ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಠಕ್ಕವಿದ್ಯೆ

ಮೋಸದ ಸ್ವಭಾವ (ಠಕ್ಕವಿದ್ಯೆಯೊಳ್ತೊಡರದು ಕೂಡೆ ಪುಂಜಿಸಿದ ವಾಙ್ಮಯರತ್ನಚಯಂ ಜಿನೇಶನಾ: ಸಮಯಪ, ೨. ೨೧)

ಠಕ್ಕಸಮಯ

ಮಿಥ್ಯಾಧರ್ಮ (ಪಸರಿಸುವ ಠಕ್ಕಸಮಯದ ದೆಸೆವೋಗರ್ ಅದೆಂತುಂ ಆವ ತೆಱದಿಂ ಜೈನರ್: ಸಮಯಪ, ೬. ೭೫)

ಠಕ್ಕಿಕ್ಕು

ಮೋಸಗೊಳಿಸು (ಮಾಯಮನೆ ಬೀಸಿ ಪೆಱರನುಪಾಯದೆ ಠಕ್ಕಿಕ್ಕಿದೇವವಕಾರ್‍ಯದೊಳಿನಿಸುಂ ನೋಯದೆ: ಧರ್ಮಾಮೃ, ೧. ೯೫)

ಠಕ್ಕುಗಾರ್ತಿ

ಮೋಸಗಾತಿ (ಮತ್ತಮೊರ್ವಂ ಇದಿರೊಳೈತರ್ಪ ಠಕ್ಕುಗಾರ್ತಿಯಂ ಕರಸಂಜ್ಞೆಯಿಂ ಕೆಳೆಯಂಗೆ ತೋಱ: ರಾಜಶೇವಿ, ೧೧. ೧೫೪ ವ)

ಠಕ್ಕುಗೊಳ್

ಮೋಸಕ್ಕೊಳಗಾಗು, ಮರುಳಾಗು (ಮಾರಿದತ್ತಂ ಲಲಿತಾಕಾರರ ಧೀರರ ಬಂದ ಕುಮಾರರ ರೂಪಿಂಗೆ ಠಕ್ಕುಗೊಂಡಂತಿರ್ದಂ: ಯಶೋಧಚ, ೧. ೫೮)

ಠಕ್ಕುಮತ

ಮೋಸದ ಮತ (ಕುಲಹೀನಂಗೊಂದು ತೆಱಂ ಕುಲಜಂಗೊಂದು ತೆಱಂ .. .. ಪೇೞ್ವುದು ನಿರ್ಮಲಧರ್ಮಮದಲ್ತು ಠಕ್ಕುಮತಂ: ಸಮಯಪ, ೩. ೮)

ಠಕ್ಕುವೀೞ್

ಮಂಕುಬಡಿ, ಮೋಸಕ್ಕೊಳಗಾಗು (ಒಡನಾಡಿಗಳೊಳ್ ನುಡಿಯಲ್ಕುಂ ಒಲ್ಲಳ್ ಆ ಸೌಂದರಿ ಠಕ್ಕುವಿೞ್ದ ತೆಱದಿನಿರ್ದಳ್: ಚಂದ್ರಪ್ರಪು, ೫. ೧೨೩)

ಠಣತ್ಕಾರ

ಠಣ್ ಎಂಬ ಗಂಟೆಯ ಶಬ್ದ (ಕಿವಿ ಶಬ್ದಂಗಿಡೆ ಘಂಟಿಕಾ ಘನಠಣತ್ಕಾರಂಗಳಿಂದೆ: ಚಂದ್ರಪ್ರಪು, ೬. ೧೪)

ಠವಣಿಸು

ಸೇರಿಸು (ಕವಿಮಾರ್ಗದೊಳ್ ಒಖ್ಖಾಣಿಪ ಠವಣಿಪ ಕಮ್ಮೈಸುವ ಎಡೆಯೊಳ್ ವಖ್ಖಾಣಿಸಲುಂ ಠವಣಿಸಲುಂ ಕಮ್ಮೈಸಲುಂ ಇವನಂತಾರ್ ಬಲ್ಲರ್ ಎನಿಸಿದಂ ಕವಿರತ್ನಂ: ಅಜಿತಪು, ೧. ೮೨)

ಠವಣೆ

ವೀಣಾವಾದನದ ಒಂದು ಕ್ರಮ (ನುಡಿಸಿದ ಆಕಾರಮಂ ಪೊಯ್ದು ಠವಣೆಯೊಳ್ ಪವಣಱದು .. .. ನಾನಾ ಶಬ್ದಂಗಳಂ ಬಾರಿಸಿ: ಧರ್ಮಪ, ೨. ೨೩ ವ)

ಠಾಣಾಂತರ

ತಾಣಾಂತರ, ಪಾಳೆಯ (ತಂತಮ್ಮ ಠಾಣಾಂತರಂಗಳೊಳಿರ್ದಂಗಜತಂತ್ರದಂತೆಸೆವಿನಂ ಚೆಲ್ವಾದುವಿಮ್ಮಾವುಗಳ್: ಆದಿಪು, ೧೧. ೯೬)

ಠಾಯೆ

ಆಲಾಪನೆಯಲ್ಲಿನ ಮಧ್ಯಲಯ ಗಮಕಂ ತಳ್ತಿರೆ ಠಾಯೆ ಮಿಂಚಿರೆ ಚಮತ್ಕಾರಂ ಕರಂ ಪೊಣ್ಮೆ .. .. ಬಾಜಿಸಿದಳ್ .. .. ವೀಣೆಯಂ: ರಾಜಶೇವಿ, ೧೦. ೩೨)

ಠಾವು

ಸ್ಥಳ (ಮಾವಿನ ಹೂವಿನ ಕಾವಿನ ಠಾವಿನ ಮೊದಲಿಂದೆ ತೀವಿದಳಿಗಳ ಬಳಗಂ: ಗಿರಿಜಾಕ, ೨. ೩೭)

ಠೀವಿ

ಗತ್ತು (ಹಾವದ ಭಾವದ ಮುಱುಕದ ಠೀವಿಯ ಗರಗರಿಕೆವಡೆದ ಚೆನ್ನೆಯರಂ ತಂದಾ ವಿಭುಗೆ ತೋಱೆ: ಪುಣ್ಯಾಸ್ರ: ೪. ೪೮)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App