ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567897273Next >

ತಕ್ಕಂ

ಉಳ್ಳವನು (ಇಳೇಯಂ ಘಾತಿಸಿ ತಕ್ಕರಂ ಕವರ್ದುಕೊಂಡು ಅರ್ಥಮಂ ಪೂೞ್ದು ನೋಡುತ್ತುಂ ಉಗ್ರಲೋಭವಶದಿಂ: ಆದಿಪು, ೨. ೧೫); ದಾನಾರ್ಹ (ಜಿನಪೂಜೋತ್ಸವಮಂ ಮಹಾಮಹಮುಮಂ ತಾಂ ಮಾಡಿ ಸಲ್ವನ್ನೆಗಂ ಧನಮಂ ತಕ್ಕವರ್ಗೀಯವೇೞ್ಪುದು: ಆದಿಪು, ೧೫. ೬); ಗುಣಶಾಲಿ (ಕಲಿಯನೆ ಪಂದೆ ಮಾೞ್ಪ ಒಳ್ಗಲಿಯಂ ಕಡುವಂದೆ ಮಾೞ್ಪ ತಕ್ಕನಂ ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆಱೆ ತಕ್ಕನೆ ಮಾೞ್ಪ: ಪಂಪಭಾ, ೧೨. ೯೨); ಯೋಗ್ಯನಾದ (ಒಕ್ಕಲಿಗನನೋಲಗಿಸಿದ ತಕ್ಕಂ ಮೊದಲಾಗಿ ಮುಡಿದ ಪೂವಂ ಮುಡಿವರ್: ಸಮಯಪ, ೮. ೧೫)

ತಕ್ಕರ್

ವಂಚಕರು, ಠಕ್ಕರು (ಪೆಣನಂ ಎತ್ತಲ್ ಸಲ್ಲೆಂದು ಆಪತ್ತುವಡಿಸಿ ಪುತ್ರನಂ ಈ ಪೊನ್ನಂ ಸಂಗತಿಗುಡುವೆವೆಂಬರ್ ತಕ್ಕರ್: ಸಮಯಪ, ೧೪. ೧೫೫)

ತಕ್ಕೞ

ಯೋಗ್ಯತೆ ಕುಂದು (ತಕ್ಕೞದೆನಗೆ ಸಪತ್ನಿಯರಿಕ್ಕುಗೂೞಂಗೆ ಬಯಸಿ ಪಾರ್ದಿರ್ಪ ವಿಷಾದಕ್ಕೆ ಗುರಿಯಪ್ಪ ದುರ್ಯಶಮಕ್ಕುಂ: ಪಂಪರಾ, ೬. ೯೧); ಧೈರ್ಯಗುಂದು (ಇಭರಿಪುವಂ ತಕ್ಕೞವಿನೆಗಂ ನೊಂದು ನಿಂದು ಕೊಂದುದಿಭೇಂದ್ರಂ: ಶಾಂತಿಪು, ೨. ೧೦೬)

ತಕ್ಕಿಸು

ಬಯಸು (ತಕ್ಕಿಸಲೆ ತಕ್ಕ ಶೋಭೆಗೆ ಪಕ್ಕಾದೊಡಂ: ಲೀಲಾವತಿ, ೮. ೪೦)

ತಕ್ಕು

ಧೈರ್ಯ; ಸಾಮರ್ಥ್ಯ (ದರ್ಪಿತದುರಿತಮಲ್ಲನುಮಂ ಉಡಿವ ತಕ್ಕಿನಿಂ ಸಭೆಗೆ ನಡೆದಂ: ಆದಿಪು, ೧೪. ೧೩೪); ಶ್ರೇಷ್ಠ (ಮದಮಂ ಮುಕ್ಕುಳಿಸಿರ್ದ ಇಭಂಗಳಂ ಉದಗ್ರಾಶ್ವಂಗಳಂ ತಕ್ಕಿನಗ್ಗದ ಬಾಡಂಗಳಂ ಆಯ್ದು ಕೊಟ್ಟು: ಪಂಪಭಾ, ೨. ೫೩); ಆಧಿಕ್ಯ, ಹೆಚ್ಚಿಕೆ (ಎರಡುಂ ಬಲಂ ಎನ್ನೆ ನೋಡೆ ತಕ್ಕಿನ ಎನ್ನ ಅದಟುಮಂ ಎನ್ನ ವೀರಮುಮಂ ಆಜಿಯೊಳ್ ಎನ್ನರಸಂಗೆ ತೋಱುವೆಂ: ಪಂಪಭಾ ಪರಿಷತ್ತು, ೧೦. ೪೧)

ತಕ್ಕುಗುಡು

ಬೆಂಬಲ ಕೊಡು (ಮುಗುಳ್ನಗೆಯ ಮುಗುಳ್ವೆಳಗಿಂಗೆ ತಕ್ಕುಗುಡುವಂತೆಯುಂ: ಅನಂತಪು, ೮. ೭ ವ)

ತಕ್ಕುಗೆಡು

ಧೈರ್ಯಗೆಡು (ಇಂತು ತಕ್ಕುಗೆಡದೆ ಮಿಕ್ಕು ಪೊಕ್ಕು ಪೊಣರ್ವ ಸಗರ್ವಗಂಧರ್ವವಾಹಕಸಮೂಹದ: ರಾಜಶೇವಿ, ೬. ೬೫ ವ)

