ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಊರ್

ವಾಸಿಸುವ ಸ್ಥಳ (ತನಗದಂದೊಂದು ಊರ್ ನಾಮದೊಳಂ ವೆಂಗಿಪೞು: ಪಂಪಭಾ, ೧೪. ೪೦)

ಊರ್ಜ

ಕಾರ್ತಿಕ ಮಾಸ (ಏವೊಗೞ್ವೆಂ ಊರ್ಜಶ್ರೀಯ ಬೆಳ್ದಿಂಗಳಂ: ಜಗನ್ನಾವಿ, ೪. ೭೪)

ಊರ್ಜಿತ

ಹೆಚ್ಚಿದ (ವಿಕ್ರಮಪುರವೆಂಬುದುಂ ಅಗ್ರಹಾರ ಸಂಪತ್ಪದವಿಗಳೊಳಂ ಅಗ್ರಗಣ್ಯಂ ಊರ್ಜಿತಪುಣ್ಯಂ: ಪಂಪಭಾ, ೧೪. ೪೧)

ಊರ್ಜಿತತೇಜ

ಹೆಚ್ಚಿನ ತೇಜಸ್ಸುಳ್ಳವನು (ಲಳಿತೆಯ ಗರ್ಭದೊಳಗಿರ್ದಂ ಊರ್ಜಿತತೇಜಂ: ಪುಷ್ಪದಂಪು, ೯. ೧೧೫)

ಊರ್ಡಂಗುರ

ಊರಿನಲ್ಲಿ ಹಾಕುವ ಡಂಗುರ (ಮಱೆಯಂ ಕಾಲನಿದೇಕೆ ಮೈಮಱವಿರೆಂದು ಊರ್ಡಂಗುರಂ ಪೊಯ್ವವಲ್ ಪಱಪೊಯ್ದು: ಅನಂತಪು, ೯. ೨೧)

ಊರ್ಣನಾಭ

ಜೇಡರ ಹುಳು (ಲೂತಾಹ್ವಯಂ ಊರ್ಣನಾಭಂ: ಅಭಿಧಾವ, ೧. ೯. ೮)

ಊರ್ಣೆ

ಹುಬ್ಬಿನ ಕೂದಲು (ಪೆಱೆನೊಸಲೊಳ್ ಬಿಸತಂತುವ ತೆಱದಿಂ ಮಿಱುಗುವುದು ಊರ್ಣೆ: ಕಾದಂಬ, ೨. ೧೦೯)

ಊರ್ಧ್ವಗ

ಮೇಲೆ ವ್ಯಾಪಿಸಿದ (ವಾಸುದೇವ ಬಲದೇವರೊಳ್ ಒರ್ವಂ ಅಧೋಗಂ ಒರ್ವಂ ಊರ್ಧ್ವೋಗಂ ಆದೊಂ: ಶಾಂತಿಪು, ೪. ೧೧೧)

ಊರ್ಧ್ವಗಾಂಶು

ಮೇಲೆ ಹರಡುವ ಕಿರಣ (ಉಷ್ಣಾಂಶುವಿನ ಊರ್ಧ್ವಗಾಂಶುನಿವಹಂ ಮೆಯ್ಯಿಟ್ಟು ಅಲರ್ಚುತ್ತುಂ ಇರ್ಪುದು: ಪಂಪಭಾ, ೪. ೨೨)

ಊರ್ಧ್ವಜ್ವಲನ

ಮೇಲ್ಮುಖವಾಗಿ ಉರಿಯುವುದು (ಎಱಗುವುದು ಊರ್ಧ್ವಜ್ವಲನಮೆ ತೆಱನೆನಿಸುವ ದೀಪವರ್ತಿ ನಿಧಿಗೆ: ಪಂಪರಾ, ೬. ೧೩೫)

ಊರ್ಧ್ವಬಾಹುವ್ರತಿ

ಕೈಗಳನ್ನು ಮೇಲೆ ಎತ್ತಿ ಹಿಡಿದುಕೊಂಡು ತಪಸ್ಸು ಮಾಡುವವನು (ಸಂಸಾರಸಾಗರಮನೀಯಂದದಿಂ ದಾಂಟುವುದೆಂದು ತೋಱುವಂದದಿಂದೊಂದೆ ಕಾಲೊಳ್ ನಿಂದಿರ್ದೇಕಪಾದ ವ್ರತಸ್ಥರುಮಂ: ಪಂಚತಂತ್ರ, ೧೯೦ ವ)

