ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಏ ಮತ್ತು ಆಕಾರಗಳು ಖಡಿ ಆದ ಒಂದು ಸಂಧ್ಯಕ್ಷರ (ಅಕಾರಮುಂ ಏಕಾರಮುಂ ಕೂಡಿ ಸಂಧಿಯಾಗೆ ಐಕಾರಂ ಪುಟ್ಟುಗುಂ: ಶಬ್ದಮದ, ೨೦, ವಿಚಾರಂ)

ಐಕಿಲಣುಗಿ

ಪಾರ್ವತಿ (ಐಕಿಲಣುಗಿ ಸರಸತಿ ಸಿರಿ ತೊಡೆ ಬಾಯ್ ಎರ್ದೆಯೊಳಿರ್ದು ತಮ್ಮೆಱೆಯರಂ ಒಲ್ದು ಇರುಳುಂ ಪಗಲುಂ ಕಾದಿರ್ಪರ್: ತ್ರಿಷಷ್ಟಿಪು, ೭. ೩೦)

ಐಕಿಲ್

ಚಳಿ, ಹಿಮ (ಬಿಸಿಲ್ ಐಕಿಲ್ ಪಸಿವು ಉಗ್ರದಂಶಮಶಕವ್ಯಾಬಾಧೆ ನೀರೞ್ಕೆ: ಆದಿಪು, ೬. ೩೪)

ಐಕ್ಷವರಸ

ಕಬ್ಬಿನ ರಸ (ಸುಧೆ ದಧಿ ಘೃತಂ ಮಧು ಸತ್ ಐಕ್ಷರಸಂಗಳಂ ಮಧುರತರ ಭಸಿತಮಿಶ್ರಿತ ಜಳಂಗಳಂ: ರಾಜಶೇವಿ, ೧೩. ೫೧ ರಗಳೆ)

ಐಂದವ

ಇಂದು ಅಥವಾ ಚಂದ್ರನಿಗೆ ಸಂಬಂಧಿಸಿದ; ಬೆಳುದಿಂಗಳು (ಅಂಚೆ ಸಂಚಳಿಪನಂಗನ ಜಂಗಮಕಲ್ಪವಲ್ಲಿ ಮಂಜುಳಕರಪುಂಜವಂ ಕೆದಱುವೈಂದವ ಕೋರಕಜಾಲಮೆಂಬಿನಂ: ಅನಂತಪು, ೨. ೨೦)

ಐಂದವಬಿಂಬ

ಚಂದ್ರಬಿಂಬ (ಐಂದವಬಿಂಬ ರೌಪ್ಯಕುಂಭಗತಸುಧಾಮರೀಚಿಜಳಮಂ ಸುರಿದಂ ಸಲೆ ಕಾಲಪಾಮರಂ: ರಾಜಶೇವಿ, ೧೧. ೬೮)

ಐಂದ್ರ

ಇಂದ್ರಾಸ್ತ್ರ (ಕೆಳರ್ದು ಅಂದುಗ್ರರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ ಕಳವೇೞ್ದು ಇರ್ವರುಂ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರಸಂಕುಳದಿಂದ ಒರ್ವರಂ ಒರ್ವರ್ ಎಚ್ಚು: ಪಂಪಭಾ, ೧. ೭೯)

ಐಂದ್ರದಿಶೆ

ಇಂದ್ರದಿಕ್ಕು, ಪೂರ್ವ (ಆ ನಗೇಂದ್ರದ ಐಂದ್ರದಿಶಾಭಾಗದೊಳ್: ಚಂದ್ರಪ್ರಪು, ೧. ೭೫)

ಐಂದ್ರಬಾಣ

ಇಂದ್ರಾಸ್ತ್ರ (ಜ್ವಳನಪತತ್ರಿಯಂ ಕಡಿದು ವಾರುಣಪತ್ರಿಯಿಂ ಐಂದ್ರಬಾಣಮಂ ಕಳೆದು ಸಮೀರಣಾಸ್ತ್ರದಿಂ ಭೂಭುಜರೆಲ್ಲರಂ ಭಯಂಗೊಳಿಸಿ: ಪಂಪಭಾ, ೧೧. ೪೩)

ಐಂದ್ರಿ

ಇಂದ್ರನ ಮಡದಿ, ಶಚೀದೇವಿ (ಚಂದ್ರಲೇಖೆ ಚಂದ್ರ ಆದಿತ್ಯಪ್ರತಿಮರ್ ಐಂದ್ರಿಯವೋಲ್ ಅಪ್ರತಿಮಪ್ರಭರಂ ಪ್ರಸಿದ್ಧರಂ ಬಧು ಪಡೆದಳ್: ಪಂಪರಾ, ೧೦. ೭೦)

