ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖರ್ಪರ

ಕಪಾಲ, ತಲೆಬುರುಡೆ (ಮೇಲಿಕ್ಕಿದ ಘನತರ ಖರ್ಪರದ ತೆಱದಿನಿರ್ದುದು ಗಗನಂ: ತ್ರಿಷಷ್ಟಿಪು, ೨೪. ೨೨೩); ಆಮೆಯ ಚಿಪ್ಪು (ಕೂರ್ಮನ ಖರ್ಪರದೆಲ್ವು ನುರ್ಗಿ ಬೆನ್ನೋಗುೞದತ್ತು: ಪುಷ್ಪದಂಪು, ೫. ೩೬)

ಖರ್ವ

ಕುಬ್ಜ (ಖರ್ವಂ ಕುಬ್ಜಂ ಆನತಂ: ಅಭಿಧಾವ, ೨. ೧. ೩೭)

ಖರ್ವಟ

ಕೋಟೆಯಿರುವ ಊರು (ವಿವಿಧ ಗ್ರಾಮಂಗಳಂ ಪಟ್ಟಣಂಗಳಂ ಖೇಡಂಗಳಂ ಖರ್ವಟಂಗಳಂ ದಾಂಟಿ: ಉದ್ಭಟಕಾ, ೨. ೩೩ ವ)

ಖರ್ವಡ

ಖರ್ವಟ, ನಗರ ಹಳ್ಳಿಗಳ ನಡುವಣ ಸ್ಥಿತಿಯ ಮತ್ತು ಬೆಟ್ಟಗಳ ನಡುವಿರುವ ಊರು (ಉರ್ವೀಧರನಿರುದ್ಧಂಗಳಪ್ಪ ಖರ್ವಡಂಗಳುಮಂ: ಆದಿಪು, ೮. ೬೩ ವ)

ಖರ್ವಡನಿವಾಸಿ

ಬೆಟ್ಟದೂರುಗಳಲ್ಲಿ ವಾಸಿಸುವವರು (ಸರ್ವಸ್ವಮುಮಂ ಕುಡದಿರಲುರ್ವೀಪತಿ ಬಂದೊಡೆ ಆಗದು ಎಂದು ಅತಿಭಕ್ತರ್ ಖರ್ವಡನಿವಾಸಿಗಳ್: ಆದಿಪು, ೯. ೧೨೮);

ಖರ್ವಿತ

ನೆಗ್ಗಿದ, ಅಗೆದ (ಮತ್ತ ಮಾತಂಗ ಪದನಖ ಖರ್ವಿತ ಉರ್ವೀತಳಮುಂ ಪ್ರಚಂಡ ಮಾರ್ತಂಡ ಮರೀಚಿ ತೀವ್ರ ಜ್ವಳನ ಆಸ್ಫಾರ ಕರಾಳ ಕರವಾಳ ಭಾಮಂಡಳ ಪರೀತ ಉದ್ಯತ ದೋರ್ದಂಡ ಚಂಡಪ್ರಚಂಡ ಸುಭಟ: ಪಂಪಭಾ, ೧೩. ೫೧)

ಖಱ್ಱನೆ

ಕಪ್ಪಾಗಿ, ಕರ್ರನೆ (ತಿಱ್ಱನೆ ತಿರಿತಂದು ಖಳಂ ಖಱ್ಱನೆ ತನು ಕುಂದಿ ಭಯವಶದಿಂದಂ: ಧರ್ಮಾಮೃ, ೧೨. ೧೦೧)

ಖಲ

ನೀಚ (ಕಂಡಱದುಂ ಕೇಳ್ದಱದುಂ ಮಾನ್ಯರನೆ ಖಲನುಮೇಂ ಮನ್ನಿಸನೇ: ಶಾಂತಿಪು, ೨. ೭೬)

ಖಲನ್ಯಾಯ

ಕೆಟ್ಟ ನಡತೆ (ಖಲನ್ಯಾಯಮನಾರಯ್ದು ನೋಡಿಕೊಳ್ಳಿಂ ನಿಮ್ಮೊಳ್: ಪಂಪರಾ, ೧೧. ೧೩೮)

ಖಲೀನ

ಕಡಿವಾಣ (ಖಣಖಣಾಯಿತ ಲೀನಸಂಘಟ್ಟ ಸ್ಕಂದಮಾನ ಫೇನ ಸಲಿಲಸ್ರೋತಶ್ಶತಂಗಳಿಂದಂ: ಆದಿಪು, ೧೪. ೯೫ ವ)

ಖಲ್ಲಾಯಿತ

ಚರ್ಮದ ನೀರಿನ ಚೀಲದಲ್ಲಿ ನೀರನ್ನು ತುಂಬಿ ಸಾಗಿಸುವವನು ಪಸರಿಸಿದ (ಕುಸುಮದೆಸೞ ಕಸವರಂ ದೆಸೆದೆಸೆಗೆ ಮಸುಳೆ ಮಲಯಾನಿಳಂ ಬೀಸಿ ಕಳೆಯೆ ತ್ರಿಕಾಲದೊಳಂ ಖಲ್ಲಾಯಿತನಂತೆ ಗಂಗಾಜಲಮಂ ತಂದು ತಳಿವ ಬೆಳ್ಮುಗಿಲ್ಗಳುಮಂ: ಪಂಚತಂತ್ರ, ೧೯೦ ವ)