ಊರ್ಧ್ವಯಾನ

ಗಗನಯಾನ (ಮಹೀತಳಂ ಅಹಿಲೋಕದಂತೆಸೆದುದಾ ಜಗತೀಪತಿಗೆ ಊರ್ಧ್ವಯಾನದೊಳ್: ನೇಮಿನಾಪು, ೬. ೩)

ಊರ್ಧ್ವರೇತ

ವೀರ್ಯವನ್ನು ತಡೆಗಟ್ಟಿರುವವನು (ನೆರೆದು ಊರ್ಧ್ವರೇತದೊಳ್ ಪುರುಹಿರಣ್ಯರೇತೋತಿತೀವ್ರದೊಳ್ .. .. ಮುನಿವರನೊಳ್: ಕವಿರಾಮಾ, ೧. ೬೩)

ಊರ್ಧ್ವಲೋಕ

ಮೇಲಿನ ಲೋಕ; [ಜೈನ] ಮೇಲುಗಡೆಯ ಸ್ವರ್ಗಗಳಲ್ಲಿ ಕೊನೆಯದು (ಮಧ್ಯಲೋಕಮೆಸೆದಿರ್ದಾ ಚೂಳಿಕಾಭಾಗದಾದಲೆಯೊಳ್ ನಿಂದಪುದು ಊರ್ಧರ್ವಲೋಕಮೆನೆ ಮೂಲೋಕಕ್ಕೆ ಪೆಂಪಿಂದ ಅಂಗುದಲೆಯಾಗಿರ್ದುದು: ಆದಿಪು, ೧. ೫೦)

ಊರ್ಮಿ

ದೊಡ್ಡ ತೆರೆ, ಅಲೆ (ಇದಿರೊಳ್ ನಿಂದೊಡೆ ವಜ್ರಿ ಸೈರಿಸಂ ಇರಲ್ವೇಡ ಎಮ್ಮೊಳೊಳ್ವೊಕ್ಕು ನಿಲ್ವುದು ನೀಂ ಎಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವು: ಪಂಪಭಾ, ೪. ೨೪)

ಊರ್ಮಿಕಾ[ಕೆ]

ಉಂಗುರ (ರತ್ನಯುಕ್ತ ಊರ್ಮಿಕಾಬಂಧುರಂ ಈ ವಕ್ತ್ರೇಂದುಬಿಂಬಂ ಮೆಱೆವುದು ಅರಿದೇ: ರಾಜಶೇವಿ, ೮. ೪೧); ವಿಷಾದ

ಊರ್ಮಿಮಾಳಿನಿ

ಅಲೆಗಳ ಮಾಲೆಯುಳ್ಳದ್ದು, ನದಿ (ಮೆಲ್ಲನುಗೆ ತೇಂಕುವ ಪೂವಿನ ಸಂಕರಂಗಳಂ ನೂಂಕುವುವು ಊರ್ಮಿಮಾಳಿನಿಯ ತುಂಗತರತ್ತರಳೋರ್ಮಿಮಾಲೆಗಳ್: ಆದಿಪು, ೧. ೬೧)

ಊರ್ಮೆ

ಆಧಿಕ್ಯ, ಶ್ರೇಷ್ಠತೆ (ಸೊಗಯಿಸುವ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆಲ್ವುಗಳ ವಿಲಾಸದ ಊರ್ಮೆಗಳೊಳ್ ಆವೆವು ಆಗಿಪೆವು: ಪಂಪಭಾ, ೧. ೧೦೬)

ಊರ್ವ್ವೇಲಿ

ಊರ ಸುತ್ತಣ ಬೇಲಿ (ರೇಫೆಗೆ ದ್ವಿತ್ವಂ: ನೀರ್ಗ್ಗಿಚ್ಚು, ಊರ್ವ್ವೇಲಿ, ನೀರ್ವ್ವಾನಸೆ: ಶಬ್ದಮದ, ೧೯೫, ಪ್ರ)

ಊಱ ಸಾಱು

ಒತ್ತಿ ಹೇಳು (ಇದಂ ಪುಗಲಿಂ ಗಡಿಂ ಎಂದು ಬೇಟಕಾಱರಂ ಇರದೆ ಊಱ ಸಾಱ ಜಡಿವಂತೆ ಎಸೆಗುಂ ಸಹಕಾರಕೋಮಳ ಅಂಕುರಪರಿತುಷ್ಟ ಪರಪುಷ್ಟಗಳ ಧ್ವನಿ ನಂದನಂಗಳೊಳ್: ಪಂಪಭಾ, ೨. ೧೩)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App