ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891617Next >

ಒಕ್ಕಣ

ಒಕ್ಕುವ ಕೆಲಸ (ಒಕ್ಕಣದಂತೆ ರಾಶಿಯಂತೆ ಮಿರ್ಥಯಾದೃಷ್ಟಿ ಸಾಧನ ಸಮ್ಯಗ್ದೃಷ್ಟಿ ಸಂಯಕ್ ಮಿಥ್ಯಾದೃಷ್ಟಿ: ಧರ್ಮಾಮೃ, ೧೨. ೧೪ ವ); ಒಂದು ಆಯುಧ (ಭಲ್ಲೆ ಹ ಸೀಸಕಂ ಕವಚ ಅಡಾಯುಧ ಒಕ್ಕಣವುದ್ದುವಾರೆಯುಂ: ಸೂಕ್ತಿಸು, ೧೮. ೨೮)

ಒಕ್ಕಲಿಕ್ಕು

ಒಕ್ಕಣ ಮಾಡು, ಬಡಿ (ಅಂತು ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕಿ ಕೊಲ್ವ ಕಳಶಕೇತನನಂ: ಪಂಪಭಾ, ೧೨. ೨೧ ವ); ಧ್ವಂಸಮಾಡು (ನಿಂದ ತುೞಲಾಳ್ಗಳನಾಂ ತಱದು ಒಕ್ಕಲಿಕ್ಕದಿರ್ದೊಡೆ .. .. ನಚ್ಚಿನ ನಿನ್ನ ಲೆಂಕನೇ: ಕಬ್ಬಿಗಕಾ, ೧೮೭)

ಒಕ್ಕಲಿಗ

ಬೇಸಾಯ ಮಾಡುವವನು (ಮಲೆ ತಲೆದೋಱದೆಂದುದನೆ ಕೊಟ್ಟುದು ಡಂಗಮಡಂಗಿ ಬಂದುದು ಒಕ್ಕಲಿಗವೆಸರ್ಗೆ ಪೂಣ್ದುದು: ಪಂಪಭಾ, ೨. ೯೦); ರೈತ (ಒರ್ವಂ ಒಕ್ಕಲಿಗಂ ಒಂದು ಪೇಱು ಮಣ್ಣಂ ತಂದು ಶ್ರೀಪರ್ವತದ ಮೇಗೊಟ್ಟಿದೊಡೆ: ವಡ್ಡಾರಾ, ಪು ೧೮೭, ಸಾ ೨೩)

ಒಕ್ಕಲಿಸು

ವ್ಯಾಪಿಸು (ದಿವಿಜರ ಕಿವಿಯಂ ಜಕ್ಕುಲಿಸಿ ನೆಗೆದು ಭುವನಮಂ ಒಕ್ಕಲಿಸಿದುದು ಆ ಗಭೀರಭೇರೀ ನಿನಾದಂ: ಕರ್ಣನೇಮಿ , ೧೧. ೮೪)

ಒಕ್ಕಲ್

ಮನೆತನ (ಮಲೆಪರ್ ಮಂಡಳಿಕರ್ ಕಱುಂಬರ್ ಅದಟರ್ ವೀರರ್ಕಳುಂ ತಮ್ಮ ಬಾೞ್ದಲೆಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು ಮೂವಿಟ್ಟಿಯ ಒಕ್ಕಲವೋಲ್ ಇಂ ಬೆಸಕಯ್ಯೆ ಸಂತಮಿರುತುಂ: ಪಂಪಭಾ, ೯. ೧೦); ಬೇಸಾಯಗಾರ (ಪಿರಿದು ತೆತ್ತ ಒಕ್ಲಂತೇ ಗಂಡನೊಲ್ಲದ ಸ್ತ್ರೀಯಂತೆ: ಧರ್ಮಾಮೃ, ೫. ೮೩ ವ)

ಒಕ್ಕಳ

[ಒರ್+ಕಳ] ಒಂದು ಕೊಳಗ (ಉಪ್ಪಿಲ್ಲದೆ ಕೇಳ್ ಒಕ್ಕಳ ತುಪ್ಪವನೆಱೆದುಣ್ಬೆನೆಂಬೊಡೆ ಉಂಬ ಉಣಿಸೇಂ ಸ್ವಾದಪ್ಪುದೇ: ಧರ್ಮಾಮೃ, ೧. ೫೦)

