ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893233Next >

ಚಂಕನತ್

ಹೊಳೆಯುವ (ಅಲ್ಲಿಗೆ ದಳನ್ನೀಲಾತಸೀ ಚಂಕನತ್ ತನು ತೋಯಾಹರಣಾರ್ಥಿ ಬಂದಂ ಅಭಯಂ ಸೌಮಿತ್ರಿ ಶತ್ರುಂಜಯಂ: ಪಂಪರಾ, ೭. ೧೦೪)

ಚಕಾರಚತುಷ್ಕ

ನಾಲ್ಕು ಚಕಾರಗಳು, ಚಕಾರ ಹೆಚ್ಚು ಬಳಸುವ ವ್ಯಾಸನ ವೈಶಿಷ್ಟ್ಯ (ಭಾರತಾದಿಯೊಳ್ ವಿರಚಿಸಿ ಪೇೞ್ವ ಪದ್ಯದ ಚಕಾರಚತುಷ್ಕ: ಸಮಯಪ, ೧೦. ೧೭೫)

ಚಕಿತ

ಭಯಗೊಂಡ (ಅಳುರ್ವ ಕೋಪಶಿಖಿಗಳ ನಡುವಿರ್ತಲೆವೊತ್ತಿದ ಪುಳ್ಳಿಯ ಪುೞುವೊಲಿರ್ದಂ ಅತಿಚಕಿತಚಿತ್ತಂ ಅಪರಾದಿತ್ಯಂ: ಗದಾಯು, ೧. ೨೩)

ಚಕೋರ

ಬೇಳುದಿಂಗಳನ್ನೇ ಕುಡಿಯುವುದೆಂದು ಹೇಳಲಾಗುವ ಒಂದು ಕಲ್ಪಿತ ಪಕ್ಷಿ (ಶುಕ ಕಾರಂಡ ಚಕೋರ ಸಾರಸ ಮಯೂರಾಕಾರದಿಂ ವ್ಯಾಘ್ರ ಸಿಂಹ ಕುರಂಗಾಂಬುಜ ವಕ್ರ ಮತ್ಸ್ಯ ಮಕರೇಭಾಕಾರದಿಂ ಚೆಲ್ವುವೆತ್ತು: ಸುಕುಮಾಚ, ೧೦. ೫೩)

ಚಕ್ಕಣ

[ಚಕ್ಷಣ] ನೋಟ (ಮೃಡನಂ ಜಾನಿಸುವೆಡೆಯೊಳ್ ಬಿಡೆ ಚಕ್ಕಣದಿಂದೆ ನಾಲ್ವೆರಲ್ ನೆಗೆದಿರ್ಪಂ ಗಡ ಯೋಗಿ: ಸಮಯಪ, ೧೨. ೨೪); ಚಾಕಣ, ಮದ್ಯಪಾನದಲ್ಲಿ ನಂಜಿಕೊಳ್ಳುವ [ಖಾರವಾದ] ತಿಂಡಿ (ಗೇಯದೊಳ್ ಈಕೆ ಸೊರ್ಕನಿಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು: ಪಂಪಭಾ, ೭. ೯೦)

ಚಕ್ಕವತ

ಚಕ್ಕೋತ ಸೊಪ್ಪು (ಸುರುಚಿರ ಚಕ್ಕವತಂ ಚಿರಿಕೆ ರಾಜಗಿರಿ ಕೆಸವು ಕೀರೆ ದೊಗ್ಗಳೆಯೆಲೆ ವಾದುರವಂ ಬಡಿಸಿದರ್: ಧರ್ಮಪ, ೨. ೫೮)

ಚಕ್ಕೞ

ಚಪ್ಪಟೆಯಾದುದು (ಚಕ್ಕೞದ ಮೊಲೆಗಳುಂ .. .. ಇನಿಯನ ರೋಸಕ್ಕೆಡೆಯಾಯ್ತು: ಲೀಲಾವತಿ, ೧೩. ೯೨)

