ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖದ್ಯೋತ

ಸೂರ್ಯ (ದೇವರನುಂ ಬೋಧಿಪೊಡೆ ಅಳ್ಕಱೊಳ್ ನೆರೆಯದೇ ಖದ್ಯೋತಮುದ್ಯೋತಮಂ: ಅನಂತಪು, ೯. ೫೩); ಮಿಣುಕು ಹುಳು (ಸಮಸ್ತ ಉರ್ವೀಧರ ಅಶೇಷ ಶೇಷ ಮಹಾನಾಗಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ: ಪಂಪಭಾ, ೫. ೭೬)

ಖನನ

ತೋಡುವಿಕೆ, ಅಗೆತ (ಎನಗೆ ಇಂದಿಂಗೆ ಆಱುತಿಂಗಳ್ ಸಮನಿಸಿದಪುದಿಲ್ಲ ಎಲ್ಲಿಯುಂ ಬಂದಿಮಂಚಲ್ ಖನನಪ್ರಾರಂಭ ಚೌರ್ಯಾದಿಗಳ್ ಅನಶನಂ ಈಗಳ್ ಚತುರ್ವಾಸರಂ ಸುಕುಮಾಚ, ೭. ೧೮); ಕನ್ನ ಕೊರೆಯುವುದು (ಇಲ್ಲೆಲ್ಲಿಯುಂ ಬಂದಿ ಮಂಚಲ್ ಖನನ ಪ್ರಾರಂಭ ಚೌರ್ಯಾದಿಗಳ್: ಸುಕುಮಾಚ, ೭. ೧೮)

ಖನಿ

ಗಣಿ; ಮಿಂಚು (ಪುಳಿಗರ್ಚಿದ ಪಳಿಕಿನ ಪುತ್ತಳಿ ಕಪ್ಪುರದೊಪ್ಪ ಸಲಗೆಯಿಂ ಖನಿಮಿನುಕಂ ತಳೆದಂತಿರೆ ಪರಿಜಂ ಕಣ್ಗೊಳಿಸಿದುದು ಆ ಕಾಂತೆ ತಳೆದ ಬೆಳ್ವಸದನದೊಳ್: ಶಾಂತೀಶ್ವಪು, ೧೪. ೧೬)

ಖನಿತ್ರ

ಗುದ್ದಲಿ (ಪರಿಹರಿಸುತ್ತೆ ಸಂಶಯವಿಮೋಹನ ವಿಭ್ರಮಮಂ ಸ್ವಕೀಯ ವಾಕ್‌ಸ್ಫುರಿತ ಖನಿತ್ರದಿಂ: ಪಾರ್ಶ್ವನಾಪು, ೫. ೩೫)

ಖಪುಷ್ಪ

ಆಕಾಶದ ಹೂವು, ಗಗನ ಕುಸುಮ, ಅಸಂಭವ (ಇವರಱಯದ ಕಳೆ ಭಾವಿಸೆ ಭುವನಾಂತರಾಳದೊಳ್ ಖಪುಷ್ಪ ವಂಧ್ಯಾಗ್ರತನೂಭವಂ ಖರವಿಷಾಣನಿಭಂ: ಆಚವರ್ಧ, ೩. ೩೪)

ಖಮ್ಮರಿ

ಮಲ್ಲಯುದ್ಧದ ಒಂದು ಪಟ್ಟು (ಖಮ್ಮರಿ ಕತ್ತರಿ ಖೋಡವಂಕುಶಂ ಸಸಿಕುವೆನಿಪ್ಪ ಜೆಟ್ಟಿಗನ ನಚ್ಚಿನ ಬಿನ್ನಣಮೊಪ್ಪೆ ಕಾದಿದರ್: ಚಂದ್ರಪ್ರಪು, ೫. ೭೮)

ಖರ

ತೀಕ್ಷ್ಣವಾದ (ಭರತನ ಮುಖದೊಳ್ ಪರ್ವಿದ ಖರಕೋಪಾನಳನನೆಯ್ದೆ ನಂದಿಸುವವೊಲ್: ಆದಿಪು, ೧೪. ೧೦೭); ಹೇಸರಗತ್ತೆ (ಪರಿಗಳಿತ ಪೂತಿಗಂಧರ್ ಖರ ಕಾಕ ಸೃಗಾಲ ಕರಭ ಕೌಶಿಕ ವೃಕ ವಾನರ ವಿಷದಂಷ್ಟ್ರೋತ್ಕರ ಕುರ್ಕುರ ಕೀಟಕ ಭಲ್ಲನಿಕರ ನಿಷ್ಠುರನಿನದರ್: ಶಾಂತೀಶ್ವಪು, ೯. ೧೦೬)

ಖರಕರ

ತೀಕ್ಷ್ಣಕಿರಣ[ಗಳುಳ್ಳವನು] ಸೂರ್ಯ (ಖರಕರಸಮಪ್ರಭಂ ಚಕ್ರರತ್ನಂ ಒಡವುಟ್ಟೆ ಪುಟ್ಟಿದೆರಡೊಸಗೆಯೊಳಂ: ಆದಿಪು, ೩. ೨೭)

