ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789160161Next >

ನಾನಾರ್ಥಗಳು (ಅವಸರ ಶರ ಕುತ್ಸಾ ವಾರ ವಾರ್ವಾಚಿ ಕಾಂಡಂ ಪವನಜಲಜಜಾತಾಂಭಃ ಶಿರೋಕ್ತಂ ಕಶಬ್ದಂ: ಅಭಿಧಾವ, ೩. ೧. ೧೦೫

ಕಂ

ನೀರು (ಅಂಸಂ ಕಂ ಅಮೃತಂ ಪಾನೀಯಂ ಎಂದಿಂತು .. .. ನೀರ್ಗೆ ಪೆಸರಂ ಪರ್ಯಾಯದಿಂ ವಾಗ್ವಿದರ್: ಅಭಿಧಾವ, ೧. ೪. ೧)

ಕಃ ಕೇನಾರ್ಥಿ ಕೋ ದರಿದ್ರಃ

ಯಾರು ಏನನ್ನು ಬೇಡುತ್ತಾನೆ, ಯಾರು ಬಡವ (ಆ ದೀನಾನಾಥರ್ಗೆ ವೃದ್ಧದ್ವಿಜಮುನಿನಿಕರಕ್ಕೆ ಅಂದು ಎಡಱು ಪೋಪಿನಂ ಕಃ ಕೇನಾರ್ಥೀ ಕೋ ದರಿದ್ರಃ ಎನುತುಂ ಅನಿತುಮಂ ಧರ್ಮಜಂ ಸೂಱೆಗೊಟ್ಟಂ: ಪಂಪಭಾ, ೬. ೪೦)

ಕಂಕ

ಚಿಮಟ, ಇಕ್ಕುಳ (ಮದಂಘ್ರಿಸಂಸ್ಪರ್ಶನಮುಂ ಸಂಗತಮಲ್ತು ಎನಲಿದೆ ಕಂಕಂಗೆ ಅರುವನೆ ಎನಲ್: ಉದ್ಭಟಕಾ, ೧೧. ೧೦೯); ಕರೀ ಹದ್ದು (ಚರಣಾಯುಧಂ ಶಕುನಿ ಕಂಕಂ ತೊಂಡಿಗಂ ಸೋರೆ ತಿತ್ತಿರೆ ಕೋಕಂ .. .. ರತ್ನಖಗಮಿರ್ಕುಂ ತದ್ವನಾಗೌಘದೊಳ್: ರಾಜಶೇವಿ, ೫. ೫೯)

ಕಂಕಟ

ಕವಚ (ಆಗಳ್ ಅತಿ ಮನೋಜವ ತುರಂಗಮಾರೂಢಂ ಉದ್ಗಾಢ ಕಂಕಟನುಂ ಉತ್ಥಿತ ನಿಶಾಹತಿಯುಂ ಉದೀಣ್ ಕ್ರೋಧಾನಳನುಂ ಆಗಿ: ವರ್ಧಮಾಪು, ೪. ೬೪ ವ)

ಕಂಕಣ

ಬಳೆ (ರತ್ನದ ಕಂಕಣಮೆಂಬಂತೆ ಕೈಗೆ ವಂದುದು ಚಕ್ರಂ: ಪಂಪರಾ, ೧೪. ೧೦೫)

ಕಂಕಣವಾರ

ಬಳೆಗಳ ಸಾಲು [ಕಂಕಣ+ಆರ=ಕಂಕಣ ಮತ್ತು ಹಾರ] (ಮೆಲ್ಲನೆ ವಕುಲ ಆಳವಾಳತಳದೊಳ್ ಸುರಿದ ಅಂಬುಜಸೂತ್ರದಿಂದೆ ಮತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇೞ್ಪನಿತನೆ ಮಾಡಿ: ಪಂಪಭಾ, ೨. ೧೬)

ಕಂಕಪತ್ರ

ಹದ್ದಿನ ಗರಿ[ಗಳುಳ್ಳ ಬಾಣ] (ಚಪಳ ಚಾಪನುಂ ಕರತಳಕಲಿತ ಕಂಕತ್ರನುಂ ಆಗಿ ಮೃಗಯಾವಿನೋದದಿಂ ತೊೞಲುತಿರ್ಪಾಗಳ್: ನೇಮಿನಾಪು, ೩. ೬೦ ವ)

ಕಂಕರಿ

ಒಂದು ವಾದ್ಯ (ಕಂಕರಿಯ ಸಿವಿಱ ಪೆಂಪಿನ ಝೆಂಕಟ ಬೊಂಬುೞಯ .. .. ಉಲಿ ನೆಗೞ್ದು ಕರ್ಣಾಮೃತಸಮುದ್ರಘೂರ್ಣನಮಾಯ್ತೋ: ಪುಷ್ಪದಂಪು, ೧೨. ೨೭)

ಕಂಕಾಳಿ

ಕೈಲಾಸದ ದಂಡಧಾರಿಯಾದ ಒಬ್ಬ ಸೇವಕ (ಪೊಂಬೆತ್ತಮನೆತ್ತಿ ಪೋ ಸಾರ್ ತೊಲಗು ಎಂದು ನಿವಾರಿಸಿ ಸಮುಚಿತಸ್ಥಾನದೊಳ್ ಇಂಬುಕಯ್ಸುವ ಭೀಮ ಕಂಕಾಳಿಗಳೆಂಬ ವೇತ್ರಧರರಿಂ; ಶಬರಶಂ, ೧. ೭೯ ವ)

