ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಊಱಸು

ಚುಚ್ಚಿಸು, ಇರಿಯುವಂತೆ ಮಾಡು (ಪೆರ್ನೊಣಗಳಿಂತಗುಳ್ದೂಱಸಿಯುಂ ಕಾವಲಿಯೊಳಿಕ್ಕಿ ವಾೞಸಿಯುಂ; ಧರ್ಮಾಮೃ, ೩. ೪೩ ವ)

ಊಱು

ನೆಲೆಯಾಗಿ ನಿಲ್ಲು (ಊಱು ಸತ್ವೇ: ಶಬ್ದಮದ, ೮೪೧); ಸ್ಥಾಪಿಸು (ತೊಳಪ ಹರಿನ್ಮಣಿಕುಟ್ಟಿಮತಳದೊಳ್ ತಳಮಾರೆ ತಳಮನೂಱ ಬೆಡಂಗಂ ತಳರ್ನಡೆ ನಡೆವೆಡೆಯೊಳ್: ಸುಕುಮಾಚ, ೧೦. ೩೯); ಕೆತ್ತು (ಕರ್ಣನ ಎರಡುಂ ತೊಡೆಯುಮಂ ಉಳಿಯಂ ಊಱ ಕೊಡಂತಿಯೊಳ್ ಬೆಟ್ಟಿದಂತೆ ಅತ್ತಂ ಇತ್ತಂ ಉರ್ಚಿಪೋಗೆಯುಂ: ಪಂಪಭಾ, ೧. ೧೦೪ ವ); ಬಾಗು (ಅವರೆ ಕೂರ್ತೆಱಗಿದೊಡೆ ಆ ಭಾರಕ್ಕೆ ತಲೆಉಂ ಊಱುವರಾರುಂ ಪುರುಷರ್: ಲೀಲಾವತಿ, ೧೪. ೧೧೫)

ಊಷರ

ಬಂಜರುಭೂಮಿ (ಆ ಪೊೞ್ತರೆಯೊಳ್ ಕಣ್ದೆರೆದತ್ತು ಊಷರ ಶಯ್ಯಾಧೂಮ್ರ ರೋಮಹರಿಣಸಮೂಹಂ: ಕಾದಂಬ, ೧. ೧೨೫)

ಊಷ್ಮ

ತಾಪ, ಬೆಂಕಿ (ಕುಲಕ್ರಯಾತಪ್ರತಾಪ ಊಷ್ಮಮಂ ಪತ್ತುವಿಡುವರಾತಿಗಳ ಸಂಖ್ಯೆಯೊಳಂ: ಆದಿಪು, ೧೪. ೮೪ ವ)

ಊಳಿಕ್ಕು

ಕೂಗಿಕೊ (ಅಸಿತಪತ್ರವನದೊಳ್ ಊಳಿಕ್ಕೆ ಗುರ್ದುವುದುಂ: ಸುಕುಮಾಚ, ೧೧. ೪೭ ವ)

ಊಳಿಗವಾಗು

ಒಡೆತನದಲ್ಲಿರು (ಅರಸರ ಕಾಪಿನ ಪೊಲನಂ ಪೊಕ್ಕುವೆಂದು ಉಂಡಿಗೆಯೊತ್ತಿಕೊಳುತ್ತುಂ ಊೞಗವಾದೆಡೆಗಳೊಳ್ ಝಾಳೆಯಂಗೊಳುತ್ತುಂ: ಸುಕುಮಾಚ, ೭. ೩೫ ವ)

ಊಳಿಡು

[ನಾಯಿನರಿಗಳು] ಬೊಗಳು (ಊಳಿಡು ಶ್ವಾನಜಂಬುಕಧ್ವನೌ: ಶಬ್ದಮದ, ಧಾ, ೨೭೯)

ಊಳ್

ಗಟ್ಟಿಯಾಗಿ ಶಬ್ದಮಾಡು (ತಳಿರೊಳ್ಗೊಂಬಿನೊಳ್ ಊಳ್ವ ಕೋಕಿಳಕುಳಂ ಪೂಗೊಂಬಿನೊಳ್ ಪಾಡುತಿರ್ಪಳಿವೃಂದಂ: ಆದಿಪು, ೧೧. ೯೬); ನಾಯಿನರಿಗಳ ಧ್ವನಿ (ನೆತ್ತರಂ ಪಡೆಯದೆ ಆಕಾಶಕ್ಕೆ ಬಾಯಂ ತೆಱೆದು ಊಳ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು: ಪಂಪಭಾ, ೧೩. ೫೬ ವ); ನಿಂದಿಸು (ಅದನಜ್ಞಾನಿ ಜನಂಗಳ್ ಪದೆದೂಳ್ವರ್: ಕರ್ಣನೇಮಿ, ೭. ೮೧)

ಊೞಗ

ಕಾರ್ಯ (ಊೞಗವಾದೆಡೆಗಳೊರ್ಳ ಝಾಳೆಯಂಗೊಳುತ್ತುಂ: ಸುಕುಮಾಚ, ೭. ೩೫ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App