ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789Next >

ಏಂ

ಏನು ಕಾರಣ, ಏಕೆ (ಇಱವಂತು ನಿನಗೆ ಮನದೊಳ್ ತಱಸಲವುಂಟಪ್ಪೊಡೆ ಎಲವೊ ದೇವೇಶನಂ ಏಂ ಸೆಱೆವಿಡಿದೆ: ಪಂಪಭಾ, ೧೦. ೧೨೧)

ಏ ಕಜ್ಜಂ

ಆಗಬೇಕಾದುದೇನು, ಏನು ಉಪಯೋಗ? (ರವಿರಶ್ಮಿಗಳ್ ಪುಗಲೆವೇಡ ಈ ರಶ್ಮಿಗಳ್ ಸಾಲ್ಗುಂ ಇಂತೇ ಕಜ್ಜಂ ಬೆಳಗು: ಆದಿಪು, ೬. ೧೦೪)

ಏ ಕಾರಣಂ

[ಸ] ಯಾವ ಕಾರಣದಿಂದ (ನಗೆಗಣ್ ಸೋರ್ವ ಕದುಷ್ಣವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂಕೆಗಳಿಂ ನಾಡೆ ಬೆಡಂಗುಗೆಟ್ಟ ಇರವು ಇದಿಂತೇಕಾರಣಂ: ಪಂಪಭಾ, ೪. ೬೮)

ಏಂ ಗಳ

ಏನಪ್ಪಾ! ಹಾಗಲ್ಲವೇ (ಪಸಿವನಾಮೇಗೊಂಡು ಏಂ ಗಳ ಗೆಯ್ವೆವು: ಆದಿಪು, ೭. ೭೩)

ಏಂ ಪಿರಿದೋ

ಏನು ದೊಡ್ಡದೋ! (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨)

ಏ ಬಂಡಂ

[ಭಾಂಡ] ಯಾವ ದ್ರವ್ಯ, ಏನು ಪ್ರಯೋಜನ (ತಪೋರಾಜ್ಯಾಯತ್ತಂ ಎನ್ನ ಚಿತ್ತಂ ನ್ಯಾಯಾರ್ಜಿತಮಲ್ಲದೆನಿಪ ಧನಂ ಏ ಬಂಡಂ: ಪಂಪರಾ, ೬. ೧೨೬)

ಏ ಭಂಡಂ

ಏನು ಪ್ರಯೋಜನ (ದೇವೇಂದ್ರವಿಭವಮೆಂದುಂ ಭವ್ಯಂಗೆ ಏ ಭಂಡಮೊ ರತ್ನತ್ರಯ ಲಾಭಮೆ ಲಾಭಂ: ಸಮಯಪ, ೪. ೨೪)

ಏಕ

ಸಮಾನವಿಲ್ಲದ, ಶ್ರೇಷ್ಠ (ಏಕಂ ಕೂಟಸ್ಥಂ ನಿನ್ನಾಕಾರ ತ್ರಿತಯವಾದ ವಿಭುತೆ ಸಮಗ್ರಂ: ಜಗನ್ನಾವಿ, ೪. ೮೦)

ಏಕ ಪುಂಸಾ ನ ಗಂತವ್ಯಂ

[ಕಾಡಿನೊಳಗೆ] ಒಬ್ಬನೇ ಎಲ್ಲಿಗೂ ಹೋಗಬಾರದು (ಕಾನೊಳಗೇಕಪುಂಸಾ ನ ಗಂತವ್ಯಂ ಎಂದೀ ನಡೆದಪುದೆ ತಿಮಿರದೊಳೆನಿಪುವು ನಾನಾಹಿ ಮಸ್ತಿ ಮಣಿದೀಪಂ: ನೇಮಿನಾಪು, ೩. ೩೮)

ಏಕಕ

ಒಬ್ಬಂಟಿ (ರಾಜವ್ರಜಪರಿಷತ್ ಪರಿವೃಷ್ಟಿತ ಪ್ರಭುವೇಕೆ ತೊಟ್ಟನೆ ಏಕಕನಾದಂ: ಕರ್ಣನೇಮಿ , ೧೪. ೮೭)

ಏಕಕಾರ್ಯಾಳೋಚನಪರ

ಒಂದೇ ಕಾರ್ಯದ ಬಗ್ಗೆ ಆಸಕ್ತರಾದ[ವರು] (ಎಂದು ತಮ್ಮೊಳ್ ಅಯ್ವರುಂ ಏಕಕಾರ್ಯಾಳೋಚನಪರರಾಗಿ ದ್ವೈತವನದೊಳ್ ಅದ್ವೈತಸಾಹಸರಿರ್ಪನ್ನೆಗಂ: ಪಂಪಭಾ, ೭. ೩೦ ವ)