ಚಕ್ಕುಚಕ್ಕನೆ

ಚಕ್ ಚಕ್ ಎಂದು (ನಿಶಾತಶರಾಳಿಗಳ್ ಎಯ್ದೆ ಚಕ್ಕುಚಕ್ಕನೆ ಕೊಳೆ ಮೊಕ್ಕುಮೊಕ್ಕೆನೆ ಶಿರಂಗಳುರುಳ್ದುವು ವೈರಿಭೂಪರಾ: ಪಂಪಭಾ, ೧೨. ೧೧೯)

ಚಕ್ಕುಮೊಕ್

ಚಕ್ ಮೊಕ್ ಎಂದು (ಬೇವ ಶವಸಂಘಾತಂಗಳಂ ಚಕ್ಕುಮೊಕ್ಕೆಂದು ಆಗಳ್ ಕಡಿದು ಉಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂಬಂದಂ: ಪಂಪಭಾ, ೧೩. ೭೧)

ಚಕ್ಕುಲಿ, ವಂಶಂ

ಬಂಚಂ: ಶಬ್ದಮದ, ೨೭೭ ಪ್ರ)

ಚಕ್ರ

ಸೈನ್ಯ (ಚತುರಂಗ ಚಕ್ರಪಾಂಸುಪಟಲದಿಂದಂ ದಿಙ್ಮುಖಂಗಳುಂ ವಿರೋಧಿನರಪಾಳಯ ಪ್ರಿಯಸಖೀ ಮುಖಂಗಳುಂ ವಿಚ್ಛಾಯಂಗಳಾಗೆಯುಂ: ಆದಿಪು, ೧೩. ೭೭ ವ); ಚಕ್ರವರ್ತಿಯ ಚಕ್ರ (ಹತವೈರಿಕ್ಷತ್ರಚಕ್ರಂ ಭಯಚಕಿತ ಜಗದ್ವೀರಚಕ್ರಂ ವಿನಮ್ರಕ್ಷಿತಿಚಕ್ರಂ: ಆದಿಪು, ೧೪. ೩); ಒಂದು ಆಯುಧ (ಅನೇಕಾಕ್ಷರಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ: ಪಂಪಭಾ, ೨. ೩೪ ವ); ಸುದರ್ಶನಚಕ್ರ (ಪಿಡಿಯೆಂ ಚಕ್ರಮನೆಂಬ ಚಕ್ರಿಯಂ ಇಳಾಚಕ್ರಂ ಭಯಂಗೊಳ್ವಿನಂ ಪಿಡಿಯಿಪ್ಪೆಂ ಕರಚಕ್ರಮಂ: ಪಂಪಭಾ, ೧೦. ೨೫); ಸಮೂಹ (ತದ್ರಾಜಚಕ್ರಂ ಪೊದಳ್ದರ್ಬಿಸಿದತ್ತು ಉದ್ದಾಮ ಮೌರ್ವೀರವಮುಖರ ಮಹಾಚಾಪ ಚಕ್ರಾಂಧಕಾರಂ: ಪಂಪಭಾ, ೧೨. ೨೦); ಗಾಲಿ (ಭೀಕರ ರಥಚಕ್ರಮಂ ಪಿಡಿದು ನುಂಗಿದಳೋರ್ಮೆಯೆ ಧಾತ್ರಿ ಕೋಪದಿಂ: ಪಂಪಭಾ, ೧೨. ೨೦೬); ಭೂಮಿ (ಕ್ಷಿತಿ ಭೂಮಿಯುಂ ವಿನಾಶವುಮರಿ ಚಕ್ರಮುಂ: ಅಭಿಧಾವ, ೧. ೩. ೧೯); ಚಕ್ರವಾಕ (ಪೊಣರ್ವಕ್ಕಿ ಚಕ್ರಂ: ಅಭಿಧಾವ, ೧. ೧೦. ೧೭)

ಚಕ್ರಕ್ರಮಣ

ಚಕ್ರದಂತಹ ಚಲನೆ, ಸುತ್ತುವುದು (ತನ್ನಂ ನಿರ್ದಾಟಿಸಿ ಕಳೆಯೆ ಪೋಗಿ ಸತ್ತು ವಿವಿಧ ಜವಂಜವ ಚಕ್ರಕ್ರಮಣದಿಂ ಬಂದು: ಶಾಂತಿಪು, ೭. ೪೨ ವ)

