ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894445Next >

ಗಗನ

ಆಕಾಶ (ನೀಲಾಭ್ರಘಟೆಯೆ ಗಗನಮನೆಡೆಗೊಂಡವೋಲಾಯ್ತು: ಜಗನ್ನಾವಿ, ೪. ೫೪)

ಗಗನಕುಸುಮ

ಆಕಾಶದ ಹೂ, ನೆರವೇರದ ಆಸೆ (ಗಗನಕುಸುಮನತ್ಯಂತಾಭಾವಮಂ ನಿಷೇಧಮಾತ್ರದಿಂದಂ ಉಂಟುಮಾಡಲಕ್ಕುಮೆ: ಶಾಂತಿಪು, ೮. ೧೩೮ ವ)

ಗಗನಗಂ[ಗಾ]ಗೆ

ಆಕಾಶಗಂಗೆ (ಘನವಹ್ನಿಜ್ವಾಲಧೂಮಾವಳಿ ಗಗನಗಂಗಾತಟೋದ್ಯುತ್ತಮಾಳೀವನಮೋ: ಚಂದ್ರಪ್ರಪು, ೪. ೩೧)

ಗಗನಗಜ

ಆಕಾಶದ ಆನೆ, ಐರಾವತ (ಗಗನಗಜಕ್ಕಿಕ್ಕಿದ ಪೊನ್ನ ಗಂಟೆಯೆರಡೆನಲು: ಆದಿಪು, ೬. ೫೨)

ಗಗನಗತಿ

ಆಕಾಶಗಮನ (ಗಗನಗತಿ ಶ್ರಮಮಂ ನೆಟ್ಟಗೆ ಕಳೆವರ್: ಕುಸುಮಾಕಾ, ೨. ೭೭)

ಗಗನಗಮನಜನಿತಶ್ರಮ

ಆಕಾಶಪ್ರಯಾಣದಿಂದಾದ ಆಯಾಸ (ಬಳ್ಳಿಗಾವಣಂಗಳೊಳಂ ನನೆಯ ಜೊಂಪಗಳೊಳಂ ಗಗನಗಮನಜನಿತಶ್ರಮಮಂ ಆಱಸಿ: ಪಂಪಭಾ, ೭. ೮೧ ವ)

ಗಗನಗಾಮಿನೀವಿದ್ಯೆ

ಆಕಾಶಗತಿಯ ವಿದ್ಯೆ, ಖೇಚರವಿದ್ಯೆ (ಕನಕಶ್ರೀಯಂ ಗಗನಗಾಮಿನೀವಿದ್ಯೆಯಿಂ ಒಯ್ದು: ಶಾಂತಿಪು, ೩. ೬೦ ವ)

ಗಗನಚರ

ಆಕಾಶದಲ್ಲಿ ಚರಿಸುವುದು, ಹಕ್ಕಿ (ಕಾಗೆ ಗೂಗೆ ಪರ್ದು ಚಕೋರಂ ಹಂಸೆ ಕುರ್ಕು ಗಿಳಿ ಪುರುಳಿ ಪೆಂಗುರು ಕಾರಂಡಂ ಆಂದೆ ಮೊದಲಾಗೊಡೆಯ ಗಗನಚರಂ: ವಡ್ಡಾರಾ, ಪು ೯೭, ಸಾ ೯); ಖೇಚರ ಗಗನಚರಂ ಲಕ್ಷ್ಮೀಧರನಗಣ್ಯಪುಣ್ಯಪ್ರಭಾವದಿಂ: ಪಂಪರಾ, ೧೪. ೪೬)

ಗಗನಚರಭುಜಗ

ಗ್ರಹಗಳನ್ನು ಹಿಡಿಯುವ ಹಾವು, ರಾಹು (ಭಾನುರಿಪು ಸಿಂಹಿಕಾಪ್ರಿಯಸೂನು ತಮಂ ರಾಹು ಗಗನಚರಭುಜಗಂ: ಅಭಿಧಾವ, ೧. ೧. ೭೫)

ಗಗನಚರಾಧೀಶ

ಖೇಚರರರಾಜ (ಇದಿರೆದ್ದು ಭಕ್ತಿಪುರಸ್ಸರಂ ಮನದೆಱಕದಿನೆಱಗಿದ ಗಗನಚರಾಧೀಶನಂ ಯತಿ ಪರಸಿ: ಶಾಂತಿಪು, ೨. ೨೧)

