ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಡವಕೆಯ ಪರಿಚಾರಿಕೆ

ಪೀಕದಾನಿ ಅಥವಾ ಕಾಳಾಂಜಿ ನೀಡುವ ಸೇವಕಿ (ನೂಱೆಂಟುಂ ಕರಣಮುಮಂ ಅವಳ ಡವಕೆಯ ಪರಿಚಾರಿಕೆಯಱಗುಂ ಆಕೆಗವು ತೊಡರ್ವೆಡೆಯೇ: ಆದಿಪು, ೯. ೨೯)

ಡವಕೆವಿಡಿ

ಪೀಕದಾನಿಯನ್ನು ಒಡ್ಡು (ಲೋಕಂ ಪೊೞ್ವುದು ಕನಕಾಬ್ಜಾಕಾರದ ಡವಕೆವಿಡಿದ ಸುರಸೌಂದರಿಯಂ : ಆದಿಪು, ೭. ೭)

ಡಸಿಕು

ವಕ್ರ ನಡತೆಯವನು (ಕಸವಿಂಗಂ ಕಳುಚಿಂಗಂ ಡಸಿಕಿಂಗಂ ದೂರ್ತವಡೆಗಂ ಅತಿಚಪಳರ್ಗಂ ಪುಸಿರ್ವ್ಘಂ ಸಿತಗರ್ಗಂ ವಸುಧೇಶ್ವರ ಕೇಳ ಕುಡುವನುರ್ಕಿ ಕುಮಾರಂ: ಧರ್ಮಾಮೃ, ೨. ೪೨)

ಡಾಕಿನಿ

ರಕ್ಕಸಿ (ನೀನುಂ ದೇವಾ ಸುರಯುದ್ಧಕ್ಕೆ ಕರಗಂಬೊತ್ತ ಡಾವರಡಾಕಿನಿಯೆನಿಸಿದ ಪಾಂಚಾಲಿಯುಂ ಬುದ್ಧಿಮತಿಯೆಂಬ ಗಾಳುದೊೞ್ತುಂ ಇಂತೀ ಮೂವರುಂ: ಗದಾಯು, ೨. ೮ ವ);

ಡಾಣೆ

ದೊಣ್ಣೆ (ಡಾಣೆಯೊಳ್ ಬೀಳೆ ಬಡಿವೆನೆಂದಾಜ್ಞೆಯಂ ಮಾಡಿದಂ: ಧರ್ಮಪ, ೫. ೧೦ ವ); ಒಂದು ಆಯುಧ, ಗದೆ (ಬೀಸುವ ಡಾಣೆಗೆ ತಲೆಯೊಡ್ಡುವಂತಿರಲೊಡ್ಡಿದನಲ್ತೆ: ಪಾರ್ಶ್ವನಾಪು, ೩. ೧೧೩); ರಕ್ಕಸಿಯ ಕತ್ತಿ (ಡಾಣೆಯೆಂದು ರಕ್ಕಸಿಯ ಕತ್ತಿಗೆ: ಶಬ್ದಮದ, ಪ್ರಯೋಗಸಾರ, ೯೨)

ಡಾಮರ

ಹಿಂಸೆ, ದಾಳಿ (ಆ ಮಾಧವೀಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂಬುಗುವಂತೆ ಪೊಕ್ಕು: ಪಂಪಭಾ, ೫. ೬ ವ)

ಡಾವರ

ಪೀಡೆ, ಗಲಭೆ (ಇಂಚೆಯ ಪಸವಿನ ಬಱದ ಕಳಂಚಿನ ಡಾವರದ ಬಾಧೆಯಿಲ್ಲದ ಪದದೊಳ್ ಮುಂಚದೆ ಪಿಂಚದೆ ಬಳೆದು ವಿರಿಂಚಿಯ ಕೆಯ್ಪಿಡಿವೊಲಾದುವಾ ನಾಡ ಊರ್ಗಳ್: ಪಂಪಭಾ, ೮. ೫೧); ಬಾಯಾರಿಕೆ (ಪುಂಡರೀಕ ಭೋಂಕನೆ ನಿನಗೀಗಳ್ ಇಂದ್ರಿಯದ ಡಾವರವೆತ್ತಣಿನೆತ್ತ ಬಂದುದೋ: ಕಾದಂಸಂ, ೪. ೨೦)

ಡಾವರಿಗ

ಸೂರೆಗಾರ (ಮೋಹಮೆಂಬ ಅಱಕೆಯ ಸಂದ ಡಾವರಿಗನುಂ ಪಗೆ ತನ್ನೊಳಗಿರ್ದೊಡೆ ಎಂತುಂ ಏತೆಱದೊಳಂ ಒಳ್ಳಿಕೆಯ್ಗುಮೇ: ಜೀವಸಂ, ೯. ೧೬):

ಡಾಹ

[ದಾಹ] ಸುಡುವಿಕೆ (ಕಿರ್ಚಿನಂತೆ ಅಡಕಮಂ ತೋಱ ನಂಬಿಸದೆ ದಾೞಯಂತೆ ಡಾಹಮಂ ಮಾಡಿ ಕಿಡಿಸದೆ: ಧರ್ಮಾಮೃ, ೫. ೬೪ ವ)

