ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893233Next >

ಜಂಕರಿಸು

ಹೆದರು (ಜಂಕರಿಸಂ ಕಾತರಿಸಂ ಮಾಂಕರಿಸಂ ಬೆಕ್ಕಸಂಬಡಂ ಬೆಕ್ಕರಿಸಂ ಹೂಂಕರಿಸಂ ನಿರ್ವಿನಿಸಂ ಜೀಂಕರಿಸಂ ಜಿನುಗಂ ಅವನಿಸಂ ಕೊಕ್ಕರಿಸಂ: ಅಜಿತಪು, ೫. ೮೯)

ಜಂಕಿಸು

ಗದರಿಸು, ಹೀಯಾಳಿಸು (ಬಿಸುಗದಿರನ ಕಡುಗಾಯ್ಪಂ ಮಸುಳಿಸಿದುವು ತುಱುಗಿ ನೆಗೆದು ನಾಲ್ಕುಂ ದೆಸೆಯಂ ಮುಸುಕಿದುವು ಮುಳಿದರಂ ಜಂಕಿಸಿದುವು ಬಿಡದಾರ್ದು ಕಾವನೆಚ್ಚಲರ್ಗಣೆಗಳ್: ಕಬ್ಬಿಗಕಾ, ೨೩೫)

ಜಂಕೆ

ಗದರಿಕೆ (ಪರಿವ ಗಾಲಿಯ ಕೋಳ್ಗೆ ಕೆಳರ್ತು ಬೆಟ್ಟುಗಳ್ ಕೂಡೆ ಸಡಿಲ್ವಿನಂ ಪೊಡೆವ ಬೀರರ ಜಂಕೆಗೆ ಗೊಂಟಿನಾನೆಗಳ್ ಕೋಡುವಿನಂ ಕಡಂಗಿ ಪರಿತಂದುವು ತೋರ್ಕೆಯ ತೇರ್ಗಳೋಳಿಯಿಂ: ಕಬ್ಬಿಗಕಾ, ೧೬೦)

ಜಂಕೆ ಝಂಪಂ

ಜಂಪಂ: ಶಬ್ದಮದ, ೨೬೯ ಪ್ರ)

ಜಕ್ಕ

ಯಕ್ಷ (ಕುಬೇರನಿಂ ಕಪ್ಪಂಗೊಂಡು ಪೊನ್ನಂ ಜಕ್ಕರೆಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೩೨ ವ)

ಜಕ್ಕಂಜಱ

ಬಹಳ ನಿಂದನೆಮಾಡು (ಅಂತು ಜಕ್ಕಂಜಱವ ಕಜ್ಜಮಂ ಕೇಳ್ದು: ಅನಂತಪು, ೮. ೧೯ ವ)

ಜಕ್ಕಂದೊೞ

ಗುಂಡಗೆ ಸುತ್ತುವ ಉಯ್ಯಾಲೆ ಸುೞಗಾಳಿಯ ತೂಲದಂತೆ ಜಕ್ಕಂದೊೞದಂತೆಱಾಟಣದ ಗುಂಡಿಗೆಯಂತೆ: ಚಂದ್ರಪ್ರಪು, ೧೩. ೯೦)

ಜಕ್ಕಂದೊೞಲಿ

ಕೋಣ (ಹರಿ ಜಕ್ಕಂದೊೞಲಿಯಂ ಅನುಕರಿಸಿರ್ದಂ ಬಹಳ ಬಾಹುಚಾಳನ ಗತಿಯೊಳ್: ನೇಮಿನಾಪು, ೮. ೧೧೬)

ಜಕ್ಕರೆಕ್ಕೆ

[ಜಕ್ಕರ್+ಎಕ್ಕೆ} ಯಕ್ಷರು ಒಟ್ಟಾಗಿ (ಕೈಳಾಸದ ಮೇಗಣ್ಗೆ ವಂದು ಕುಬೇರನಿಂ ಕಪ್ಪಂಗೊಂಡು ಜಕ್ಕರ್ ಎಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೪೨ ವ)

ಜಕ್ಕವಕ್ಕಿ

ಚಕ್ರವಾಕ ಪಕ್ಷಿ (ಬನಮಂ ಕೋಗಿಲೆ ಜಕ್ಕವಕ್ಕಿ ಪಗಲಂ ಪೂಗೊಂಚಲಂ ತುಂಬಿ ಚಂದ್ರನನಂಭೋನಿಧಿ: ಆದಿಪು, ೧೨. ೩೧)