ಐಂದ್ರಿಯ

ಇಂದ್ರಿಯಗಳನ್ನು ಹೊಂದಿದಂತಹ (ಬಂದುದು ಉನ್ಮದೇಭದ ತೆಱದಿಂ ಹಿಮೋದಿತ ಮಹಾರುತಂ ಐಂದ್ರಿಯದೊಂದು ಮಾರುತಂ: ಕುಸುಮಾಕಾ, ೭. ೨)

ಐಂದ್ರಿಯಕ

ಇಂದ್ರಿಯಗೋಚರವಾದ, ಪ್ರತ್ಯಕ್ಷವಾದ (ಐಂದ್ರಿಯಕಂ ಪ್ರತ್ಯಕ್ಷಂ ಅತೀಂದ್ರಿಯಮಪ್ಪುದು ಪರೋಕ್ಷಂ: ಅಭಿಧಾವ, ೧. ೧೨. ೨೪)

ಐಂದ್ರೀತನೂದರಿ

ಪೂರ್ವದಿಕ್ಕು (ದಿವಸಶ್ರೀದೇವಿಗೆ ಐಂದ್ರೀತನೂದರಿ ತಂದುತ್ಸವದಿಂದೆ ತೋರ್ಪ ಅರುಣರತ್ನ ಆದರ್ಶಮೆಂಬಂತೆ .. .. ಭನುಬಿಂಬಂ: ಕುಸುಮಾಕಾ, ೪. ೭೯)

ಐಂದ್ರೀದಿಶಾ

ಪೂರ್ವದಿಕ್ಕು (ಐಂದ್ರೀದಿಶಾ ಅವನಿಭೃತ್ ಚೂಳಮನೇಱ ತನ್ನಮಳಹೃತ್ಪೀಠಾಗ್ರಮಂ ಖೇಚರ ಅವನಿಭೃನ್ನಂದನೆ ಆ ಸ್ವಯಂಪ್ರಭೆ .. .. ಅರ್ಚಿಸಿದಳ್: ಶಾಂತೀಶ್ವಪು, ೨. ೧೪)

ಐಂದ್ರೀನಾರಿ

ಪೂರ್ವ ದಿಗಂಗನೆ (ದರಸ್ಮೇರಾನನೆಯಾದ ಐಂದ್ರೀನಾರಿಯ ನಗೆಯಂತೆ ನೆಗೆದುವು ಇಂದುಕರಂಗಳ್: ಲೀಲಾವತಿ, ೬. ೯೦)

ಐನಸ

ಪಾಪ (ವಿನುತವಿಶೋಧಿ ನಾಡೆ ನೆಲವೆರ್ಚಿ ಮಹಾ ಐನಸರಾಜವ್ಯೂಹಮಂತನಿವೃತ್ತಿ ಸೂಕ್ಷ್ಮಪರಿಣಾಮವಿಶೇಷ ವಿನಷ್ಟಮಾಗೆ: ಶಾಂತೀಶ್ವಪು, ೧೬. ೧೭)

ಐನೋಬಂಧನ

ಪಾಪದ ಸೆರೆ (ಸುಜನಸಂಂ ಅಖಿಳ ಐನೋಬಂಧನಮಂ ಬಿಡಿಪಂತಿರೆ ಬಂಧುಗಳಂ ಬಿಡಿಸಿ ತಪಕೆ ತಱಸಂದಿರ್ದಂ: ಪಾರ್ಶ್ವನಾಪು, ೧೫. ೭೧)

ಐರಣಿ

ಶುಭಸೂಚಕ ಚಿತ್ರ ಬರೆದ ಗಡಿಗೆ (ಅರ್ಚಿಸಿದೈರಣಿ ಚಂದನ ಚರ್ಚೆಯ ತಳಿರ್ಗೆಂಪಂ: ವರ್ಧಮಾಪು, ೩. ೯೦)

ಐರಣಿಕ

ಅಕ್ಕಸಾಲಿಗ (ಐರಣಿಕಂ ಕುರುಕುರುಕಾರಂ ತದಧ್ಯಕ್ಷಂ ಭೌರಿಕನೆನಿಕುಂ: ಅಭಿಧಾವ, ೧. ೧, ೮೦)

ಐರದಾಳಿ

ಮುತ್ತೈದೆಯರ ಮಾಮಗಲ್ಯಸೂಚಕ ತಾಳಿ (ಆಳಾಪಂ ಮಿಗೆ ಮೇಳಯ್ಸಿದರ್ ಐರದಾಳಿಯಂ ಬಾಳಕಿಯರ್: ಗಿರಿಜಾಕ, ೧೦. ೩೮)
< previous12Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App