ಖರಕರಬಿಂಬ

ಸೂರ್ಯಮಂಡಲ (ಖರಕರಬಿಂಬದಿಂ ಕಿರಣಸಂತತಿಗಳ್ ಪೊಱಪೊಣ್ಮಿದಪ್ಪುವು ಎಂಬರ ನುಡಿ ಪೋಲ್ವೆವೆತ್ತುದು ಎನೆ: ಪಂಪಭಾ, ೧೨. ೭೩)

ಖರಕಿರಣ

ಸೂರ್ಯ (ಖರಕಿರಣಸ್ಫುರಿತಕ್ಕಿದಿರುರಿವಂತಿರೆ ಸಾಮದಿಂದಳವಡಿಸಿ ನೋಡುವೆಂ: ಆದಿಪು, ೧೪. ೪೨)

ಖರಖುರ

ಗಟ್ಟಿಯಾದ ಗೊರಸು (ಖರಖುರಹತಿಯಿಂ ಖರಮಂ ಕರಭಂಗಳನಟ್ಟಿ ಮುಟ್ಟಿ: ಪಂಪರಾ, ೪. ೧೦೯)

ಖರತನ

ತೀಕ್ಷ್ಣತೆ, ಉಗ್ರತೆ (ಖರಕಿರಣಂಗಳ ಕಾಯ್ಪಿನ ಖರತನದಿಂ ಚಂದ್ರಕಿರಣದುಜ್ಜಳಿಕೆಯಿಂ: ಆದಿಪು, ೧೧. ೭)

ಖರತಾ

ಉಗ್ರತೆ (ಲಯಶಂಕಾಶಕಟಾಪಕಾರಿ ಖರತಾ ಚಕ್ರೀವಜೀವಾಪಹಂ .. .. ಶ್ರೀಗಂಡ ಗೋಪಾಳನಾ: ನೇಮಿನಾಪು, ೭. ೯೩)

ಖರದಂಡ

ಒರಟಾದ ದಂಟಿರುವುದು, ತಾವರೆ (ಕೆಸಱೊಳ್ ಪುಟ್ಟಿದುದು .. .. ಮಧುಪಪ್ರಸಂಗಿ ಖರದಂಡಂ ಮತ್ತೆನುತಬ್ಜಮಂ ಬಿಸುಟು: ಜಗನ್ನಾವಿ, ೧. ೩)

ಖರದಂಡಪ್ರಿಯ

ಕಮಲಗಳಿಗೆ ಪ್ರಿಯನಾದವನು, ಸೂರ್ಯ (ಖರಕರನಂತೆ ಖರದಂಡಪ್ರಿಯರುಂ ಉದಧಿಯಂತೆ ಜಡಸ್ವಭಾವರುಂ: ಸುಕುಮಾಚ, ೨. ೫ ವ)

ಖರಪರುಷ

ಕತ್ತೆಯ ದನಿಯಂತೆ ಕರ್ಕಶವಾದ (ಖರಪರುಷನಿನಾದರ್ ನಾರಕರ್ ಬರ್ದುತಿರ್ಪರ್: ಆದಿಪು, ೫. ೮೯)

ಖರವಿಷಾಣ

ಕತ್ತೆಯ ಕೊಂಬು, ಅಸಂಭವ (ಜೀವಮೆಂಬುದುಂ ಅಂಬರಕುಸುಮ ಸಮಾನಮುಂ ಪರಲೋಕಮೆಂಬುದು ಖರವಿಷಾಣ ನಿರ್ವಿಶೇಷಂಗಳುಂ: ಶಾಂತಿಪು, ೮. ೧೩೨ ವ)

ಖರಶಾಣ

ಮಸೆಗಲ್ಲು, ರತ್ನಗಳ ಸಾಣೆ ಕಲ್ಲು (ಖರಶಾಣಕಷಣದಿಂ ಮಣಿಗುರುತೇಜೋವೃತ್ತಿ ನೆಗೞ್ವವೋಲ್: ಚಂದ್ರಪ್ರಪು, ೧. ೪೪)

ಖರಸಾಣೆಗಾಣಿಸು

ಸಾಣೆ ಹಿಡಿ (ಮದನಾಸ್ತ್ರಂ ಖರಸಾಣೆಗಾಣಿಸಿದುದು ಎಂಬಂತಾಗೆ ನಿನ್ನೊಂದು ಕಂದಿದ ಮೆಯ್ ಎನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞ್ತಾಳ್ದು ರಾಗದಿಂ ಎನ್ನೊಳ್ ಸುಕಮಿರ್ಪುದು: ಪಂಪಭಾ, ೮. ೬೬)

ಖರಾಂಶು

ಖರಕರ (ಬೇಸಱೆ ಲೋಕಮಂ ತಗುಳ್ದು ಸುಟ್ಟ ಅೞಲಿಂದೆ ಖರಾಂಶು ನಾರಕಾವಾಸದೊಳ್ ಆೞ್ವವೋಲ್ ಅಪರವಾರ್ಧಿಯೊಳ್ ಆೞ್ವುದುಂ: ಪಂಪಭಾ, ೩. ೮೧)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App