ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖೇಡನ

ಆಟ, ಲೀಲೆ (ಖೇಡನ ನರ್ತನ ಹಾಸ್ಯವನಾಡಂಬರ ನಟನ ವಾದನ ಗೇಯ ಕ್ರೀಡೆಗಳಿಂ: ಜಗನ್ನಾವಿ, ೪. ೪೮)

ಖೇದ

ದುಃಖ (ಖೇದಂ ಮಾಣ್ಗೆ ಶುಭೋದಯಂ ಸಮನಿಕುಂ: ಪಂಪರಾ, ೧೦. ೮೬)

ಖೇದಾಂಧತೆ

ದುಃಖದಿಂದ ಕಂಗೆಡುವಿಕೆ (ಏಂ ಬಾೞ್ತೆ ನಿನಗೆಂದೞಲ್ದಳ್ ತೞ್ತುರೆ ಸತಿ ಸುಮತಿ ಕುಮತಿ ಖೇದಾಂಧತೆಯಿಂ; ಶಾಂತಿಪು, ೬. ೩೪)

ಖೇಯ

ಕಂದಕ (ಮೂವಳಸುವಳಸಿ ಸುತ್ತಿರ್ದುದು ಅಂಬೋಧಿಯೆಂಬಂತೆ ಗಭೀರಾರಾವದಿಂ ಪಲ್‌ಮೊರೆವವೊಲ್ ಎಸೆಗುಂ ಸುತ್ತಿ ಪಾನೀಯಖೇಯಂ: ಸುಕುಮಾಚ, ೯. ೫೭)

ಖೇಲನ

ಆಟ. ಕ್ರೀಡೆ (ಮತ್ತಮೊಂದು ಖೇಲನವಿಲಾಸ ವಾಸಾಂಗಣದೊಳ್ ಒರ್ವಳ್: ಅನಂತಪು, ೮. ೫ ವ)

ಖೇಳೋಷಧಿ

[ಜೈನ] ಯತಿಯ ಎಂಜಲಿನಿಂದ ರೋಗ ವಾಸಿಯಾಗುವ ಔಚಧರ್ಧಿ (ಉಗ್ರೋಗ್ರ ತಪದಿಂ ದೀಪ್ತತಪಂ ಮಹಾತಪಂ ಘೋರತಪಂ ಎಂದಿವು ಮೊದಲಾಗೊಡೆಯ ತಪಂಗಳಂ ಗೆಯ್ಯೆ ತಪದ ಮಾಹಾತ್ಮ್ಯದಿಂದಂ ಆಮೋಷಧಿ ಖೇಳೋಷಧಿ ಜವೋಷಧಿ ವಿಪ್ಪೋಷಧಿ ಸರ್ವೋಷಧಿಯೆಂದಿವು ಮೊದಲಾಗೊಡೆಯ ಋದ್ಧಿಗಳ್ ಪುಟ್ಟಿದೊಡಂ: ವಡ್ಡಾರಾ, ಪು ೬೯, ಸಾ ೩)

ಖ್ಯಾತಕರ್ಣಾಟಕ

ಕನ್ನಡದಲ್ಲಿ ಪ್ರಖ್ಯಾತವಾದ ಆರು ಅಕ್ಷರವೃತ್ತಗಳು; ಉತ್ಪಲಮಾಲೆ, ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ

ಖ್ಯಾತಿವಡೆ

ಖ್ಯಾತಿಗಳಿಸು (ಖ್ಯಾತಿವಡೆದಿರ್ದ ನಾಲ್ಕುಂ ಜಾತಿಗಳೊಳ್ ಮದುವೆಯಾಗಲಕ್ಕುಂ ಪಾರ್ವರ್ಗೆ: ಸಮಯಪ, ೬. ೯೪)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App