ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖಟ್ವಾಂಗಧರ

ಶಿವ (ಗಂಗಾಧರಂ ಕಪಾಳಧರಂ .. .. ಖಟ್ವಾಂಗಧರಂ: ಅಭಿಧಾವ, ೧. ೧. ೧೪)

ಖಂಡ

ತುಂಡು (ರತ್ನಕಂಬಳಮಗಳಂ ಕೊಂಡೋರ್ ಒಂದಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಸೊಸೆವಿರ್ಗೆ ಪಚ್ಚುಗೊಟ್ಟೊಡೆ: ವಡ್ಡಾರಾ, ಪು ೨೫ ಸಾ ೨೮); ಗುಂಪು, ಸಮೂಹ (ನಾಗರ ಖಂಡಂಗಳಂ ಆ ನಾಗರ ಖಂಡದೊಳೆ ತೊಡರೆ ನರಂ ಇಸುವುದುಂ ನಾಗರ ಖಂಡಂಗಳುಮಂ ನಾಗರ ಖಂಡಮುಮಂ ಅಳುರ್ದುಕೊಂಡಂ ದಹನಂ: ಪಂಪಭಾ, ೮೯)

ಖಂಡನೀಯ

ಕತ್ತರಿಸಲು ಶಕ್ಯವಾದ; ಒಡೆಯುವುದು ಅಲ್ಪದಶನಮಾತ್ರಖಂಡನೀಯ ಮಂಡಕಮುಮಂ: ಆದಿಪು, ೧೧. ೨೬ ವ)

ಖಂಡಪರಶು

ಪರಮೇಶ್ವರ (ಎಲೆ ಖಂಡಪರಶುವೆ ಕೇಳ್ ಸದಾಚಾರ ನಿಯತಾಚಾರ ಗಣಾಚಾರಂ ಎಂದು ಆಚಾರತ್ರಯಂಗಳ್: ತ್ರಿಷಷ್ಟಿಪು, ೨೨. ೪ ವ)

ಖಂಡಪ್ರಾಸ

ಆದಿಪ್ರಾಸ (ದೇಸಿಯನೆ ನಿಱಸಿ ಖಂಡಪ್ರಾಸಮಂ ಅತಿಶಯಮಿದೆಂದು ಯತಿಯಂ ಮಿಕ್ಕರ್: ಕವಿರಾಮಾ, ೧. ೭೫)

ಖಂಡಾತ್

[ಭರತ] ಖಂಡದಿಂದ (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)

ಖಂಡುಗ

ಒಂದು ಅಳತೆ (ಪಿಂಡಿಯಂ ಬಿಡಿಸವೋದ ಮರುಳ್ ಖಂಡುಗ ಎಣ್ಣೆಯನಾಂತು ಬಂದುದು ಎಂಬ ನಾಣ್ಣುಡಿಯಂತೆ: ಧರ್ಮಾಮೃ, ೫. ೫೦ ವ)

ಖಂಡೆಯ

ಒಂದು ಆಯುಧ (ತನತೊಪ್ಪುವ ಖಂಡೆಯ ರಾಯನೆನಿಪ್ಪ ಅಭಿದಾನಮಂ ದಿಟಂ ಪ್ರಕಟಿಪವೋಲ್: ಕುಸುಮಾಕಾ, ೭. ೬೭)

ಖಂಡೇಂದುಧರ

ಅರ್ಧಚಂದ್ರನನ್ನು ಧರಿಸಿದವನು, ಶಿವ (ಖಂಡೇಂzದುಧರನನರ್ಚಿಸಿ ಇಂಡೆಗಳುಚ್ಚಳಿಸಿ ಕೆಯ್ಗೆ ಬಾರದೊಡೆ ಮಂಡೆಯನಱದೇಱಸುವಂ: ಸಮಯಪ, ೯. ೩೮)

ಖಡ್ಗ

ಕತ್ತಿ (ಅಸಿ ಖಡ್ಗ ಬಾಳ್: ಅಭಿಧಾವ, ೧. ೧೪. ೧೬)

ಖಡ್ಗಧೇನುಕ

ಕಿರುಗತ್ತಿ, ಸುರಗಿ (ಗುಪ್ತಗುಲ್ಮಾಂತರಪ್ರಾಪ್ತ ಖಡ್ಗಧೇನುಕಮಾಂಧ್ರದಾನುಷ್ಕಬಳಂ: ಆದಿಪು, ೧೩. ೪೫ ವ)

