ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891920Next >

ಎಕ್ಕಛಾಯ

ಇಂದ್ರನೀಲ (ವರ್ಗದ್ವಿತೀಯಕ್ಕೆ: ಛಪ್ಪಿಸಿದಂ, ಎಕ್ಕಛಾಯಂ, ಠಾವು: ಶಬ್ದಮದ, ೨೫, ವೃತ್ತಿ)

ಎಕ್ಕಟಿ

ಗುಪ್ತವಾಗಿ, ಗುಟ್ಟಾಗಿ (ಕಣ್ಸನ್ನೆಗೆಯ್ವುದುಂ ಆಕೆಗಳ್ ಆತನಂ ಎಕ್ಕಟಿಗಱೆದು: ಲೀಲಾವತಿ, ೧೪. ೨೬ ವ)

ಎಕ್ಕಟಿಗಾಳೆಗ

ದ್ವಂದ್ವಯುದ್ಧ (ಪುದುವೆತ್ತು ಎಕ್ಕಟಿಗಾಳೆಗಂ ಸಮನಿಸಿತ್ತು ಎಮ್ಮೀ ಗದಾಯುದ್ಧಮಂ ತ್ರಿದಶರ್ ನೋಡಲೆ ಕೌತುಕಂಬೆರಸಿ ಬಂದಿರ್ದರ್: ಗದಾಯು, ೭. ೬೯)

ಎಕ್ಕತಕ್ಕು

ಸಮಾನಯೋಗ್ಯತೆ, ಅರ್ಹತೆ (ಕರಿಯಂ ಬೇಡುವ ಬಾಯ್ಗಿದೊಂದಲಗಿನಂಬೊಲ್ದೇಱುವಂಗಕ್ಕೆ ಭಾಸುರ ಭಲ್ಲಾಸ್ತ್ರಮಿದು ನೀಡಿ ಬಿಡದಿಕ್ಕಲ್ ಎಕ್ಕತಕ್ಕುಳ್ಳ ತೋಳೆರಡಕ್ಕುಂ: ಅನಂತಪು, ೧೪. ೧೮)

ಎಕ್ಕತಳ

ನಿಯಮಿತ ಜಾಗ (ಎಕ್ಕಕ್ಕೆ: ಏಕಪತ್ರಂ

ಎಕ್ಕತಾಳ

ಏಳು ಬಗೆಯ ತಾಳಕ್ರಮಗಳಲ್ಲಿ ಒಂದು (ಧ್ರವ ಮಟ್ಠೆಯಂ ಪಡಿಮಟ್ಠೆಯಂ ಅಟ್ಟತಾಳ ಎಕ್ಕತಾಳ ರೂಪಕಂ ರಚ್ಚೆಯ ಎಂಬ ಏೞುಂ ತೆಱದ ತಾಳಕ್ರದಿಂದ: ಧರ್ಮಪ, ೨. ೨೦ ವ)

ಎಕ್ಕತುಳ

[ಏಕತುಲ] ದ್ವಂದ್ವಯುದ್ಧ (ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚವಣಿಗೆಯ ಅಂಕಕಾಱರ್ ಎಕ್ಕತುಳಕ್ಕೆ ಎಕ್ಕೆಯಿಂ ಸೂೞೇಱಱವಂತೆ ಒರ್ವರ್ ಒರ್ವರೊಳ್ ಕಾದೆ: ಪಂಪಭಾ, ೧೨. ೭೬ ವ); ಸಾಹಸ (ಸಿಂಗಮಂ ಓವದೆ ಎಕ್ಕತುಳದಿಂ ತವೆ ತೂೞಯೆ ಸಿಂಧುದೇಶದಿಂ ಪಿಂಗಿಸದಂ ಮಹಾಭಯಮಂ: ಶಾಂತೀಶ್ವಪು, ೩. ೨೮); ಸಮಾನ (ರಾವಣನೊಳ್ ಅಡುರ್ತು ಎಕ್ಕತುಳಮಿಱದು: ಪಂಪರಾ, ೯. ೧೦೫)

ಎಕ್ಕತುಳಂ

ಅತಿಶಯವಾಗಿ (ಕಡೆಗಣ್ಣ ಕಾಂತಿಗಳೊಳ್ ಎಕ್ಕತುಳಂ ಇಕ್ಕಿಯುಂ: ಆಚವರ್ಧ, ೬. ೩೨ ವ)

ಎಕ್ಕಬಾಗೆ

[ಏಕಭೋಗ್ಯೆ] ಒಂದೇ ಪಾಲುಳ್ಳವಳು (ಎನಗೆ ಎಕ್ಕಬಾಗೆ ನೋಡೀಗಳ್ ಈ ಇಳಾಲತಾಂಗಿ ಪುದುವಲ್ಲಳ್ ಅದೆಂತೆನೆ ಮುನ್ನ ನೂಲ ತೋಡಾಗದೆ ಕೆಟ್ಟು ಪೋದವರಂ ಇಂ ಮಗುೞ್ದುಂ ನಿಱಪಂತು ಬೆಳ್ಳನೇ: ಪಂಪಭಾ, ೯. ೪೬)

ಎಕ್ಕಮದ್ದಳೆ

ಒಂದು ಬಗೆಯ ಚರ್ಮವಾದ್ಯ (ಎಕ್ಕಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ: ವಡ್ಡಾರಾ, ಪು. ೮೦, ಪು. ೧೨)

