ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಋಕ್ಕು

ಋಗ್ವೇದಮಂತ್ರ, ವೇದಮಂತ್ರ (ಉತ್ವಂಬೆರೆಸಿದ ದ್ವಿತ್ವಕ್ಕೆ: ಸಂತ್

ಋಕ್ಷ

ಕರಡಿ (ವಟವಿಟಪಿಯ ಕೆೞಗೆ ತರುಣ ಹರಿಣ ವೃಕ ವರಾಹ ಋಕ್ಷ ತರಕ್ಷು ಪ್ರಮುಖನಿಖಿಲಮೃಗಗಣ ಪರಿವೃತನುಂ ಆಗಿ: ಪಂಚತಂತ್ರ, ೮೧ ವ); ಒಂದು ಜಾತಿಯ ಮರ (ಸ್ರೋತಸ್ಸುರುಚಿರಪುಷ್ಕರಂ ಆತತ ಋಕ್ಷಂ ಗುಹಾನ್ವಿತಂ ಪ್ರಿಯವಂಶ ಉಪೇತಂ ತುಂಗ ಉತ್ಸಂಗಮೇತಂ ಕರಿರಾಜನೆನಿಸುಗುಂ ಗಿರಿರಾಜಂ: ಅಜಿತಪು, ೯. ೨೯); ನಕ್ಷತ್ರ (ಋಕ್ಷಚಯದೊಳ್ ಚಂದ್ರಂ ಪಿರಿದೆಸೆವಂತಿರೆ ಭಕ್ತರ ನೆರವಿಯೊಳ್ ಅಂದಲ್ಲಿ ಸೌಂದರಂ ಕುಳ್ಳಿರ್ದಂ: ತ್ರಿಷಷ್ಟಿಪು, ೩. ೧೮)

ಋಕ್ಷರಾಜ

ಚಂದ್ರ (ನಭಮಂ ಋಕ್ಷರಾಜಾನ್ವಿತಂ ನಾಗಕದಂಬಾನಂತವಿಭ್ರಾಜಿತಮಹಿಪುರಮಂ: ಶಬರಶಂ, ೩. ೨೯)

ಋಕ್ಷಾಕೀರ್ಣ

ನಕ್ಷತ್ರಗಳಿಂದ ಕೂಡಿದ, ಕರಡಿಗಳಿಂದ ಕೂಡಿದ (ಆ ಮಹಾವನಂ .. .. ಗಗನಮಂಡಲದಂತೆ ಋಕ್ಷಾಕೀರ್ಣಮುಂ: ಚಂದ್ರಪ್ರಪು, ೫. ೫೨ ವ)

ಋಚ

ಮಂತ್ರ (ನಾಲ್ಕು ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು ಸಿತ ದೂರ್ವಾಂಕುರವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ ಎನೆ: ಪಂಪಭಾ, ೫. ೭೦ ವ)

ಋಚೆ

ಋಚ (ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಂ ಓದುವ ಋಚೆಗಳುಂ ಪರಸುವ ಪರಕೆಗಳುಂ ಎಸೆಯೆ ಪಸೆಯೊಳಿರ್ದು: ಪಂಪಭಾ, ೩. ೭೬ ವ)

ಋಜು

ಸರಳವಾದ (ಆತ್ಮವಲ್ಲಭನೊಳಾದ ಅನುರಕ್ತತೆಯಂ ಮಹತ್ತ್ವಮಂ ಸಮದ ಪತಿವ್ರತಾಚರಣಮಂ ಋಜುವೃತ್ತಿಯಂ ಅಂದು ಭಾವಿಸುತ್ತ ಒಂದುಮಂ ಎಂದಳಿಲ್ಲ: ಕಾದಂಸಂ, ೮. ೬೮); ಒಂದು ವಸ್ತುವನ್ನು ನೋಡುವ ವಿವಿಧ ಕೋನಗಳು (ಕೆಲರಾಗಳ್ ಋಜುವಿಂದಂ ಅರ್ಧಋಜುವಿಂದಂ ಸಾಚಿಯಿಂದಂ ಕೆಲರ್ ಪಲವು ಭಂಗಿಯಿನಿರ್ದು ಜಾನಕಿಯ ರೂಪಾಶ್ಚರ್‍ಯಮಂ ನೋಡಿ.. ನಿಷ್ಪಂದರಾಗಿರ್ಪುದುಂ: ಪಂಪರಾ, ೫. ೬೫)

ಋಜುಗುಣ

ನೇರ ಸ್ವಭಾವ (ಈ ಋಜುಗುಣಕ್ಕೆ ಆರ್ ಕೂರರ್: ಕಾದಂಸಂ, ೫. ೪೬)

ಋಜುಮತಿ

[ಜೈನ] ಋಜು ಬುದ್ಧಿ (ಕ್ರಮದಿಂ ಋಜುಮತಿಯುಂ ವಿಪುಲಮತಿಯುಂ ಎಂಬದಱ ಭೇದಂ ಇರ್ತೆಱನಕ್ಕುಂ: ಚಂದ್ರಪ್ರಪು, ೧೪. ೫೭)