ಕಂಕಾಳಿಕೆ

ಎಲುಬು ಗೂಡು (ಬರಿಯೆಲ್ ಬೇಱೆರ್ದ ಕಂಕಾಳಿಕೆ ಪೆಡತಲೆಯ ಪೊಕ್ಕ ಕಣ್ .. .. ಗಿಟಿಗಿಟಿಜಂತ್ರಂಬೊಲಾಗಿರ್ದ ಮೈ: ನೇಮಿನಾಪು, ೭. ೨)

ಕಕುದ

ಗೂಳಿಯ ಹಿಣಿಲು (ಧವಳಾತಪ ವಾರಣಕಕುದ ವಿಭೂತಿಯನುೞದು ನೆಗೞ್ವುಪಾಸಕನಾದಂ: ಆದಿಪು, ೬. ೬); ಶಿಖರ, ಶ್ರೇಷ್ಠ (ನೃಪಕಕುಧಮಂ ಸ್ಫೀತಚ್ಛತ್ರಾದಿ ಭೂತಿ ವಿಭೂತಿಯಂ: ವರ್ಧಮಾಪು, ೭. ೫೨)

ಕಕುದ್ಮತ್

ಎತ್ತು (ಕಕುಭಂ ಮುಂಗಾಲ್ ಕಕುದ್ಮತ್ ಅತಿ ವಿಷಮ ವಿಷಾಣಂ .. .. ಹರಿಗೆ ಮುನಿದು ಬರ್ಪಂತೆ ಬಂದತ್ತಿಭೇಂದ್ರಂ: ನೇಮಿನಾಪು, ೮. ೮೨)

ಕಕುಭ

ದಿಕ್ಕು (ಕಕುಭಾವಳಯಂ ಮುಸುಕಿದ ಮೇಘಂಗಳ ಮೊರ್ಬುಂ ಪರ್ಬಿದತ್ತು ಧರಣೀತಳಮಂ: ತ್ರಿಷಷ್ಟಿಪು, ೩೭. ೭); ಮತ್ತಿಯ ಗಿಡ (ಕಕುಭ ಅಶೋಕ ಕದಂಬ ಲುಂಗ ಲವಲೀ ಭೂರ್ಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦); ವೀಣೆಯ ಬುರುಡೆ (ಶೃಂಗಾರಾರ್ದ್ರಂ ಕಕುಭಜನಿತಂ .. .. ಸರಿಗಮಪಧನ್ಯುತ್ತರಾಭೋಗವಧ್ನ್ಯಂಗಂ: ಲೀಲಾವತಿ, ೨. ೩೦)

ಕಂಕೆಲ್ಲಿ

ಅಶೋಕದ ಮರ (ಸಲ್ಲತಾಭವನಂಗಳೊಳಂ ಜಲಂಗಳೊಳಂ ಸಹಕಾರ ಕಂಕೆಲ್ಲಿ ಪಲ್ಲವರಾಜಿತ ಶೈತ್ಯಸ್ಥಾನದೊಳಂ: ಸುಕುಮಾಚ, ೨. ೪೬)

ಕಂಕೇಲಿ

ಕಂಕೆಲ್ಲಿ (ಪುಣ್ಯಾಂಬುಪೂರ್ಣಕುಂಭಾಗ್ರಮುಚಿತ ಕಂಕೇಲಿಪಲ್ಲವೋಲ್ಲಾಸರಚಿತ: ಆದಿಪು, ೪. ೩೦ ರಗಳೆ)

ಕಕ್ಕಡವಂದಿ

ದೊಡ್ಡ ಹಂದಿ (ಕೆಡೆದಿರ್ದ ಶಬರನಂ ಕ್ಕಡವಂದಿಯನೀಕ್ಷಿಸುತ್ತೆ ಶಬರಸಮೂಹಂ: ಗಿರಿಜಾಕ, ೧. ೧೧೦)

ಕಕ್ಕಡೆ

ಗರಗಸದಂತೆ ಬಾಯುಳ್ಳ ಒಂದು ಬಗೆಯ ಆಯುಧ (ನಡುವ ಸರಲ್ಗೆ ಮೆಯ್ಯೊಳ್ ಅಡಂಗುವ ಸಂಕುಗೆ ದಿಂಕುಗೊಳ್ವ ಕಕ್ಕಡೆಗೆ ಇದಿರ್ ಉರ್ಚುವ ಇಟ್ಟಿಗೆ .. .. ಪಂಪಭಾ, ೧೦. ೯೪)

ಕಕ್ಕಂಬು

ಒಂದು ಬಗೆಯ ಬಾಣ, ಮುಳ್ಳಿನ ಬಾಣ (ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ: ಪಂಪಭಾ, ೧೩. ೩೯)

ಕಕ್ಕರ

ಒಂದು ಬಗೆಯ ಮದ್ಯ (ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)
< previous123456789160161Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App