ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಝಂಕರಣ

ಝೇಂಕಾರ (ಸರಸಿಜವನಂಗಳಲರ್ವಿನಂ ಇರಲಾಱದೆ ಬೇಗಮೆಱಗುವಳಿನೀನಿವಹದ ಝಂಕರಣಕ್ಕೆ ಕಾಯ್ಪುಗೊಂಡು: ಆದಿಪು, ೧೨. ೫೧)

ಝಂಕಾರ

ದುಂಬಿಗಳ ಮೊರೆತ (ದರದಳಿತಾಂಭೋರುಹದಳಪರೀತ ಪಟ್ಟದ ನಿಬದ್ಧ ಝಂಕಾರೈಕಾಕ್ಷರ ದಿವ್ಯಮಂತ್ರದಿಂದಂ: ಮಲ್ಲಿನಾಪು, ೫. ೪)

ಝಣಝಣಾಯಮಾನ

ಝಣಝಣ ಎನ್ನುವ (ಆತ್ಮೀಯ ಘನಜಘನದ ನುಣ್ಪಿನೊಳ್ ನುಣ್ಪುಮೆಗೆತ್ತು ಝಣಝಣಾಯಮಾನ ಮಣಿಕಿಂಕಿಣೀವಿರಾಜಿತ: ಆದಿಪು, ೪. ೪೧ ವ)

ಝಣಂಬ

ಮೇಲುಹೊದಿಕೆ (ಇಂದ್ರಜಾಲಿಗರ ಪಾಪೆಗಳುಂ ಸೀರೆಗಳುಂ ಝಣಂಬಮುಮಂ ತೊಟ್ಟು ಶ್ಮಶಾನದೊಳುರಿವ ಕಿಚ್ಚಿನ ಪಕ್ಕದೆ ನಿಂದಿರ್ದಳ್: ವಡ್ಡಾರಾ, ಪು ೧೯, ಸಾ ೧೨)

ಝಂಪಾಣ

ಮುಸುಕು (ಬಾಸಣಿಸಿದ ಮದನನ ಬಾಣಾಸನದವೊಲೆಸೆವ ಚಾರುಝಂಪಾಣದೊಳು: ಪುಷ್ಪದಂಪು, ೫. ೨೦)

ಝಂಪಾಳ

ಮೇಲ್ಮುಸುಕು (ದಾಡಿಮೀಫಲಂಗಳ ಮೇಲೆ ಮುತ್ತಿ ಝಂಪಾಳಂಗಳಂ ಕವಿಯಲುಂ .. .. ಪೋಗೆವೋಗೆ: ಕಾದಂಬ, ೬. ೨೫ ವ)

ಝಲ್ಲರಿ

ಒಂದು ಚರ್ಮವಾದ್ಯ (ಆಗಳ್ ಕುರುಧ್ವಜಿನಿಯುಂ ಅನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳ್ ಅಂತ ಕಾಲಾಂತಕ ವಿಕಟಾಟ್ಟಹಾಸಂಗಳ್ ಎಂಬಂತೆ ಮೊೞಗೆ: ಪಂಪಭಾ, ೧೧. ೩೩ ವ); ಕಂಚಿನ ತಾಳ (ಪಟುಪಟಹ ತುಣವ ಭಂಭಾ ಮರ್ದಳೆ ಝಲ್ಲರಿ ಮುಕುಂದ ತಾಳ ಕಾಹಳ ಶಂಖ ವಂಶ ವೀಣಾಸ್ವರಂಗಳೆಸೆಯೆ: ವಡ್ಡಾರಾ, ಪು ೮೪, ಸಾ ೨೮); ಜರಡಿ (ಝಲ್ಲರಿವೋಲ್ ಝಲ್ಲೆನೆ ಸೂಸಿ ನಿರ್ಝರಂ ಬೀೞ್ತರ್ಪಿನಂ: ನೇಮಿನಾಪು, ೮. ೧೧)

ಝಲ್ಲಿಸು

ದ್ರವಿಸು (ಕಲ್ಲಲ್ತೇ ಶಶಿಕಾಂತಂ ಝಲ್ಲಿಸುವುದು ಚಂದ್ರಕಿರಣಮಂ ತಗಲೊಡಂ: ಅನುಭವ, ೯೦)