ಒಕ್ಕು

ಹೊರಕ್ಕೆ ಸುರಿ (ತಿಸುಳದೊಳ್ ಉಚ್ಚಳಿಪ್ಪ ಪೊಸನೆತ್ತರೆ ಕೆಂದಳಿರಾಗೆ ಕಣ್ಗೆ ಅಗುರ್ವಿಸುವಿನಂ ಒಕ್ಕು ನೇಲ್ವ ಕರುಳೋಳಿಯೆ ಬಾಳಮೃಣಾಳಮಾಗೆ ಮಿಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯಂ ಆಱಸುತಿಂತೆ ತನ್ನ ಕೂರಸಿಯೊಳ್ ಅಡರ್ತು ಕೊಂದಸಿಯಳ್ ಇರ್ಕೆ ಅಸಿಯೊಳ್ ಪಡೆಮೆಚ್ಚೆ ಗಂಡನಾ: ಪಂಪಭಾ, ೧. ೬); ಬೆಳೆಯಿಂದ ಕಸ ಬೇರ್ಪಡಿಸು, ಒಕ್ಕಣ ಮಾಡು ಹಾಗೂ ಶಕುನ ಹೇಳು (ಒಕ್ಕು ಖಲಕರಣೇ ಶಕುನೇಚ: ಶಬ್ದಮದ, ಧಾ ೧೩)

ಒಕ್ಕೈಸು

ಸೇರು, ಒಂದುಗೂಡು (ಉಭಯಕಟದ ಸೊರ್ಕುಕದಡಿನ ತೆರ್ಕೆಗಡಲ್ಗಳ್ ಒಕ್ಕೈಸಿ ಜಗಮನಿಕ್ಕಲೆಂದು : ಅನಂತಪು, ೧೨. ೩೦ ವ)

ಒಖ್ಖಾಣಿಸು

ವ್ಯಾಖ್ಯಾನಿಸು (ಕವಿಮಾರ್ಗದೊಳ್ ಒಖ್ಖಾಣಿಪ ಠವಣಿಪ ಕಮ್ಮೈಸುವ ಎಡೆಯೊಳ್ ವಖ್ಖಾಣಿಸಲುಂ ಠವಣಿಸಲುಂ ಕಮ್ಮೈಸಲುಂ ಇವನಂತಾರ್ ಬಲ್ಲರ್ ಎನಿಸಿದಂ ಕವಿರತ್ನಂ: ಅಜಿತಪು, ೧. ೮೨)

ಒಗಂಟುವೇೞ್

ಅರ್ಥ ತಿಳಿಯದಂತೆ ಮಾತಾಡು, ಒಗಟು ಹೇಳು (ಅರ್ಥಮಂ ಪ್ರಕಟಿಸಿ ಪೇೞದೆ ಒಗಂಟುವೇೞ್ವಕವಿಯುಂ ಕವಿಯೇ: ಪಾರ್ಶ್ವಪು, ೧. ೭೫)

ಒಗಂಟೆ

ಒಗಟು, ಅರ್ಥ ತಿಳಿಯದ ಹೇಳಿಕೆ (ಒಗಂಟೆ ತಾಂ ಪ್ರಹೇಳಿಕೆಯಕ್ಕುಂ: ಅಭಿಧಾವ, ೧. ೧೩. ೩೬)

ಒಗಸುಗಂ

ಅತಿಶಯವಾಗು (ನೆಗೞ್ದಮರಾಂಗನಾಜನದ ರೂಪುಗಳೆಲ್ಲಂ ಈಕೆಯೊಂದು .. .. ಮೆಲ್ಪಿನ ತೊದಳ್ನುಡಿಗಪ್ಪೊಡಮೆಯ್ದೆ ವಾರವೇಂ ಒಗಸುಗಂ ಎಂದು ತಳ್ತಗಲನಾಕೆಯಂ ಲಲಿತಾಂಗವಲ್ಲಭಂ: ಆದಿಪು, ೨. ೭೫)

ಒಗು

ಹೊರಸೂಸು; ಹೊಮ್ಮುವಿಕೆ; ತ್ಯಜಿಸು (ಆಳ್ದನ ಕಜ್ಜಮಂ ಒಕ್ಕು ಸತ್ತರಂ ನಗುವವೊಲಿರ್ದಂ ಅಂಗಪತಿ ನೆಮ್ಮೀ ನಿಜೋನ್ನತ ಕೇತುದಂಡಮಂ: ಗದಾಯು, ೫. ೧೦)

ಒಗುಮಿಗು

ಆಧಿಕ್ಯ (ನೆನೆದುರಿವ ತಲೆಯ ಕಿಚ್ಚಿನೊಳೊಗುಮಿಗೆ ನೆಯ್ವೊಯ್ವ ತೆಱದೆ ಪೊಣ್ಮಿದ ಮುನಿಸಿಂ ಭುಗಿಲನುರುದೆೞ್ದು: ಕಬ್ಬಿಗಕಾ, ೧೧೮)

