ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಡುಱುಕೆನ್

ಗುಟುರು ಹಾಕು (ಪಂದಿ ಡುರುಕೆಂದೊಡೆ ಮಹಾವನಕರಿಯಂ ವಿದಾರಿಸುವ ಸಿಂಹಂ: ಗಿರಿಜಾಕ, ೧. ೨೯)

ಡೆಂಕಣಿ

ಯುದ್ಧದಲ್ಲಿ ಕಲ್ಲು ಎಸೆಯುವ ಒಂದು ಯಂತ್ರ (ಬೆದಱದತ್ತು ಬಿಡೆ ಭೈರವಡೆಂಕಣಿಯಿಂದಂ ಚಿಮ್ಮುತೆ ಡೆಂಕಣಿಯಿಂದಂ ಪಾಯ್ವ ಕಲ್ಗೆ ಭೋಂಕೆನಲಾಗಳ್: ಪಾರ್ಶ್ವನಾಪು, ೩. ೧೩೭)

ಡೆಂಕೆ

ಜಂತೆ (ಢತ್ವಕ್ಕೆ ಡತ್ವ ಪ್ರಯೋಗಂ: ಷಂಡಂ

ಡೆಳ್ಳೆ

ಬಿದಿರಿನ ಬುಟ್ಟಿ (ಕಳಶಂ ಶುಕ್ತಿಕೆ ವರ್ತುಲಂ ಪಟಲಕಂ ವೈಸ್ತಾಳಿ ನೀರಾಜನಂ ವಿಳಸತ್ ಕುಂಡಿಕೆ ಡೆಳ್ಳೆ ಎಂಬೆಡೆಗಳೊಳ್: ಅನಂತಪು, ೧೦. ೪೮)

ಡೊಂಕಣಿ

ಸಬಳ (ಪರಿಗೆಗಳಲ್ಲಿ ಕೀಲಿಸಿದ ಗೆಜ್ಜೆಯ ಬಚ್ಚಣೆವೆತ್ತ ಬಿಲ್ಗಳಚ್ಚರಿಗೆಡೆಯಾದ ಕನ್ನಡಿಯ ಕೂರ್ಪಿನ ಡೊಂಕಣಿಯಲ್ಲಿ ಜುಂಜಿನಂತಿರೆ ಮಿಳಿರ್ದಾಡುತಿರ್ಪ: ಕಬ್ಬಿಗಕಾ, ೨೦೪)

ಡೊಕ್ಕನೆ

ಡೊಕ್ ಎಂದು (ಡೊಕ್ಕನೆ ಸುರಿಗೆಯೊಳ್ ಉರಮಂ ಬಿಕ್ಕನೆ ಬಿರಿಯಿಱದು ಬರಿಯಗಲನೊತ್ತಿ ಮನಂ ಕೊಕ್ಕರಿಸದೆ ಬೆಲಗಸೆಯಿಂ ಅಳುರ್ಕೆಯೆ ಮೊಗೆಮೊಗೆದು ನೆತ್ತರಂ: ಪಂಪಭಾ, ೧೨. ೧೫೩)

ಡೊಕ್ಕರ

ಹೊಡೆತ, ಮಲ್ಲಯುದ್ಧದ ಒಂದು ವರಸೆ (ಶಾಖಾಚರಬಂಧಂ ಆಯತಿಕೆಬಂಧಂ ಡೊಕ್ಕರಂ ಪಟ್ಟಿಸಂವಳಯಾವೇಷ್ಟನಂ ಆಹತಂ .. .. ಚಮತ್ಕರಿಸೆ ನಾನಾ ಕೌಶಲಂದೋಱದರ್: ಶಬರಶಂ, ೪. ೭೫)