ಜಕ್ಕಿ

ಯಕ್ಷಿ (ಜಕ್ಕಿಯರೂೞವೆ ಕೂಟದೇೞ್ಗೆಯೊಳ್ ಸುರುಕೆನಬಾರದೆಂಬ ಬೆಲೆವೆಣ್ಗಳ ಕೂಟಮಂ ಇಕ್ಕು ಕಿಚ್ಚಿನೊಳ್: ಅನಂತಪು, ೮. ೫೭)

ಜಕ್ಕುಗೊಳ್

ಚಿವುಟು, ಉಗುರ ಗುರುತು ಹೊಂದು (ಮರೆದೊಱಗಿದ ಎಡ್ಡ ಮಿಂಡಿಯರ ಮೇಲುದಂ ಸೆಳೆದು ಕುಸಿದು ಕೆಳಕ್ಕೆ ಎೞೆದು ಜಕ್ಕುಗೊಂಡು ತಕ್ಕೆಗೆ ತೋರವಾದ ಪೇರುರದ ಮೊಲೆಗಳೊಳಪೊಕ್ಕು: ಲೀಲಾವತಿ, ೩. ೨೦ ವ)

ಜಕ್ಕುಲಿಸು

ಮೋಹಗೊಳಿಸು (ಮುರಿದು ಸುತ್ತಿದ ಚಂಪಕಮಾಲೆ ಕಣ್ಗಳಂ ಜಕ್ಕುಲಿಸಿತ್ತು: ನೇಮಿನಾಪು, ೩. ೯೯); ಆವರಿಸು, ವ್ಯಾಪಿಸು (ಆಕೆಗಳ ಕಱಂಗಿದ ಕುಚ ಚೂಚುಕಂಗಳಿಂದೆಸೆದು ತೋಳ ಮೊದಲಿಂ ಜಕ್ಕುಲಿಸುವ ಪೆರ್ಮೊಲೆ: ಪಂಪರಾ, ೩. ೧೩೩ ವ); ಕಚಗುಳಿಯಿಡು; ಅಲ್ಲಾಡು (ಎತ್ತಿದ ಪೞಯಿಗೆ ಜಕ್ಕುಲಿಸುತ್ತಿರೆ ನಕ್ಕಪುದು ಗಗನಂ: ಆಚವರ್ಧ, ೮. ೩)

ಜಗ

ಜಗತ್ತು (ಜಗಮಂ ಮಾಡಿದ ಪದ್ಮಜಂ: ಪಂಪಭಾ, ೪. ೭೫)

ಜಗಚ್ಚಕ್ರ

ಭೂಮಂಡಲ (ಚಕ್ರಿಗೆ ಸುತ್ತಾಕ್ರಾಂತ ಸಮಸ್ತ ಜಗಚ್ಚಕ್ರಂ: ಕಾದಂಬ, ೧. ೯)

ಜಗಜ್ಜನ

ಜಗತ್ತಿನ ಜನ (ನೇತ್ರಾನಂದಕರಂ ಈ ಜಗಜ್ಜನಚೂಡಾಮಣಿ: ಮಲ್ಲಿನಾಪು, ೧೧. ೯೩)

ಜಗಜ್ಜನಕ

ಲೋಕದ ತಂದೆ ಜಗಜ್ಜನಕನೆಂಬುದು ಮೇದಿನಿ ಶಾಂತಿವರ್ಮನಂ: ಪುಷ್ಪದಂಪು, ೧. ೭೫)

ಜಗಜ್ಜೀವನ

ಜಗತ್ತನ್ನು ಬದುಕಿಸುವ (ನದನದೀಕುಳದೊಳ್ ಪರಿವರ್ಧಿಕುಂ ಜಗಜ್ಜೀವನಜೀವನಂ: ಜಗನ್ನಾವಿ, ೪. ೭೭)

ಜಗಜ್ಜೈತ್ರ

ಜಗತ್ತನ್ನು ಗೆಲ್ಲುವ (ಮಧುಮಿತ್ರ ಜಗಜ್ಜೈತ್ರಾಯುಧಗೃಹಮೆನೆ ವಿಕಚ ವಿಚಕಿಳಂ ಸೊಗಯಿಸುಗುಂ: ಚಂದ್ರಪ್ರಪು, ೭. ೫೦)

ಜಗತಿ

ಜಗಲಿ (ಎಸೆವ ಕಪ್ಪುರದ ಱೊಬ್ಬಿನುರ್ವಿದ ಜಗತಿಯೊಳ್ ಅಸುಕೆಯ ಪೊಸದಳಿರ ಪಾಸಿನೊಳ್: ಕರ್ಣನೇಮಿ, ೧೩. ೨೦ ವ); ಜಗತ್ತು (ವಸುಂಧರೆ ಕು ಮಹಿ ಜಗತಿ ವಿಶ್ವಂಭರೆ: ಅಭಿಧಾವ, ೧. ೫. ೧)
< previous1234567893233Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App