ಒಗೆ

ಹುಟ್ಟು, ಕಾಣಿಸಿಕೊ (ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್ ಸುರೇಂದ್ರಧರಕರ್ ಆ ವಾಗಮಳರ್ ನೆಗೞರ್ದರ್ ಪುಲಹ ಮರೀಚಿ ಅತ್ರಿ ಅಂಗಿರಸ್ ಪುಳಸ್ತ್ಯ ಕ್ರತುಗಳ್: ಪಂಪಭಾ, ೧. ೬೦); ವಸ್ತ್ರಪ್ರಕ್ಷಾಲನ, ಬಟ್ಟೆಯನ್ನು ಶುದ್ಧಗೊಳಿಸು (ಒಕ್ಕು .. .. ವಸ್ತ್ರಪ್ರಕ್ಷಾಳನಯೋ: ಶಬ್ದಮದ, ಧಾ ೯೪)

ಒಗೆತರ್

ಕಾಣಿಸಿಕೊ, ಹುಟ್ಟಿ ಬರು (ಅಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗಕ್ಕೆ ಎಂಬುದುಂ ಒದವಿದ ಅಂಬುಜಮಿತ್ರನನೆ ಪೋಲ್ವ ಮಗಂ ಒಗೆತಂದಂ: ಪಂಪಭಾ, ೧. ೯೪); ಉಂಟಾಗು (ಪೇಳ್ದಳ್ ಮುದಮೊಗೆತರೆ ತಾಂ ಕಂಡ ಕನಸೆಲ್ಲಮಂ: ರಾಜಶೇವಿ, ೪. ೨೭)

ಒಗ್ಗಡಿಸು

ಒಂದಾಗು (ಒಡೆದು ಕಟವೆರಡುಂ ಒಗ್ಗಡಿಸದೆ ಮದವುಣ್ಮಿ ಪೊಣ್ಮಿರಲ್ .. .. ವಿಜಯ ಗಜಮಂ ಕಂಡಳ್: ಸೂಕ್ತಿಸು, ೭. ೩೬)

ಒಗ್ಗುಗೆಡು

ಬೇರೆಯಾಗು (ಮೊಗ್ಗರಂಬೊಯ್ದು ಅಗಲಿಸಿ ನಡೆದು ಬಗ್ಗಿಸಿ ಬಯ್ದು ಒಗ್ಗುಗೆಡದೆ ಮುಂಕಣಿಸಿ: ಗಿರಿಜಾಕ, ೬. ೬೬ ವ)

ಒಚ್ಚತ

ಸಂತೋಷ (ಬಿಚ್ಚುಮಂ ವಿದ್ಯೆಗಳೊಳೆಲ್ಲಂ ಒಚ್ಚತಂ ನೋಡಿದೊಡೆ ಒಂದೊಂದರ್ಕೆ ಮಚ್ಚರಿಸಿದಂತೆ ಪಚ್ಚು ಪಸರಿಸಿ ನಿಚ್ಚಯ್ಸಲ್: ಸುಕುಮಾಚ, ೩. ೬ ವ); ಒಂದೇ ಸಮನೆ (ಮೆಯ್ಗೆ ಮೆಚ್ಚಿದಂತೆ ಒಚ್ಚತಂ ಕಾದಂಬರಿಯೊಳ್ ನೆರೆದು .. .. ನೆಗಳುತ್ತಮಿರ್ಪೆಂ: ಕಾದಂಬ, ೯. ೧೧ ವ); ವಿಶಿಷ್ಟ (ಅಮರ್ದಿಂಗೊಚ್ಚತಮಲ್ತು ಮತ್ತಿವರ ವಾಕ್ಪೀಯೂಷ ಪೂರಕ್ಕಮುಂಟು … .. ಸೌಖ್ಯಂ .. .. ಎನಿಪರ್ ಈಗೊಳ್ಪಂ ಕವೀಂದ್ರೋತ್ತಮರ್: ನೇಮಿನಾಪು, ೧. ೩೨)

ಒಚ್ಚತಂಗೊಳ್

ಪಡೆದುಕೊ ಪೂವಿನ ಬಿಲ್ಲನೊಚ್ಚತಂಗೊಂಡು ಅರ್ಚಿಸುತ್ತಿರ್ಪ ನಿಡುವುರ್ವಿನ ನೀಱೆಯರಿಂ: ಗಿರಿಜಾಕ, ೭. ೧೧ ವ)
< previous1234567891617Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App