ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894546Next >

ಉಂಕೆ

ಒಂದು ಜಾತಿಯ ಹಕ್ಕಿ (ನಿನ್ನ ಭರ್ತಾರಂ ಬೇಂಟೆಯಾಡಿ ಪಲವುಂ ಲಾವುಗೆಯುಂ ಉಂಕೆಯುಂ ಕೊರಸುಂ ಮೊದಲಾಗೊಡೆಯ ಪಕ್ಷಿಜಾತಿಗಳಂ ಬಲೆಯನೊಡ್ಡಿ ಪಿಡಿದು: ವಡ್ಡಾರಾ, ಪು. ೧೫೧, ಸಾ. ೩)

ಉಕ್ಕಡ

ನಗರದ ಗಡಿ (ಗರಟಿಗೆಯುಕ್ಕಡದ ವಿಯಚ್ಚರರಂ ಪೇಸೇೞೆಕೊಂದರೋ: ಶಾಂತಿಪು, ೩. ೧೦೦); ಶಾಂತಿಪು (ಗರಟಿಗೆಯ ಜಾವದ ಉಕ್ಕಡದ ಉಲಿ ಮೞದ ಪೊತ್ತು ಸೂೞ್ಗೆ ಕರುಮಾಡದ ಪಕ್ಕದೊಳಿರ್ದ ಪಟ್ಟದಾನರಯ ಬದಗಂ: ಯಶೋಧಚ, ೨. ೨೭); ಕಾವಲು (ಬಾಗಿಲ್ಗಾಪಿನ ಜಾವದುಕ್ಕಡದ ಗರವಟಿಗೆಯ ಠಾಣಾಂತರದವರೆಲ್ಲಂ ಎರಡು ಕೈಯನೆತ್ತಿ ಪುಂಡರೀಕಾಕ್ಷಂಗೆ ಪೊಡೆವಟ್ಟು: ನೇಮಿನಾಪು. ೭. ೪೪ ವ)

ಉಕ್ಕಂದ

ತುಂಬಿ ತುಳುಕುವ (ಸಿರಿಯಂ ನೋಡಲ್ ಬಂದುದು ಅಮರ್ದಿನ ತಾಯ್ಗಡಲೆಂಬಂದಮಂ ಉಕ್ಕಂದಮಾಗಿ ತಳೆದೆಸೆದಿರ್ಕುಂ: ಮಲ್ಲಿನಾಪು, ೨. ೫೬)

ಉಕ್ಕಲಿಸು

ದರ್ಪದಿಂದಿರು (ನೀಂ ಉಕ್ಕಲಿಸಿದೆಯಕ್ಕುಂ .. .. ಅಮರೇಂದ್ರನ ಮಱೆವೊಕ್ಕೊಡಂ ಆಂ ಕೊಲಿಪೆಂ ಎನ್ನ ಮುಳಿಸನೆ ಸಲಿಪೆಂ: ಹರಿವಂಶ, ೮. ೬೮)

ಉಕ್ಕಿಱ

ಅತಿಶಯವಾಗು (ಮತ್ತಮಾ ಖಗೇಶ್ವರನೆಡವಕ್ಕದೊಳಿಱವ ತಕ್ಕಿನೊಳ್ ಉಕ್ಕಿಱಯನಾಂತುಕೊಂಡು: ವರ್ಧಮಾಪು, ೪. ೪೯ ವ)

ಉಕ್ಕೆವ

ಠಕ್ಕು, ಮೋಸ (ಜೂದಿನೊಳ್ ಉಕ್ಕೆವದಿಂದೆ ಗೆಲ್ದ ನಿನ್ನಂ ಅವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಯೆ ಕೆಯ್ಗೆ ಮಾಡುವ ನಯಂ ಆ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ: ಪಂಪಭಾ, ೭. ೪೦); ಮೋಸಗಾರ (ಮಿಕ್ಕ ಗುಣಂಗಳ ಭವ್ಯರಂ ಉಕ್ಕೆವಂ ಅಜ್ಞಾನದಿಂದೆ ಕಿಡೆ ನುಡಿವುದೆ: ಸಮಯಪ, ೧೩. ೫೦); ಉತ್ಸಾಹ, ಉತ್ಸವ (ಉರಿಯಂ ಕಾಱುವ ಕೆಂಡಮಂ ಕಱೆವ ಬಿಲ್ಲಂ ಕಂಡೆವಿಲ್ಲ ಉಕ್ಕೆವದಿಂ ತರುಣೀರತ್ನಮಂ ಈೞ್ದುಕೊಳ್ವ ಸಮಕಟ್ಟಿಂದಟ್ಟಿದಂ ಖೇಚರಂ: ಪಂಪರಾ, ೫. ೭೮)