ಚಕ್ರಚಾಪ

ಒಂದು ಆಯುಧ (ಸಬಳ ಸಲ್ಲೇಹ ಸೂಲಿಗೆ ಚಕ್ರಚಾಪ ಬಲ್ಲೆಹ ಕತ್ತಿಗೆ ಕಠಾರಿಯಾದ .. .. ಕೈದುಗಳಿಂದ: ಧರ್ಮಪ, ೧. ೮೬ ವ)

ಚಕ್ರಧರ

ಚಕ್ರವನ್ನು ಧರಿಸಿದವನು, ಶ್ರೀಕೃಷ್ಣ (ಸಾರವಸ್ತುಗಳಿಂ ನೆಱೆದ ಅಂಭೋರಾಶಿಯೆ ಕಾದಿಗೆ ಕಾವನುಂ ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ: ಪಂಪಭಾ, ೪. ೩೨); ಚಕ್ರವರ್ತಿ (ಚಕ್ರಧರನಧರಕಸಲಯದ ಮೇಲೆ ದಂತಕಾಂತಿ ಲತಾಂತಪ್ರಭೆಗಳ್ ಪಸರಿಸೆ: ಆದಿಪು, ೪. ೨೬ ವ)

ಚಕ್ರಧರತ್ವ

ಚಕ್ರವನ್ನು ಧರಿಸಿರುವುದು (ಚಕ್ರಧರತ್ವಮಂದು ಸಫಲಂ .. .. ಆ ವಿಕ್ರಮ ಸಾಲ್ವನಂ ತವಿಸಿದಂದು: ಜಗನ್ನಾವಿ, ೧. ೭೩)

ಚಕ್ರನೇಮಿ

ಚಕ್ರದ ಸುತ್ತುಪಟ್ಟೆ (ಚಟುಳಿತ ಚಕ್ರನೇಮಿ ಪರಿವರ್ತನಘಟ್ಟನಘಾತ ರ್ಭರ ಸ್ಫುಟಿತ ಧರಾತಳಂ: ಪಂಪಭಾ, ೧೧. ೧೪೭)

ಚಕ್ರಪಕ್ಷಿ

ಚಕ್ರವಾಕ (ಸುತ್ತಿದ ರೇಫೆ ದಡ್ಡ್ಕ್ಕರಮಾದುದಕ್ಕೆ: ಚಕ್ರಪಕ್ಷಿ ಜಕ್ಕವಕ್ಕಿ: ಶಬ್ದಮದ, ೨೭೫ ಪ್ರ)

ಚಕ್ರಪಾಣಿ

ಕೈಯಲ್ಲಿ ಚಕ್ರವನ್ನುಳ್ಳವನು, ಶ್ರೀ ಕೃಷ್ಣ (ತನ್ನಿಱದು ಗೆಲ್ದ ಕೊಳುಗುಳವಂ ನೋಡಲ್ ಚಕ್ರಪಾಣಿಯುಂ ತನ್ನ ಸಹೋತ್ಪನ್ನರುಂ ಒಡವರೆ: ಪಂಪಭಾ, ೧೪. ೨)

ಚಂಕ್ರಮಣ

ತಿರುಗಾಟ (ಚಕಿತ ಚಂಕ್ರಮಣಸ್ಖಲಿತ ಪದಪಲ್ಲವ ಲಾವಣ್ಯರಾಗಾರ್ಚಿತ ಪದಪಥದತ್ತ ದೃಷ್ಟಿಯುಂ: ಲೀಲಾವತಿ, ೧೪. ೪೯ ವ)

ಚಕ್ರಮಿಥುನ

ಚಕ್ರವಾಕ ಜೋಡಿ (ನೆನೆಯಿಸಿದತ್ತಾ ಮಿಥುನಂ ದಿನಮುಖಮಂ ಕಂಡ ಚಕ್ರಮಿಥುನಾಕೃತಿಯಂ: ಮಲ್ಲಿನಾಪು, ೧೩. ೧೫)
< previous1234567893233Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App