ಗಗನಚರಿ

ಆಕಾಶದಲ್ಲಿ ಸಂಚರಿಸುವವಳು, ಖೇಚರಿ (ಅದಂ ಕೇಳ್ದ ಗಗನಚರಿಯೊರ್ವಳ್ ಬಂದು ಅರಸಂಗೆಱಗಿ ಪೊಡೆವಟ್ಟು ಎನಗೆ ಭರ್ತೃಭೈಕ್ಷಮಂ ದೇವರ್ ಇಕ್ಕಲೆವೇೞ್ಕುಂ ಎಂಬುದುಂ: ಶಾಂತಿಪು, ೯. ೮೨ ವ)

ಗಗನಚಾರಣ

[ಜೈನ] ಆಕಾಶದಲ್ಲಿ ಸಂಚರಿಸುವ ಋಷಿದ್ವಯ (ಧರ್ಮವರ ಸಾಗರಸೇನರೆಂಬ ಗಗನಚಾರಣರ್ ಕಾಂತಾರಚರ್ಯಾ ಮಾರ್ಗದೊಳ್ ತಮ್ಮ ವಾಸಕ್ಕೆ ಬರ್ಪರಂ ಶ್ರೀಮತಿಯುಂ ತಾನುಂ ಕಂಡು: ಆದಿಪು, ೪. ೯೫ ವ)

ಗಗನತಳ

ಬಾಂದಳ, ಅಂತರಿಕ್ಷ (ಗಗನತಳಮೆ ಪಱದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ: ಪಂಪಭಾ, ೧. ೫೮)

ಗಗನಪ್ರಚಾರ

[ಜೈನ] ಆಕಾಶ ಸಂಚಾರ (ಅನ್ವಿತಚತುರಾನನತ್ವಂ ಅಖಿಳಾಗಮವಿತ್ತ್ವಂ ಅಪಕ್ಷ್ಮತಾಸಂ ಆಯತಗಗನಪ್ರಚಾರಂ ಅಪಜೀವವಧಂ ಪರಿವೀತ ದೇಹಬಿಂಬತೆ: ಆದಿಪು, ೧೦. ೪೩)

ಗಗನಮಂಡಲ

ಆಕಾಶ ಪ್ರದೇಶ (ಎರಡುಂ ಬಲದ ಕಡುವಿಲ್ಲರ್ ಭೋರ್ಗರೆದು ಇಸೆ ಕೂರ್ಗಣೆಯೊಳ್ ಪಂದರ್ ಇಕ್ಕಿದಂತಾಯ್ತು ಗಗನಮಂಡಲಮೆಲ್ಲಂ: ಪಂಪಭಾ, ೧. ೭೨)

ಗಗನವಿವರ

ಆಕಾಶದ ವಿಸ್ತಾರ (ಪರೆದಿರೆ ಸಂಧ್ಯಾರಾಗಂ ನಿರಂತರಂ ಗಗನವಿವರವನೊಪ್ಪಿತ್ತೆಂದಾದರದಿಂ ಪೇೞಲ್ಬಗೆದಂತಿರೆ: ಕವಿರಾಮಾ, ೧. ೧೦೨)

ಗಗನವಿಹಾರ

ಆಕಾಶಯಾನ (ಗಗನವಿಹಾರಂ ತನಗೊಪ್ಪೆ ವಿಹಾರಿಸಿಯುಂ: ಶಾಂತಿಪು, ೧೨. ೨೦)

ಗಗನಸ್ಥಳಿ

ಗಗನಮಂಡಲ (ದಾಂಧಳಂಧಳಧ್ವನಿಯಳುರ್ಕೆಗೊಳೆ ಶಬ್ದಗುಣಂ ತಿಳಿವೊಡಾಯ್ತು ಗಗನಸ್ಥಳಿಗೆ: ರಾಜಶೇವಿ, ೬. ೪೪)

ಗಗನಾಪಗೆ

ದೇವಗಂಗೆ (ಮುಗಿಲಟ್ಟಳೆಗಳ ಪಚ್ಚೆಯ ಪೊಗರ್ವೆಳಗು .. .. ಗಗನಾಪಗೆಯಂ ಜಗುನೆಯ ಕರ್ಮಡುವಱಸಲ್ ನೆಗೆವಂತೊಪ್ಪುವುದು: ಪುಷ್ಪದಂಪು, ೨. ೬೬)

ಗಗನಾಭೋಗ

ಆಕಾಶದ ವಿಸ್ತಾರ (ಗಗನಾಭೋಗಮಂ ಎಯ್ದೆ ನೀಳ್ದ ಮಣಿಕೂಟಾಟೋಪಮೆಂಬಂತೆ ದಿಟ್ಟಿಗೆ ಮುನ್ನಂ ಬರೆ: ಆದಿಪು, ೧೩. ೧೦)
< previous1234567894445Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App