ಡೊಕ್ಕರಂಗೊಳ್

ಮಲ್ಲಯುದ್ಧದಲ್ಲಿ ಡೊಕ್ಕರವೆಂಬ ಪಟ್ಟು ಹಾಕು (ಅಂತು ಎಱಗಿದೊಡೆ ಕೋಡ ಕೆಯ್ದ ಕಾಲೆಡೆಗಳೊಳ್ ಬಿಣ್ಪುಮಂ ಪೊಳೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದ ಅತ್ತ ಪನ್ನೆರಡು ಯೋಜನಂಬರಂ ಒತ್ತುವುದುಂ: ಪಂಪಭಾ, ೧೧. ೭೪ ವ) [ಕೊರಳ ಹಿಂಭಾಗವನ್ನು ಒಂದು ಭುಜದ ಕಂಕುಳಲ್ಲಿ ಇರಿಕಿಸಿಕೊಂಡು, ಗಲ್ಲವನ್ನು ಅಂಗೈಯಲ್ಲಿ ಪೀಡಿಸುತ್ತ ಇನ್ನೊಂದು ಕೈಯಿಂದ ಕೀಲುಗಳನ್ನು ಹಿಡಿದುಕೊಂಡು, ಎರಡು ತೊಡೆಗಳಿಂದ ಹೊಟ್ಟೆಯನ್ನು ಬಲವಾಗಿ ಪೀಡಿಸುತ್ತ ಇರುವುದಕ್ಕೆ ಡೊಕ್ಕರವೆಂದು ಹೆಸರು ದೀಪಿಕೆ]

ಡೊಕ್ಕರಿ

ಜೀರ್ಕೊಳವೆ (ಇಂದುಶಿಲೆಯ ಡೊಕ್ಕರಿಗಳಂ ಆಗಳೆ ಕೊಂಡು ತಾನುಮಾ ಮಾನಿನಿಯುಂ ಧರಣೀವಲ್ಲಭ ಚಕ್ರಿಗಿಂದು ಜಳಕೇಳೀಸ್ಥಾನಂ ಆನಾದೆನೆಂಬ ಉರು ಸಂತೋಷದೆ ತತ್ಸರೋವರಮದುಂ ಮೈವೆರ್ಚುತಿರ್ದತ್ತು; ಶಾಂತೀಶ್ವಪು, ೧೦. ೧೬೦ ಮತ್ತು ೧೬೧)

ಡೊಕ್ಕರಿಗೊಳ್

ಡೊಕ್ಕರಂಗೊಳ್ (ಭುವನೈಕಮಲ್ಲಂ ಮೋಹಮಲ್ಲಂ ನೀನೆಕ್ಕತುಳದಿಂದ ಅಕ್ಕುಳಿಸದೆ ಡೊಕ್ಕರಿಗೊಂಡು ನೆಟ್ಟನೆ ಮುಱದಿಕ್ಕಿ ಗೆಲ್ದ ವಿದ್ಯಾಧರ ಕಳಂ ಇದು: ಪಾರ್ಶ್ವನಾಪು, ೧೬. ೧೦ ವ)

ಡೊಕ್ಕರಿಸು

ಪೆಟ್ಟು ಕೊಡು, ಅಪ್ಪಳಿಸು (ಪರಿದೆಯ್ದಿ ಬಿನ್ನಣದಿ ಡೊಕ್ಕರಿಸುವ ಡೊಕ್ಕರಿಸಲ್ ಎತ್ತಿ ಬಿಸುಡುವ: ತ್ರಿಷಷ್ಟಿಪು, ೧೭. ೧೪)

ಡೊಣೆ

ದೊಣೆ, ಬೆಟ್ಟದ ಮೇಲಣ ಸ್ವಾಭಾವಿಕ ಹೊಂಡ (ಮುಗಿಲ ನೀರಂ ನಚ್ಚಿ ಡೊಣೆಯ ನೀರಂ ತುಳುಂಕಿದ ಕೋಡಗದಂದಂ ನಿನಗಕ್ಕುಂ: ಪಂಚತಂತ್ರ, ೧೨೦ ವ); ಬತ್ತಳಿಕೆ (ಡೊಣೆಯಿಂ ಕಣೆಯಂ ತೆಗೆತೆಗೆದು ಅಣಿಯಂಮೆನೆ ಪೂಡಿ ನೋಡಿ: ರಾಜಶೇವಿ, ೬. ೪೫)