ಉಕ್ಕೆವಗುದುರೆ

ಮೋಸದ ಕುದುರೆ (ಪುಯ್ಯಲಿಡೆ ಕಡುಕೆಯ್ದು ಉಕ್ಕೆವಗುದುರೆ ಪೊೞಲನಡೞಲಿಸಿತಾಗಳ್: ಪಂಪರಾ, ೪. ೧೦೬)

ಉಕ್ಕೆವಚಾಮರ

ಉತ್ಸವಕಾಲದ ಚಾಮರ (ಮಂಡೋದರಿಯಂ ಮದೀಯ ಪಿತೃಗೆ ಉಕ್ಕೆಚಾಲಮರಮಿಕ್ಕಲುಯ್ದಪೆಂ: ಪಂಪರಾ, ೧೪. ೧೦೩)

ಉಕ್ಕೆವತನ

ವಂಚಕತನ (ಎಂದು ತನ್ನುಕ್ಕೆವತನದಿನೋದಿಸಿದ ವೃತ್ತಾಂತಮಂ ಆದ್ಯಂತಮಱಯೆ ಪೇೞ್ದು: ಸುಕುಮಾಚ, ೨. ೬೨ ವ)

ಉಕ್ಕೆವತಪ

ಕಪಟ ತಪಸ್ಸು (ಉಕ್ಕೆವತಪದಿಂದಂ ಅನಂತಸುಖಕ್ಕೆ ಕಾರಣಮಪ್ಪ ಸನ್ಮಾರ್ಗಮಂ ಪೆತ್ತೆಂ: ವಡ್ಡಾರಾ, ಪು. ೬. ಸಾ. ೨೫)

ಉಕ್ಕೆವಿಸು

ವಂಚಿಸು (ಪಿತೃಬಂಧುಗಳಂ ತವೆ ಕೊಂದು ತಂದನೆನ್ನಂ ಕುಡದಿರ್ದೊಡೆ ಉಕ್ಕೆವಿಸಿ ನಿನ್ನುಮಂ ಎಮ್ಮಗನಿಂತು ತಂದನೇ: ಕರ್ಣನೇಮಿ, ೮. ೬೭)

ಉಕ್ಕೆಸಱು

(ಉಕ್ಕೆಸಱಾಯ್ತು ಪೊಕ್ಕ ಸರಸೀ ಸಲಿಲಂ ಪೊಗೆಯೆೞ್ದುದು: ಕುಸುಮಾಕಾ, ೧೩. ೫೩)

ಉಕ್ತಿ

ಮಾತುಗಾರಿಕೆ (ಫಳದಿಂ ಕಲ್ಪದ್ರುಮಮಂ ಜಳದಿಂ ಜಳನಿಧಿಯಂ ಉಕ್ತಿಯಿಂ ಸುರಗುರುವಂ ಬೆಳಗಿಂ ದಿನಪನಂ ಅರ್ಚಿಪ ಚಳಮತಿಗಳ ತೆಱನಂ ಆಮುಂ ಅನುಕರಿಸಿರೆವೇ: ಆದಿಪು, ೧೪. ೧೧)

ಉಕ್ತಿಪ್ರೌಢ

ಮಾತಿನ ನಿಪುಣ (ಉಕ್ತಿಪ್ರೌಢರಂ ಭಾವತತ್ಪರರಂ ನೀತಿವಿದರ್ಕಳಂ ರಸಿಕರಂ ಸಾಹಿತ್ಯದೊಳ್ ಸಂದ ಜಾಣರಂ: ಕುಸುಮಾಕಾ, ೧. ೭)