ಖಡ್ಗಪಿಧಾನ

ಕತ್ತಿಯ ಒರೆ (ಕೋಶಂ ಖಡ್ಗಪಿಧಾನಂ: ಅಭಿಧಾವ, ೩. ೧. ೧೦೦)

ಖಡ್ಗರತ್ನ

[ಜೈನ] ಚಕ್ರವರ್ತಿಗಳಿಗೆ ಸಹಜವಾಗಿ ಒದಗುವ ಏಳು ಜೀವರತ್ನಗಳಲ್ಲಿ ಒಂದು (ಜವನ ನಾಲಗೆಯ ಪೋಲ್ವೆಯಾದ ಸೌಗಂಧಕಮೆಂಬ ಖಡ್ಗರತ್ನಮುಂ: ಚಂದ್ರಪ್ರಪು, ೬. ೧೦೧ ವ)

ಖಡ್ಗಾಖಡ್ಗಿ

ಕತ್ತಿ ಹಾಗೂ ಯುದ್ಧ (ಖಡ್ಗದಿಂ ಖಡ್ಗದಿಂ ಮಾಡುವುದಾವೊಂದು ಯುದ್ಧಂ ಅದು ಖಡ್ಗಾಖಡ್ಗಿ: ಶಬ್ದಮದ, ೧೯೬ ಪ್ರ)

ಖಡ್ಗಾಂಶು

ಕತ್ತಿಯ ಹೊಳಪು (ಧರೆಯಂ ಖಡ್ಗಾಂಶುಜಾಲಂ ಬೆಳಗೆ: ಚಂದ್ರಪ್ರಪು, ೧೦. ೫೪)

ಖಡ್ಗಿ

ಖಡ್ಗಮೃಗ (ಇಭಖಡ್ಗಿವ್ರಾತ ನಾನಾ ಹರಿಮಯ ಕಟಕಭ್ರಾಂಜಿತ ತುಂಗವಂಶಪ್ರಭವಂ: ಆದಿಪು, ೧೩. ೪೬)

ಖಂದ

ಕಂದ[ಪದ್ಯ] (ಉತ್ಕಳಿಕೆ ಚೂರ್ಣಿಕೆ ಲತಿಕೆ ಖಂದಂ ವೃತ್ತಗಂಧಿ ಚಿತ್ರಮೆಂಬ ಗದ್ಯ[?]ಬಂಧದೊಳಂ: ಅನಂತಪು, ೧೦. ೩೦ ವ)

ಖದಿರ

ಕಗ್ಗಲಿ ಮರ, ಕಾಚಿನ ಮರ (ಪಾಲಾಶ ಅಶ್ವತ್ಥ ಅರ್ಕ ಔದುಂಬರ ನ್ಯಗ್ರೋಧ ಶಮಿ ಅಪಾಮಾರ್ಗ ಖದಿರ ಆದಿ ಶುಷ್ಕಸಮಿತ್ತುಗಳುಮಂ ಕುಶ ಅಶ್ವಲಾಯನ ವಿಶ್ವಾಮಿತ್ರಾದಿ ದೂರ್ವಾಂಕುರಪವಿತ್ರವಸ್ತುಗಳುಮಂ ಕೊಂಡು: ಪಂಚತಂತ್ರ, ೧೯೦ ವ)

ಖದಿರಗುಳಿ[ಕಾ]ಕೆ

ಕಾಚಿನ ಗುಳಿಗೆ (ಮೃಗಮದಖದಿರಗುಳಿಕಾ ಬಹಳಕರ್ಪೂರಪಾಳೀಸಂಮಿಶ್ರತಾಂಬೂಲದ್ವಿಗುಣಿತವದನಾರವಿಂದಾಮೋದನುಮಾಗಿ: ಆದಿಪು, ೧೧. ೨೭ ವ)

ಖದಿರು

ಖದಿರ (ಬಿದಿರುಮಂ ಖದಿರುಮಂ ಬೆತ್ತಮುಮಂ ಮುತ್ತಮುಮಂ ಬಳ್ಳಿಯುಮಂ ಕಳ್ಳಿಯುಮಂ ಕಳೆದು ಪೋಗಿ: ಲೀಲಾವತಿ, ೬. ೧೬ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App