ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖೞ್ಗಾಖೞ

ಖಡ್ಗಾಖಡ್ಗಿ ಚಕ್ರಾಚಕ್ರಿಯುಂ ಖೞ್ಗಾಖೞಯುಮಾಗೆಯುಂ ಪೆಣೆದಿಱವ ಪದದೊಳ್: ಶಾಂತಿಪು, ೬. ೮೨ ವ)

ಖಾಂಡವ

ಕುರುಕ್ಷೇತ್ರದ ಒಂದು ವನ ಪಾವಕನೞ ಖಾಂಡವವನಮನುಂಡಪಂ: ಪಂಪಭಾ, ೫. ೭೮)

ಖಾಣ

ಪ್ರಾಣಿಗಳ ಮೇವು (ವರ್ಗ ದ್ವಿತೀಯಾಕ್ಷರಂಗಳ್ಗೆ ಖೊಪ್ಪರಂ, ಖಾಣಂ, ಖಾರಿಗೆ: ಶಬ್ದಮದ, ೨೫ ವೃತ್ತಿ)

ಖಾತ

ಕಂದಕ (ತೃಷಿತ ಪಥಿಕ ಪುಷ್ಪಾಯುಧ ಖಾತಾವಟಮೆನಲ್ ಎನಸುಂ ಕುಸುಮಾವಳಿಯ ಗಭೀರ ನಾಭಿಮಂಡಳಮೆಸೆಗುಂ: ಕುಸುಮಾಕಾ, ೧೨. ೫೩); ಆಳ (ದಂಡಕ ಗಿರಿಯ ಗುಹಾಗೇಹದೊಳೊಂದು ಯೋಜನದೆಂಟನೆಯ ಭಾಗಂ ಖಾತಮಾದಲ್ಲಿ ಪಾತಾಳಲಂಕೆಯೆಂಬ ಪುರಮಿರ್ಪುದು: ಪಂಪರಾ, ೯. ೧೬ ವ)

ಖಾತಿಕಾ

ಕಂದಕ, ಅಗಳು ಸರೋವರ (ಸುರಭಿತರ ಪ್ರಕೀರ್ಣ ವನರಾಜಿಗಳಿಂ ಕಮನೀಯ ಪದ್ಮಸುಂದರ ಜಲಖಾತಿಖವಳಯದಿಂ .. .. ಸೊಗಸಿಪ್ಪುದಂ .. .. ವಿರಾಟಪುರಮಂ: ಹರಿವಂಶ, ೧೧. ೩೨)

ಖಾತ್ವಾಸಮೀಕರಣ

ಅಗೆದು ಮುಚ್ಚುವುದು, ನಿರರ್ಥಕತೆಯನ್ನು ಸೂಚಿಸುವ ಒಂದು ಲೌಕಿಕನ್ಯಾಯ (ಈ ಧರಣೀಭಾರಮನಾಂ ಬಿಸುೞ್ಪೊಡದು ಚಿಃ ಲೋಕಕ್ಕೆ ಖಾತ್ವಾಸಮೀಕರಣಂ: ಆದಿಪು, ೪. ೮೧)

ಖಾಸ

ಕೆಮ್ಮು (ಗುಲ್ಮಮುಂ ವಾತಮುಂ ಶ್ವಾಸಮುಂ ಖಾಸಮುಂ ಪೊರ್ದಿದಾಗಳ್: ಹರಿವಂಶ, ೧೩. ೩೧ ವ)

ಖುರ

ಗೊರಸು (ಕುದುರೆಯ ಖುರಂಗಳನಿಸಾೞದೆಯುಂ ಚಕ್ರಂಗಳರ್ದು ಬಾರದೆಯುಂ: ಆದಿಪು, ೧೨. ೮೨)

ಖುರಮಣಿಕೆ

ಕುದುರೆ ಕಾಲಿಡಲು ಹಾಕಿರುವ ಮಣೆ (ಖುರಮಣಿಕೆಯೊಳ್ ಕಾಲನಿಕ್ಕಿ ಮಂದುರಿವ ಮುಂಡಿಗೆಯಂ ಮಲಂಗಿ .. .. ಕೇಯೂರಕನಿಂತೆಂದಂ: ಕಾದಂಬ, ೭. ೯ ವ)

ಖುರಳಿ

ಶಸ್ತ್ರಾಭ್ಯಾಸ (ಶಸ್ತ್ರಾಭ್ಯಾಸಮಂ ಬಿತ್ತರಿಪ ಖುರಳಿಯೊಳ್ ಸಾಧನಂಗೆಯ್ದು: ಕುಸುಮಾಕಾ, ೨. ೮೨)