ಡೊಣೆವು

ಗಾಯದ ಡೊಗರು (ಅಂಬಿನ ಬಂಬಲೊಳಂ ಜೋಡಾಗಿ ಕೋಡನೂಱ ಕೆಡೆದ ಗಜವ್ರಜಂಗಳ ಡೊಣೆವುಗಳಿಂದ ಒಱೆತು ಪರಿವ ನೆತ್ತರ ಕಡಲ್ಗಳೊಳ್ ಮಿಳಿರ್ವ: ಪಂಪಭಾ, ೧೦. ೧೧೬ ವ)

ಡೊಂಬ

ದೊಂಬ (ಪಂದೆಯ ಮಾತಿನಂತೆ ಡೊಂಬರ ತೋಂಟಿಯಂತೆ ದೂರದ ಬೆಟ್ಟದಂತೆ: ಧರ್ಮಾಮೃ, ೮. ೫೭ ವ)

ಡೊಂಬ ದಡ್ಡಿಸ

ಡೊಂಬರ ಡೋಲು (ಡೊಂಬ ದಡ್ಡಿಸದ ಪೆಱವು ದೆಯ್ವಂಗಳವೇಂ ಕುಡುಗುಮೆ ಸುಖಮಂ: ಸಮಯಪ, ೮. ೨೩೮)

ಡೊಂಬರ ಕೋಡಗ

ಕೊಲ್ಲಟಿಗರು ಆಟಕ್ಕಾಗಿ ಬಳಸುವ ಕೋತಿ, ಇತರರು ಹೇಳಿದಂತೆ ಕೇಳುವವನು (ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ: ಪಂಪಭಾ, ೬. ೭೨ ವ)

ಡೊಂಬವಱೆ

ದೊಂಬರ ಒಂದು ಚರ್ಮವಾದ್ಯ (ದಡ್ಡಸಮೆಂದು ಡೊಂಬವಱೆ: ಶಬ್ದಮದ, ಪ್ರಸಾ ೧೧೪)

ಡೊಂಬವಿದ್ದೆ

ದೊಂಬರ ವಿದ್ಯೆ, ಯಕ್ಷಿಣಿ;, ವಂಚನೆ (ಮೀಂ ಆವೆ ಪಂದಿ ಎಂದು ಎನಿತಾನುಂ ತೆಱನಾಗಿ ಡೊಂಬವಿದ್ಯೆಯನಾಡಲ್ ನೀನಱವೆ: ಪಂಪಭಾ, ೭. ೫೭)

ಡೊಂಬಾಟ

ದೊಂಬರಾಟ, ಸಲ್ಲದ ಕಾರ್ಯ (ವಿಡಂಬನ ಡೊಂಬಾಟಕ್ಕಂ ಸಮ್ಯಕ್ತ್ವಚೂಡಾಮಣಿಯ ಧೈರ್‍ಯಕ್ಕುಂ ಮನದೊಳಾದ ಜೀವದಯೆಗಂ ವಿಸ್ಮಯಂಬಟ್ಟು:, ಧರ್ಮಾಮೃ, ೧೨. ೩೦ ವ)

ಡೊಂಬಿತಿ

ಡೊಂಬರ ಹೆಣ್ಣು; ವಂಚಕಿ (ಡೊಂಬಿತಿ ಜೋಡೆ ಸೋಲದಿಂ ಬಡ್ಡಿಸಿದಪ್ಪಳ್ ಎಂದೆ ನೆಱೆ ದೂರುವರೆನ್ನಂ: ಧರ್ಮಾಮೃ, ೧೦. ೧೩೪)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App