ಝಷ

ಮೀನು (ಚಳತ್ಕದಳಿಕಾಮಾಳಂ ಝಷಾನೀಕಂ ಅಚ್ಚರಿಯಂ ಬಾಹುಬಲೀಶ್ವರಂಗೆ ಪಡೆದತ್ತು ಆತ್ಮೀಯಸೈನ್ಯಾರ್ಣವಂ: ಆದಿಪು, ೧೪. ೯೧ ವ)

ಝಷಕೇತನ

ಮೀನಿನ ಗುರುತುಳ್ಳ ಧ್ವಜವುಳ್ಳವನು, ಮನ್ಮಥ (ಪಾರ್ವತಿಯ ನವಯೌವನಂ .. .. ಝಷಕೇತನ ನಿಕೇತನ ತೋರಣ ರತ್ನಸ್ತಂಭಗಳಂತೆ: ಗಿರಿಜಾಕ, ೪. ೧೨ ವ)

ಝಷಕೇತು

ಝಷಕೇತನ (ಸೀರ್ಪನಿಗಳ್.. .. ಅರರೆ ತುಫಾಕದಿಂ ನೆಗೆವ ಗುಂಡಿನವೋಲ್ ಝಷಕೇತುವೀರನಾ: ರಾಜಶೇವಿ, ೫. ೬೯)

ಝಳಂಬಂ

ಮೇಲು ಮುಸುಕು, ಹೊದಿಕೆ (ಬಣ್ಣದ ಸೀರೆ ಮೇಘವಂಣಿಗೆಯ ಝಳಂಬಂ ಎಂಬಿವು ಅಳವಟ್ಟಿರೆ .. .. ನಡೆತಂದಂ .. .. ಅಪೂರ್ವಚಿತ್ರಿಕಂ: ಮಲ್ಲಿನಾಪು, ೫. ೨೭)

ಝಾಳೆಯಂಗೊಳ್

ತೆಗೆದುಕೊ, ಕಿತ್ತುಕೊ (ಅರಸರ ಕಾಪಿನ ಪೊಲನಂ ಪೊಕ್ಕುವೆಂದು ಉಂಡಿಗೆಯೊತ್ತಿಕೊಳುತ್ತುಂ ಊೞಗವಾದೆಡೆಗಳೊಳ್ ಝಾಳೆಯಂಗೊಳುತ್ತುಂ: ಸುಕುಮಾಚ, ೭. ೩೫ ವ)

ಝಿಲ್ಲಿಕಾ

ಜೀರುಂಡೆ (ಚೀರೀ ಝಿಲ್ಲಿಕಾ ಭೃಂಗಾರೀ ಶಬ್ದಂ ಸಮಾನವಾಚ್ಯಂ: ಅಭಿಧಾವ, ೯. ೨೩)

ಝೆಂಕಟ

ವಾದ್ಯವಿಶೇಷ (ಕಂಕರಿಯ ಸಿವಿಱ ಪೆಂಪಿನ ಝೆಂಕಟ ಬೊಂಬುೞಯ .. .. ಉಲಿ ನೆಗೞ್ದು ಕರ್ಣಾಮೃತ ಸಮುದ್ರಘೂರ್ಣನಮಾಯ್ತೋ: ಪುಷ್ಪದಂಪು, ೧೨. ೨೭)

ಝೇಂಕರಿಸು

ಶಬ್ದ ಮಾಡು, ಆರ್ಭಟಿಸು (ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದಿರ್ದ ಎಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩); ಹೊಗಳು (ಶಂಕರನಾರಾಯಣನ ಕರಂ ಕಿಡುವುದು ಯುಗದ ಕಡೆಯೊಳ್ ಎಂದೆನುತುಂ ಝೇಂಕರಿಸಿ: ಸಮಯಪ, ೯. ೯)

ಝೋಂಪಿಸು

ತೂಕಡಿಸು, ಮೈಮರೆ (ಇರುಳೋರಂತಿರೆ ಕಾದಂಬರಿಯನೆ ನೋಡುತ್ತುಮಿರ್ದು ಝೋಂಪಿಸೆ ನಿದ್ರಾತುರನಾಗಿ ಪೞ್ಕೆ ಸಾರ್ವಂತಿರೆ ಸಾರ್ದಂ ಚಂದ್ರಂ ಅಪರವೇಲಾವನಮಂ; ಕಾದಂಸಂ, ೫. ೬೪);

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App