ಖುರಾಹತಿ

ಗೊರಸಿನ ಪೆಟ್ಟು (ಅತಿಮಲಿನಾಮಗಮಾದ ಜಗಮಂ ಭವದೀಯ ಹಯಸ್ಫುರತ್ ಖುರಾಹತಿಯಂ .. .. ಲಯಮೆಯ್ದಿಸುವಲ್ಲಿ: ಜಗನ್ನಾವಿ, ೧. ೬೪)

ಖೇಚಕ್ರ

ಹಕ್ಕಿಗಳು ಆಕಾಶದಲ್ಲಿ ಹಾರುತ್ತ ನಿರ್ಮಿಸುವ ವರ್ತುಲ (ಕೃಷಿನಿರತನಂತೆ ರಾಸಿಯಂ ನಿಲಿಸಿ ವಿಹಗದಂತೆ ಖೇಚಕ್ರಮಂ ವರ್ತಿಸಿ: ಸುಕುಮಾಚ, ೩. ೬ ವ)

ಖೇಚರ

ಗಂಧರ್ವ, ವಿದ್ಯಾಧರ ಮೊದಲಾದ ಆಕಾಶಸಂಚಾರಿಗಳು (ಸುರಮುನಿ ಸಿದ್ಧ ಖೇಚರರೊಳ್ ಆವಕುಲಂ: ಕಾದಂಬ, ೪. ೬೯)

ಖೇಚರವಾರವಧು

ದೇವಲೋಕದ ವೇಶ್ಯೆ (ಚತುರ ಖೇಚರವಾರವಧೂ ನಿಧಾನಮಾದಿತ್ಯಪುರಂ ಪುರಂದರಪುರಪ್ರತಿಮಂ: ಚಂದ್ರಪ್ರಪು, ೬. ೫)

ಖೇಚರಿ

ದೇವತಾ ಸ್ತ್ರೀ (ಖೇಚರಿಯೋ ಭೂಚರಿಯೋ ನಿಶಾಚರಿಯೋ ರೂಪು ಬಣ್ಣಿಸಲ್ಕೆ ಆರ್ಗಂ ಅವಾಗ್ಗೋಚರಂ ಈ ಕಾನನಮುಂ ಅಗೋಚರಂ ಇವಳ್ ಇಲ್ಲಿಗೇಕೆ ಬಂದಳೊ ಪೇೞಂ: ಪಂಪಭಾ, ೩. ೧೪)

ಖೇಚರೀಜ

ಖೇಚರಿಯ ಮಗ, ಭೀಷ್ಮ (ಆರಯ್ಯೆ ಖೇಚರೀಜನ ಅಪಾರಮಹಾದಿವ್ಯಶಸ್ತ್ರನಿಚಯಂ ಅಜೇಯಂ: ಕರ್ಣನೇಮಿ, ೧೨. ೯೯)

ಖೇಟ

ಹಳ್ಳಿ (ಗಿರಿಸರಿತ್ಸಂರುದ್ಧಗಳಪ್ಪ ಖೇಟಂಗಳಿಂ: ಆದಿಪು. ನರಸಿಂ, ೮. ೬೩ ವ); ಗುರಾಣಿ, ಢಾಲು (ನೀಲೋತ್ಪಲಂ ಪಾಶಂ ಉತ್ತಮ ಖೇಟಂ ಧನುಸ್ ಇಕ್ಷುಚಾಪವೆಡಗೆಯೊಳ್ ತೋಱೆ: ಧರ್ಮಪ, ೧. ೭)

ಖೇಟಕ

ಖೇಟ, ಗುರಾಣಿ (ಪ್ರಯತ್ನದೆ ಬಿಗಿದಿರ್ದ ಎರೞ್ದೊಣೆ ಮಿಸುಪ್ಪ ಅಸಿ ಖೇಟಕಂ ಇಂತಿವು ಒಂದುಗುಂದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದಂ ಅರ್ಜುನಂ: ಪಂಪಭಾ, ೭. ೭೯)

ಖೇಡ

ಎತ್ತರವಾದ ಕೋಟೆಯಿರುವ ಊರು (ನಗರ ಖೇಡ ಖರ್ವಡ ಮಡಂಬ ಪತ್ತನಂ ಅವೆತ್ತಲುಂ ಸುತ್ತಿಱಗುಂ: ಸುಕುಮಾಚ, ೧. ೭೫)

ಖೇಡಕುೞ

ವಿಹಾರದ ಕೊಳ (ಜಳಜಾನನೆ ಕುೞವೊಗೆ ಕಣ್ಗೊಳಿಸುವ ಖೇಡಕುೞವೊಕ್ಕಳೆಂಬಂತೆವೊಲ್: ಪಾರ್ಶ್ವನಾಪು, ೭. ೮೬)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App