಾನಂ ಉತ್ಕೀರ್ಣಫೇನಂ ಬಳವದ್ವೀಚೀವಿತಾನಂ ಪ್ರಬಳ ಘುಳುಘುಳುಧ್ವಾನಂ ಅಂಭೋನಿಧಾನಂ: ಜಗನ್ನಾವಿ, ೧. ೨೬); ಕೆತ್ತಲ್ಪಟ್ಟ (ಸಮುದ್ರ ಉತ್ಕೇರ್ಣ ನಿವಾಸಂಗಳಪ್ಪ ಪಟ್ಟಣಂಗಳುಮಂ: ಆದಿಪು, ೮. ೬೩ ವ)

ಉತ್ಕೂಟ

ಎತ್ತರವಾದ ಶಿಖರ (ದುರ್ಯೋಧನ ಊರು ಕ್ಷಮಾಧರ ವಜ್ರಂ ಕುರುರಾಜರತ್ನ ಮಕುಟ ಉತ್ಕೂಟ ಅಂಘ್ರಿ ಸಂಘಟ್ಟಸಂಗರಂ ಎಂದು ಅಭಿವರ್ಣಿಪೆಂ ರಣಯಶ್ಶ್ರೀರಾಮನಂ ಭೀಮನಂ: ಗದಾಯು, ೧. ೫೨)

ಉತ್ಕೃಷ್ಟ

ಉತ್ತಮವಾದ (ಅಲ್ಲಿ ಉತ್ಕೃಷ್ಟನಿಕೃಷ್ಟಕಾಲಸ್ಥಿತಿಯೊಳ್ ಅಯ್ನೂಱು ಬಿಲ್ಲಿಂದಂ ಏೞುಮೊೞದೇಹಪ್ರಮಾಣದೊಳ್: ಆದಿಪು, ೯. ೧೨೧ ವ)

ಉತ್ಕೆ

ಉತ್ಕಂಠತೆ, ವಿರಹಕಾತರ ಉನ್ಮನಮೆ ಮಾೞ್ಕುಂ ಉತ್ಕೆಯಂ ಉನ್ಮದ ಬರ್ಹಿಣಶಿಖಂಡಿಕೇಕಾವಿರುತಂ .. .. ದೆಸೆದೆಸೆಗೆಸೆಗುಂ: ಕಾವ್ಯಾವಲೋ, ೪೬೦)

ಉತ್ಕೇತು

ಹಾರಾಡುವ ಬಾವುಟ (ಸಾಕೇತಂ ಉತ್ಕೇತು ಬಾಹುಗಳಿಂದಂ ಕರೆವಂತೆ ಏನೆಸೆದುದೋ ಸರ್ವಾರ್ಥಸಿದ್ಧೀಶನಂ: ಆದಿಪು, ೭. ೨)

ಉತ್ಕೇಸರಕೋಟಿ

ಮೇಲೆದ್ದ ಅಸಂಖ್ಯಾತ ಕೇಸರಗಳು (ಈ ಸರಸೀರುಹಂಗಳ ಅವನೀಪದದೊಳ್ ಬಿಸುಟೆಂತು ಪೋಪೆವೆಂಬೀ ಸಮಕಟ್ಟಿನೊಳ್ ನೆಲಸಿದಂತೆರಗಿರ್ದುವು ಷಟ್ಪದಂಗಳ್ ಉತ್ಕೇಸರಕೋಟಿ ಸಂಕಟ ಕುಶೇಶಯ ಕೋಶಕುಟೀರಕಂಗಳೊಳ್: ಪಂಪಭಾ, ೪. ೪೭)

ಉತ್ಕ್ರಾಂತಿ

ನಿರ್ಗಮನ (ಚಿತ್ತದೊಳೊಂದುಂ ತೊದಳಿಲ್ಲದೆ ಎನ್ನಸುಗಣಕ್ಕೆ ಉತ್ಕ್ರಾಂತಿಯಂ ಮಾಡುವೆಂ: ಗದಾಯು, ೯. ೨೯)

ಉತ್ಕ್ಷೇಪ

ಮೇಲೆ ಹಾರಿಸು (ಭೂವಲ್ಲಭ ಸೋತ್ಕ್ಷೇಪ ಭ್ರೂವಿಲಸಿತದತ್ತವಾಚನಾದೇಶಂ ಇದಂ ಭಾವಿಸಿಂ ಎಂದು ಅತಿಮಧುರೋದ್ಭಾವಿತ ಗಂಭೀರನಾದದಿಂ ಬಾಜಿಸಿದಂ: ಆದಿಪು, ೧೪. ೪೬)

ಉತ್ಖಾತ

ಒರೆಯಿಂದ ಎಳೆಯಲ್ಪಟ್ಟ (ಗಂಡಗುಣಂ ವೀರಶ್ರೀಗಾದುದು ನೃಪವೀರಭುಜೋತ್ಖಾತ ಖಡ್ಗ ಧಾರಾಶ್ರಯದಿಂ: ಮಲ್ಲಿನಾಪು, ೩. ೧೩)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App