ಋಜುಮಾರ್ಗ

ನೇರ ಮಾರ್ಗ, ನೇರ ನಡವಳಿಕೆ (ಪಿರಿಯಾತಂ ಸ್ವಭಾವದಿಂ ಋಜುಮಾರ್ಗವೃತ್ತಿಯಂ ತಳೆದು: ಸುಕುಮಾಚ, ೨. ೫೭ ವ)

ಋಜುರೋಹಿತ

ಕಾಮನಬಿಲ್ಲು (ಅಂತಾ ಋಜುರೋಹಿತಂ ತಿರೋಹಿತಮಾಗೆ .. .. ಸಂಸೃತಿಯ ಅನಿತ್ಯತೆಗಿದುವೆ ನಿದರ್ಶನಂ: ಚಂದ್ರಪ್ರಪು, ೪. ೫೧ ವ)

ಋಜುವೃತ್ತಿ

ನೇರ ನಡವಳಿಕೆ (ಋಜುವೃತ್ತಿಯಂ ಅಂದು ಭಾವಿಸುತ್ತ ಒಂದುಮನಂದಳಿಲ್ಲ: ಕಾದಂಬ, ೧೦. ೮೯)

ಋಜ್ವಾಗತ

ನೇರವಾಗಿ ನಿಲ್ಲುವಿಕೆ (ಋಜ್ವಾಗತದೊಳ್ ಬೆರೆಸಿರೆ ತನ್ನಯ ನಿಲವು ಯೋಗಿಸಂಸ್ತವಯೋಗ್ಯಂ: ಪಾರ್ಶ್ವನಾಪು, ೧೫. ೯೬); ನೇರ ಮಾರ್ಗ (ಎಸೆಗುಂ ಋಜ್ವಾಗತಂ ಕಣ್ಗೊಳಿಸುಗುಂ ಅಳವಟ್ಟಿರ್ದ ಋಜ್ವಾಗತಂ: ಅಜಿತಪು, ೨. ೪೫)

ಋಣಂಗುಡು

ಸಾಲ ಕೊಡು (ಉಪದೇಶಂಗೊಟ್ಟರ್ ಋಣಂಗೊಟ್ಟರ್ ಎಂಬ ನಾಣ್ಣುಡಿಯುಂಟು: ಧರ್ಮಾಮೃ, ೬. ೧೩೯ ವ)

ಋಣಸಂಬಂಧ

ಕರ್ಮಾಧೀನ ಬಾಂಧವ್ಯ (ಅಂಬಿಗನೊಳ್ ಆದುದು ಋಣಸಂಬಂಧಂ ನಿನಗೆ ಅಮೋಘಂ: ಪಂಪಭಾ, ೧೩. ೨೬)

ಋತ

ಸತ್ಯ (ಋತಮೆಸೆದಿರ್ಪ .. .. ಮತವಿರ್ಪೆಡೆಯೊಳ್ .. .. ಪುಸಿಯಿರ್ಪ .. .. ಕುತ್ಸಿತಮತಮಿರ್ಪುದಲ್ತು: ನೇಮಿನಾಪು, ೧. ೫೯)

ಋತವಚನ

ಸತ್ಯದ ಮಾತು (ಯತಿಪತಿ ಮುಖಾರವಿಂದೋದ್ಗತ ಋತವಚನಮಂ ಸ್ವಕೀಯಹೃದ್ಗೋಚರಮಾಗೆ: ಸುಕುಮಾಚ, ೯. ೧೧೨)

ಋತವಾಕ್ಯ

ಋತವಚನ (ಅನುಪಮ ವಿಕ್ರಮಕ್ರಮಂ ಉದಾರಗುಣಂ ಋತವಾಕ್ಯಂ ಎಂಬ ಪೆಂಪೆನಲಿವು ಮೂಱೆ ನಾಲ್ಕೆ ಗುಣಂ: ಪಂಪಭಾ, ೧೨. ೯೩)

ಋತು

ಎರಡ ತಿಂಗಳ ಕಾಲ (ಆಗಳ್ ಆಱುಂ ಋತುಗಳ ಪೂಗಳಂ ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಿರ್ಪಂತಿರ್ಪ ಪೂವಿನ ಸಂತೆಯೊಳ್: ಪಂಪಭಾ, ೪. ೮೦ ವ)

ಋತುಕಾಲಪ್ರಾಪ್ತೆ

ಋತುಮತಿಯಾಗು (ಋತುಕಾಲ ಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದೆ ಆಕೆಯಂ ನೆನೆದು ಇಂದ್ರಿಯಕ್ಷರಣೆಯಾದೊಡೆ: ಪಂಪಭಾ, ೧. ೬೮ ವ)
< previous12Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App