ಡಾಳ

ಕಾಂತಿ (ತೊಳಗುವ ಮುತ್ತಿನೋಲೆಗಳ ಬೆಳ್ವೆಳಗಿನ ಸುಲಿಪಲ್ಲ ಮಿಂಚಿನಿಂ ಪೊಳೆವಲರ್ಗಣ್ಣ ನುಣ್ ಕದಿರ್ಗಳಿಂ ತಿಸರಂಗಳ ನೀಳ್ದ ಡಾಳದಿಂ .. .. ಮಿಗೆ ಪೆರ್ಮೆವೆತ್ತು ಕಣ್ಗೊಳಿಸಿದಳ್: ಕಬ್ಬಿಗಕಾ, ೬೪); ಧೂರ್ತ (ಡಾಳಂಗೆ ಅಪ್ಪಯಿಸಿದುದು ಬಿಡಾಳಕ್ಕಂ ಪಾಲ ಕಾಪನಿತ್ತವೊಳಯ್ತಂದು ಈ ಲೋಕಮುಲಿಯೆ: ಪಾರ್ಶ್ವನಾಪು, ೩. ೧೧೨)

ಡಾಳಿಸು

ಚಾಮರ ಬೀಸು (ಅಂಗಜನೃಪಂಗೆ ಬನವೆಂಬ ಅಂಗನೆ ಡಾಳಿಸುವ ಚಾರುಚಾಮರಮದೆನಲ್: ಉದ್ಭಟಕಾ, ೯. ೧೬)

ಡಾಳೆ

ಗಯ್ಯಾಳಿ (ಮೆಯ್ಯನೆ ಮಾಱುವಾಕೆ ಭವಮಂ ಪೇೞ್ಮಾಱಳೆ ಸಂತೆಯೊಳ್ ಧನಕಾನಾಱನಿವಳ್ಗೆ ದೈವವಱಗಿನ್ನೀ ಸೂಳೆಯಂ ಡಾಳೆಯಂ: ಲೀಲಾವತಿ, ೨. ೧೦೩); ಸುಂದರಿ (ಅಸಮಶರಂ ನಿಡುನನೆಯಂಬಿಂ ಕೆಡೆಕೆಡೆಕೆಡೆ ಎದು ಎಚ್ಚಾರ್ದು ಕೆಡಪಿದಂ ಢಾಳೆಯರಂ: ನೇಮಿನಾಪು, ೪. ೧೪೭)

ಡಾಳೆವೆಂಡತಿ

ಗಯ್ಯಾಳಿ ಹೆಣ್ಣು (ತೊಡಿಗೆ ಸುಸರ ಹಾರದ ಮುತ್ತಿನಂತೆ ಸರದೊಳಳವಡುವ ಡಾಳೆವೆಂಡತಿಯಂತೆ ಕೈಸನ್ನೆಯಱಯದ ಜಾತಿಜಾಯಿಲಂಗಳಂ: ಅನಂತಪು, ೨. ೩೦ ವ)

ಡಿಂಡಿಮ

ಢಕ್ಕೆ ಎಂಬ ಒಂದು ಚರ್ಮವಾದ್ಯ (ಡಿಂಡಿಮರವದೊಳ್ ವನವೇತಂಡಮಂ ಎಚ್ಚರಿಸುವಂತಿರ್ಪವೋಲ್ ಸೊಗಯಿಸುಗುಂ .. .. ಭ್ರಮರ ಮಧುರ ಮಂದ್ರಸ್ವಾನಂ: ಕಾದಂಬ, ೧. ೧೨೪)

ಡಿಂಡೀರ

ನೊರೆ (ಡಿಂಡೀರಂ ಆ ಪಾಂಡುಲಸದ್ಭಸ್ಮಂ ಪ್ರವಾಳೋತ್ಕರಂ ರುಣಜಟಾಮಂಡಲಂ: ಶಬರಶಂ, ೧. ೩೦)

ಡಿಂಡೀರಪಿಂಡ

ನೊರೆಯ ಮುದ್ದೆ, ರಾಶಿ (ತರತ್ ಡಿಂಡೀರಪಿಂಡ ಪ್ರಭಾಸ್ಪದಮಂ ಕೌತುಕದಿಂದೆ ಚಕ್ರಪತಿ ತೀರೋಪಾಂತದೊಳ್ ನಿಂದು ನೋಡಿದಂ: ಅಜಿತಪು, ೯. ೧೯)

ಡಿಳ್ಳವಾಗು

ದುರ್ಬಲವಾಗು (ತನು ಡಿಳ್ಳಮಾಗೆ ಮಧುಪಾನ ವಿನೋದದಿನಾದ ಸೋಂಖು ಚೆಲ್ವಿಡಿದಿರೆ: ಸೂಕ್ತಿಸುಧಾ, ೧೩. ೩)

ಡುಂಡುಕ

ತಿಗಣೆ (ನಿನೊಳಕೊಂಡಂದೆನಗಂ ಆ ವಿಧಿಯಕ್ಕುಂ ಎಂದು ಮಂದವಿಸರ್ಪಿಣಿ ಪೇೞ್ವುದುಂ ಡುಂಡುಕನಿಂತೆಂದುದು: ಪಂಚತಂತ್ರ, ೧೯೯ ವ)

ಡುಂಡುಚಿ

ಒಂದು ಚರ್ಮವಾದ್ಯ, ಡಮರು (ಪಂಡಿತರುಂ .. .. ಕೇಳತಕ್ಕ ಕೃತಿಯಂ ಕ್ಷಿತಿಯೊಳ್ ಕಂಡರ್ ಕೇಳ್ವೊಡೆ ಗೊರವರ ಡುಂಡುಚಿಯೆ: ಧರ್ಮಮಧು, ೧. ೫೭)

ಡುಂಡುಭ

ಇರ್ತಲೆಯ ಹಾವು (ಕೊರ್ಬಿಯಾಡುವ ಡುಂಡುಭಂಗಳಂ ಕಂಡು ಆನುಂ ನಿಮ್ಮೊಡನೆ ಇರ್ದಪೆಂ ಎಂದೊಡೆ: ಪಂಚತಂತ್ರ, ೧೯೫ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App