ಉಕ್ತಿವಕ್ರಿಮ

ಮಾತಿನ ಬನಿ (ಅವಳ ಉಕ್ತಿವಕ್ರಿಮಕ್ಕೆ ಸೂಕ್ತಿರತ್ನಾಕರಂ ಮನದೊಳ್ ಮೆಚ್ಚಿ: ಚಂದ್ರಪ್ರಪು, ೪. ೭೯ ವ)

ಉಕ್ಷ

ಎತ್ತು (ಜಿತಾಕ್ಷ ಮಹಾ ಉಕ್ಷಲಕ್ಷ ಫಾಲಾಕ್ಷ .. .. ರಕ್ಷಿಪುದು .. .. ಶಿವಾಕ್ಷಿಸಂಭವಾ: ರಾಜಶೇವಿ, ೧. ೧೦)

ಉಕ್ಷಿತ

ನಿರ್ಮಲವಾದ (ರವಿರುಕ್ಸಂಧು ಉಕ್ಷಿತಾಂಗಕ್ಷಿತಿಪತಿತನಯಂಗಾಯ್ತು ಅರಣ್ಯಂ ಶರಣ್ಯಂ: ನೇಮಿನಾಪು, ೫. ೭೪)

ಉಗಿ

ಹೊರಗೆಳೆ (ವಿನೇಯೋತ್ಕರ ಸಸ್ಯಾವಳಿ ಸುಗಿದು ಅಗಿದು ಕೂಡೆ ಬಾಡಿರ್ದುದು: ಆದಿಪು, ೧೦. ೬೬); ಕತ್ತರಿಸು (ತಿದಿ ಉಗಿದು ಕೊಟ್ಟೆಂ ಒಡವುಟ್ಟಿದ ಕವಚಮಂ ಅಮರಪತಿಗೆ: ಪಂಪಭಾ, ೧೨. ೧೦೯); ಆಕರ್ಷಿಸು (ಧರಣೀಭೃನ್ಮುನಿ ಪೊಱಗಾಗುೞದರ ಕಣ್ಮನಮೆಂಬಿವಂ ಉಗಿವುದು ಅಮರಗಣಿಕೆಯರಾಟಂ: ಶಾಂತಿಪು, ೧೧. ೩೩); ಉಗುರಿನಿಂದ ಸೀಳು (ಉಗಿ ಆಕರ್ಷಣೇ ನಖಕ್ಷತೇ ಚ: ಶಬ್ದಮದ, ಧಾ ೮೫); ಕಡಿಮೆ ಮಾಡು (ನೀರಂ ಸೇದಿಕೊಂಡು ಬಂದು ಕುಡಿಯಲೆಱೆಯೆ ಕುಡಿದು ಕುಡಿಯೆ ಕರಗದದಾರೆಯನುಗಿದು ಕೊಂಡು ಅರಸನಾಕೆಯ ಮೊಗಮಂ ನೋಡಿ: ವಡ್ಡಾರಾ, ಪು. ೧೧೧. ಸಾ. ೪); ಭಯಪಡು (ನರರಿರ್ದರುದಿರ್ದರ ಅಂಬರಚರರಗಿದರ್ ದಿಗಿಭಭನಾಥರುಗಿದರ್ ದನುಜರ್: ಕರ್ಣನೇಮಿ, ೬. ೧೨೦)

ಉಗಿಪಟಂಗೊಳ್

ಸೆಳೆದುಕೊ; ಹೋಗಲಾಡಿಸು (ಬೆಸಗೊಳೆ ದಶನದ್ಯುತಿ ದೆಸೆದೆಸೆಯ ತಮಃಪಟಮಂ ಉಗಿಪಟಂಗೊಳೆ ದೇವಂ ಬೆಸಸಿದನಾ ಕನ್ನೆಗೆ ಪಸರಿಸೆ ಚಿತ್ತವಿಶೋಧಿ ಬೋಧಿಪರಿಣಾಂಂಗಳ್: ಶಾಂತಿಪು, ೪. ೬೫)

ಉಗಿಪದ

ಸುಲಿಗೆ (ಉಗಿಪದಮೆಂದು ಸುಲಿಹಂ: ಶಬ್ದಮದ, ಪ್ರಸಾ, ೨೮)
< previous1234567894546Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App