ಎಕ್ಕಲ

ಕಾಡು ಹಂದಿ (ಬೆರ್ಚಿಸಿ ತನ್ನಗೇಂದ್ರಕಂದತಮೃಗರಾಜಿಯಂ ಜವದನೇೞ್ತಂದುದು ಸೊರ್ಕಿದ ಎಕ್ಕಲಂ: ಶಬರಶಂ, ೪. ೫)

ಎಕ್ಕಲಗಾಣ

ಒಂಟಿ ಹಾಡುಗಾರ (ನುಣ್ಚರದಿಂ ಆಣತಿಮಾಡಿದುದು ಉನ್ಮದಾಳಿ ತಾವರೆಯೊಳಗಿರ್ದ ಲಕ್ಷ್ಮಿಯ ಮನಂಬಡೆವ ಎಕ್ಕಲಗಾಣನೆಂಬಿನಂ: ಮಲ್ಲಿನಾಪು, ೬. ೬೯)

ಎಕ್ಕಲದೇವಿ

ಒಂದು ಕ್ಷುದ್ರ ದೇವತೆಯ ಹೆಸರು (ಎಕ್ಕಲದೇವಿಗಂ ಆ ಮಾಲಕ್ಕನಿಗಂ ಬನದ ಬಳರಿಗಂ ಮೈಲಾರಂಗೆ ಅಳ್ಕದೆ ಜಾತ್ರೆಯ ಮಾೞ್ಪಂ .. .. ಆತಂ ಕೌಳಂ: ಸಮಯಪ, ೪. ೧೨೩)

ಎಕ್ಕಲವಿರಿ

ಎಲ್ಲಮ್ಮ, ರೇಣುಕಾದೇವಿ (ಎಕ್ಕಲವಿರಿಗಣನಂ ಆ ಲಕ್ಕಣಿಗರ ಬನದ ಬಳರಿಗಂ ಮೈಲಾರಂಗೆಯ್ದೆ ಜಾತ್ರೆ ಮಾೞ್ಪಂ ಒಕ್ಕಲಿಗಂ: ಸಮಯಪ, ೪. ೧೨೫)

ಎಕ್ಕಲಾವಣ

ಅಸದೃಶ (ಇದಿರನೆ ಬಂದು ಮೇಲೆವಾಯ್ದೊಡೆ ತೀವಿರ್ದಲಂಗಿಂದ ಎಕಲ್ಕಲನಂ ಕೊಲೆ ಕಲಿತನವಾಯ್ತು ಎಕ್ಕಲಾವಣಂ ಲುಬ್ಧಕನೊಳ್: ಪಾರ್ಶ್ವನಾಪು, ೧೨. ೮೦); ಏಕ ನೆಲೆ (ಅಭಿಮಾನಕ್ಕೆ ಅಧಿಷ್ಠಾನಮುಂ ಲಾವಣ್ಯಕ್ಕೆ ಎಕ್ಕಲಾವಣಮುಂ ಆಗಿ: ವರ್ಧಮಾಪು, ೧೦. ೧ ವ)

ಎಕ್ಕವಡ

ಎಕ್ಕಡ, ಪಾದರಕ್ಷೆ (ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು ಬೇಂಟೆವಱ ದೊರೆಯೊಳ್ ಒಡಂಬಟ್ಟ ಅಸಿಯ ಸುರಗಿ ದಳಿವದ ತೊಟ್ಟ ಅಂಗಿಗೆ ತನ್ನೊಳ್ ಅಮರೆ ಬೇಂಟೆಯನೊರ್ವಂ; ಪಂಪಭಾ, ೫. ೩೬)

ಎಕ್ಕವತ್ತ

ಒಂಟಿ ಎಲೆಯಿರುವ, ಒಂದೆಲಗ (ಎಕ್ಕಕ್ಕೆ: ಏಕಪತ್ರಂ

ಎಕ್ಕವತ್ತಂ, ಏಕಸ್ಥಲಂ

ಎಕ್ಕತಳಂ, ಏಕಸ್ಥೂಲಂ ಎಕ್ಕತುಳಂ: ಶಬ್ದಮದ, ೩೦೫, ಪ್ರ)

ಎಕ್ಕವತ್ತಂ, ಏಕಸ್ಥಲಂ; ಎಕ್ಕತಳಂ, ಏಕಸ್ಥೂಲಂ

ಎಕ್ಕತುಳಂ: ಶಬ್ದಮದ, ೩೦೫, ಪ್ರ)

ಎಕ್ಕಸಕ್ಕ

ಅಸ್ತವ್ಯಸ್ತತೆ (ಹಱಗವಿಗಳ ಕಬ್ಬಂಗಳ ಹೊಱಗೞಯಕ್ಕರದ ಹೊಲಿಗೆ ಬಿರ್ಚಿದೊಡೆಲ್ಲಂ ಬಱ ತಾಱಗಬೀಱಗ ಎತ್ತಱ ತತ್ತಱ ಎಕ್ಕಸಕ್ಕಂ ಅಸ್ತವ್ಯಸ್ತಂ: ಗಿರಿಜಾಕ, ೧. ೨೩); ಅಸಂಬದ್ಧ ನುಡಿ (ಎಮ್ಮ ನುಡಿಗುತ್ತರಮಂ ಕಾಣದೆ ಏನಾನುಂ ಎಕ್ಕಸಕ್ಕಂ ಗೞಪಿದೆಯಾದೊಡಂ: ಧರ್ಮಾಮೃ, ೯. ೮೨ ವ); ಹರಟೆಗಾರ (ಅತಿಮಾರ್ಗಂ ಎಕ್ಕಸಕ್ಕಂ ಸಿತಗಂ ಚಳಬಳಗಂ: ಸಮಯಪ, ೩. ೫೫)
< previous1234567891920Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App