ಖಲ್ವಬಿಲ್ವ ಸಂಯೋಗ

ಖಲ್ವಾಟ ಬಿಲ್ವೀಯ ನ್ಯಾಯದ ಸಂಕ್ಷಿಪ್ತ ರೂಪ [ಬೋಳುತಲೆಯವನು ತನ್ನ ಪಾಡಿಗೆ ತಾನು ಹೋಗುತ್ತಿರುವಾಗ ಅವನ ತಲೆಯ ಮೇಲೆ ಬಿಲ್ವದ ಕಾಯಿ ಬಿದ್ದಂತೆ; ಅರ್ಥಾತ್ ಭಾಗ್ಯಹೀನನು ಎಲ್ಲಿಗೆ ಹೋದರೂ ವಿಪತ್ತು ಕಾದಿರುತ್ತದೆ] (ಕರ್ಮವಶದಿಂ ಖಲ್ವಬಿಲ್ವ ಸಂಯೋಗದಂತೆ ಪೊೞಲೊಳಗೆ ತೊೞಲ್ವರಸನ ತಳಾಱರ್ ಓಡುವ ಮಾಯಾವಿಯ ಕೈಯೊಳಗಬಾಲಾರ್ಕನಂತೆ ಪ್ರಜ್ವಿಸುವ ರತ್ನದ ಬೆಳಗಂ ಕಂಡು ಕಳಕಳರವಮಂ ಮಾಡುವುದುಂ: ಧರ್ಮಾಮೃ, ೬. ೫೩ ವ)

ಖಲ್ವಬಿಲ್ವಸಮುಯುಕ್ತಿ

ಕಾಕತಾಳನ್ಯಾಯ (ಖಲ್ವಬಿಲ್ವಸಮಯುಕ್ತಿ ಕಾಕತಾಳನ್ಯಾಯಂ: ಅಭಿಧಾವ, ೨. ೨. ೩೩)

ಖಳ

ದುಷ್ಟ, ಕೆಟ್ಟ (ನಿನಗೀ ಖಳಸಂಸೃತಿಯೆಂಬುದೊಂದು ಱಾಟಣದೊಳಗಮ್ಮ ನೀಂ ಮೊಗಪೆಯಾಗದೆ ತಾಳ್ದಪವರ್ಗಮಾರ್ಗಮಂ: ಆದಿಪು, ೩. ೭೧)

ಖಳಕರ್ಮಾಷ್ಟಕ

[ಜೈನ] ಎಂಟು ಬಗೆಯ ದುಷ್ಟಕರ್ಮಗಳಲ್ಲಿ ಒಂದು (ಖಳಕರ್ಮಾಷ್ಟಕಮಂ ಪಡಲ್ವಡಿಸಿ: ಆದಿಪು, ೧೬. ೫೫)

ಖಳನ್ಯಾಯ

ಸಂಗ್ರಹ ನೀತಿ (ಖಳನ್ಯಾಯದಿನೆಲ್ಲಮಂ ನೆಱೆಯೆ ಕಲ್ತು ಉಪದೇಶಕನಾಗು ಲೋಕದೊಳ್: ಕಾವ್ಯಾವಲೋ, ೪೦೨)

ಖಳಸಂಸೃತಿ

ಕಷ್ಟಸಂಸರಣ (ಖಳಸಂಸೃತಿಯೆಂಬ ಮಹಾಜಳನಿಧಿಯೊಳಗೆ .. .. ಮುೞುಗುತ್ತಲಿರ್ಪ ಜೀವಾವಳಿಗೆಲ್ಲಂ ಯಾನಪಾತ್ರಂ ಅರ್ಹತ್‌ಪ್ರೋಕ್ತಂ: ಸಮಯಪ, ೩. ೨೫)

ಖಳೂರಿಕಾ[ಕೆ]

ಗರಡಿಯ ಮನೆ, ಶಸ್ತ್ರಾಭ್ಯಾಸಶಾಲೆ (ಪುರದ ಪೊರವೊೞಲ ಖಳೂರಿಕಾ ನಿಕಾಯಕ್ಕೆ ಬಂದು: ಕುಸುಮಾಕಾ, ೭. ೫೮ ವ)

ಖೞ

ಖಡ್ಗಧಾರಿ, ಖಡ್ಗಮೃಗ (ಹೇಳೋನ್ಮೂಳಿತವೈರಿವರ್ಗ ವನದುರ್ಗಂ ಖೞ ನಿರ್ಭಿನ್ನ ಶುಂಡಾಳಂ ನಿರ್ದಳಿತಾದ್ರಿದುರ್ಗನಿವಹಂ: ಪಾರ್ಶ್ವನಾಪು, ೧೧. ೪೯)

ಖೞ್ಗ

ಖಡ್ಗ, ಕತ್ತಿ (ಒಣಗಿದುದೊಂದು ಪೆರ್ವಿದಿರ ಪೆರ್ವೊದಱಂ ಮೊರೆದು ಉರ್ವಿದ ಆಶುಶುಕ್ಷಿಣಿಯವೊಲ್ ಆಂತ ಖೞ್ಗನಿವಹಕ್ಕೆ .. .. ಉರ್ಚಿಮುಕ್ಕಲುಂ ಇದೇಂ ನೆಱೆ ಕಲ್ತುವೊ: ಪಂಪಭಾ ಪರಿಷತ್ತು, ೧೧. ೯೪)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App