ತಕ್ಕುಗೊಡು

ಠಕ್ಕುಗೊಡು, ವಂಚಿಸು (ಚಿಂತಾಗತಿಯುಂ ತನ್ನ ಪೆಸರಂ ನನ್ನಿಮಾಡಿ ತರುಣಿಗೆ ತಕ್ಕುಗೊಟ್ಟು ಪೆಱಗೆ ಪಾಱ ಪೋಗಿ: ನೇಮಿನಾಪು, ೩. ೧೮ ವ)

ತಕ್ಕುದೆ

ಯೋಗ್ಯವಾದುದೇ (ಮಧ್ಯಸ್ಥಂಗಳಾಗಿರ್ದುವರ್ಕಲೆಯಲ್ ತಕ್ಕುದೆ ಕೆನ್ನಂ ಆ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ: ಪಂಪಭಾ, ೪. ೭೪)

ತಕ್ಕುಮೆ

ಯೋಗ್ಯತೆ (ಮಿಂಡನ ತಕ್ಕುಮೆಯುಮೊಪ್ಪಲಾಱವು ಜಗದೊಳ್: ಧರ್ಮಾಮೃ, ೭. ೩೦)

ತಕ್ಕೂರ್ಮೆ

(ತಕ್ಕು+ಊರ್ಮೆ] ಅಧಿಕ ಯೋಗ್ಯತೆ (ಈ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಂ ಅರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆಂ: ಪಂಪಭಾ, ೧೩. ೨೮ ವ)

ತಕ್ಕೆಗೊಳ್

ಹತ್ತಿರ ಸೆಳೆದುಕೊ (ಮುಳಿದ ವಿಯುಕ್ತವಲ್ಲಭಜನಂ ತಳುವಿಲ್ಲದೆ ತಕ್ಕೆಗೊಂಡುದು ಅಸ್ಖಳಿತ ಕೃಷೀಕುತೂಹಳಜನಂ ಮರವಟ್ಟರುತಿರ್ದುದು .. .. ಏನಳವಿಗಳುಂಬಮೋ ಪುದಿದ ಮಾಗಿಯ ಶೀತವಿಜೃಂಭಪಾತನಂ: ಶಾಂತೀಶ್ವಪು, ೧೨. ೮೬)

ತಕ್ಕೆವರ್

ಹತ್ತಿರ ಬರು (ಅಭ್ಯಾಸನಿಮಿತ್ತದಿಂದಿರದೆ ಬರ್ಕುಮೆನುತ್ತಂ ತಕ್ಕೆವಂದು: ಕುಸುಮಾಕಾ, ೧೧. ೧೩೯)

ತಕ್ರ

ಮಜ್ಜಿಗೆ (ಕಡೆಗೋಲ ಪೊಯ್ಲಿನಿಂದಂ ಸಿಡಿದು ಶರೀರದೊಳೆ ತುಱುಗೆ ತಕ್ರಕಣಂಗಳ್: ಲೀಲಾವತಿ, ೫. ೧೧೦)

ತಕ್ಷ

ಬಡಗಿ, ರಥಕಾರ (ಭದ್ರಮುಖನೆಂಬ ತಕ್ಷನಿಂದಂ .. .. ಪದಿನೇಣ್ಛಾಸಿರ್ವರ್ ಮ್ಲೇಚ್ಛರಾಜರಿಂದಂ ನೆಱೆದೈಶ್ವರ್ಯಂ: ಶಾಂತಿಪು, ೧೦. ೮೪ ವ)

ತಕ್ಷಕಪತಿ

ಮಹಾ ಶಿಲ್ಪಿ (ಭದ್ರಮುಖನೆಂಬ ತಕ್ಷಕಪತಿಯುಂ .. .. ಆತ್ಮೀಯ ಸಾಮ್ರಾಜ್ಯಪರಿಚ್ಛೇದಮಾಗೆ: ಆದಿಪು, ೧೫. ೩ ವ)

ತಕ್ಷಕರತ್ನ

[ಜೈನ] ಜೀವರತ್ನಗಳಲ್ಲಿ ಒಂದಾದ ಸ್ಥಪತಿ, ವಾಸ್ತುಶಿಲ್ಪಿ (ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)

ತಂಗದಿರ್ಗಲ್

ಚಂದ್ರಕಾಂತಶಿಲೆ (ತಂಗದಿರ್ಗಲ್ಲ ಗಹ್ವರದ ಚೆಂದಳಿರ್ವಾಸಿನೊಳ್ ಅತ್ತಂ ಇತ್ತ ಚೆವಿಂಗೆಡೆಯಾಗಿ ಸೂಸಿದರಲಂ: ಶಬರಶಂ, ೧. ೫೦)

ತಗಪು

ಸಾಲದ ನಿರ್ಬಂಧ (ತಗಪಿರ್ದಂ ಕಾಪಿನವರಗಲ್ಕೆಯಂ ಮೆಚ್ಚದಿರ್ಪನೆ: ಜೀವಸಂ, ೧೧. ೧೩ ವ)

ತಗರಕೇಳೀ

ಟಗರುಕಾಳಗದ ಆಟ (ನಗರಾಭ್ಯಂತರ ದೇವತಾಭವನದೊಳ್ ಚೌವಟ್ಟದೊಳ್ ಬೀದಿವೀದಿಗಳೊಳ್ ಜೂಜಿನ ದಿಂಡೆಯೊಳ್ ತಗರಕೇಳೀವಿದ್ಯೆಯೊಳ್ .. ..ನೀತಿಗೆಟ್ಟಾಡುವರ್: ಸುಕುಮಾಚ, ೨. ೭)
< previous1234567897273Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App