ಏಕಕುಂಡಲ

ಬಲರಾಮ (ಆರ್ಪಿನ ತಱಸಲದಂ ಕಂಡಂ ಏಕಕುಂಡಲನೆ ವಲಂ: ಪಂಪರಾ, ೬. ೧೩೫)

ಏಕಗ್ರಾಹಿ

ಒಂದೇ ಪಟ್ಟು ಹಿಡಿದವನು (ಆಗಳ್ ಅಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂರಥಮಂ ಎಸಗೆಂ ಎಂದು ವರೂಥದಿಂದ ಇೞದು ಪೋಗೆ: ಪಂಪಭಾ, ೧೨. ೨೦೫ ವ)

ಏಕಗ್ರಾಹಿ

ಒಂದೇ ಪಟ್ಟು ಹಿಡಿದವನು. ಹಟಮಾರಿ (ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂ ರಥಮಂ ಎಸಗೆಂ ಎಂದು ವರೂಥದಿಂದ ಇೞದು ಪೋಗೆ: ಪಂಪಭಾ, ೧೨. ೨೦೫ ವ)

ಏಕಚಕ್ರ

ಒಬ್ಬನೇ ರಾಜನ ಆಳ್ವಿಕೆಗೊಳಪಟ್ಟದ್ದು (ತದ್ಭೂಪತಿಗೆ ಅಖಿಳಧರಾಚಕ್ರಂ ಆಯ್ತು ಏಕಚಕ್ರಂ: ಸುಕುಮಾಚ, ೯. ೭೩)

ಏಕಚ್ಛತ್ರಚ್ಛಾಯೆ

ಒಂದೇ ಕೊಡೆಯ ನೆರಳು, ಒಬ್ಬ ರಾಜನ ಆಳ್ವಿಕೆ (ಅಂತು ಭರತಂ ಭರತಮಂಡಲಮಂ ಏಕಛತ್ರಚ್ಛಾಯೆಯಿಂದಂ ಪ್ರತಿಪಾಲಿಸುತ್ತಮಿರೆಯಿರೆ: ಆದಿಪು, ೫. ೪ ವ)

ಏಕಚ್ಛತ್ರಚ್ಛಾಯೆ

ಒಂದೇ ಕೊಡೆಯ ನೆರಳು, ಒಬ್ಬ ರಾಜನ ಆಳ್ವಿಕೆ (ಅಂತು ಭರತಂ ಭರತಮಂಡಲಮಂ ಏಕಛತ್ರಚ್ಛಾಯೆಯಿಂದಂ ಪ್ರತಿಪಾಲಿಸುತ್ತಮಿರೆಯಿರೆ: ಆದಿಪು, ೫. ೪ ವ)

ಏಕಚ್ಛತ್ರೀಕೃತ

ಒಂದೇ ಆಳ್ವಿಕೆಗೊಳಪಡಿಸಿದ (ಅತೆ ಏಕಚ್ಛತ್ರೀಕೃತ ಭರತವರ್ಷನುಂ: ಚಂದ್ರಪ್ರಪು, ೭. ೩೫ ವ)

ಏಕತ್ವ

ಷೋಡಶಭಾವನೆಗಳಲ್ಲಿ ಒಂದು (ಮಮತ್ವಮಂ ಬಿಸುಟು ನೀನೇಕತ್ವಮಂ ಭವ್ಯ ಭಾವಿಸು ನಿನ್ನೀ ತನುವಂ ತಪೋವನವನಕ್ರೀಡಾಸುಖಕ್ಕೊಡ್ಡು: ಆದಿಪು, ೨. ೪೭)

ಏಕತ್ವವಿತರ್ಕವಿಚಾರ

[ಜೈನ] ಎರಡನೆಯ ಶುಕ್ಲಧ್ಯಾನ, ಮೋಹಕರ್ಮಸಹಿತವಾಗಿ ಜ್ಞಾನಾವರಣೀಯ, ದರ್ಶನಾವರಣೀಯ ಮತ್ತು ಅಂತರಾಯ ಎಂಬ ಮೂರು ಕರ್ಮಗಳ ನಾಶವಾಗಿ ಕೇವಲಜ್ಞಾನಪ್ರಾಪ್ತಿಗೆ ಎಡೆಮಾಡಿಕೊಡುವಂಥದು (ವೀತರಾಗದ್ವೇಷಭಾವನಾಭಾವಿತ ಯಥಾಖ್ಯಾನಚಾರಿತ್ರಕ್ಷೀಣ ಕಷಾಯ ವೀತರಾಗಚ್ಛದ್ಮ ಗುಣಸ್ಥಾನಂ ಏಕತ್ವವಿತರ್ಕವಿಚಾರಾಭಿಧಾನಧ್ಯಾನಪರಿಣತಂ: ಆದಿಪು, ೧೦. ೧೪ ವ)
< previous123456789Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App