ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ದ್ವಿಜವರ

ದ್ವಿಜರಾಜ; ಗಂಡಭೇರುಂಡ (ಅಂಭೋಜಿನಿ ಮಾಡಿದಳ್ ದ್ವಿಜವರಂಗೆ ಆತಿಥ್ಯಸತ್ಕಾರಮಂ: ರಾಜಶೇವಿ, ೬. ೧೦)

ದ್ವಿಜಿಹ್ವ

ಎರಡು ನಾಲಗೆಯುಳ್ಳದ್ದು, ಹಾವು (ಮಾರುತಂ ಎೞ್ಚಱಸುತ್ತುಂ ಇರ್ಕುಂ ಆ ಗಿರಿವರದೊಳ್ ದ್ವಿಜಿಹ್ವಪರಿಪೀಡಿತರಂ: ಪಾರ್ಶ್ವನಾಪು, ೬. ೬೬); ಎರಡು ಮಾತಾಡುವವನು, ಮಾತಿಗೆ ತಪ್ಪುವವನು (ಉದಧಿಯಂತೆ ಜಡಸ್ವಭಾವರುಂ ವಿಷೋರಗದಂತೆ ದ್ವಿಜಿಹ್ವರುಂ .. .. ಎನಿಸಿ: ಸುಕುಮಾಚ, ೨. ೫ ವ)

ದ್ವಿಜೇಶ

ನಕ್ಷತ್ರಗಳೊಡೆಯ, ಚಂದ್ರ (ಚಂದ್ರನಂ ಈಕ್ಷಿಸಿ ಸದ್ವಿಜೇಶ ಮಚ್ಚರಣದೊಳೇಕೆ ಬಿರ್ದೆ: ತ್ರಿಷಷ್ಟಿಪು, ೨೪. ೧೬೧)

ದ್ವಿಟ್

ಶತ್ರು (ಶಿಕ್ಷಿತ ದ್ವಿಟ್ ಕ್ಷಿತಿಪತಿವ್ರಾತಂ ಸದ್ಧರ್ಮಪ್ರತಾನಂ: ತ್ರಿಷಷ್ಟಿಪು, ೧೭. ೫೨)

ದ್ವಿಟ್ಕರಿ

ಶತ್ರುವಿನ ಆನೆ (ಏಕಾತಪತ್ರಂ ನಿಜಭುಜವಿಜಯೋತ್ಸಾಹದಿಂ ತಾಳ್ದಿದಂ ದ್ವಿಟ್ಕರಿಕ್ಕುಂಭೋನ್ಮುಖ ಮುಕ್ತಾಫಳಕಲಿತ; ಅಜಿತಪು, ೯. ೭)

ದ್ವಿಟ್ಪೀಠ

(ಹರಿಣಧರ ವಿವಸ್ವತ್ ಮನಕುಂಭದ್ವಯಬ್ಜಾಕರ ಜಲಧಿ ಗಜ ದ್ವಿಟ್ಪೀಠ ಚಕ್ರಾಹಿಗೇಹಸ್ಫುರಿತ ಮಣಿಸಮೂಹಜ್ವಾಳೆಯಂ ಕಾಂತೆ ಕಂಡಳ್: ಅಜಿತಪು, ೩. ೧೨)

ದ್ವಿತಯ

ಎರಡು, ಯುಗಳ (ಸಾರಾಸಾರ ದ್ವಿತಯವಿಚಾರಕ್ಷಮನೆನಿಸಿದವನೆ ಮಿಥ್ಯಾತ್ವದೆ ಓರಂತೆ ನಮೆವೊಡೆ: ಸಮಯಪ, ೩. ೩೫)

ದ್ವಿತೀಯ

ಎರಡನೆಯ (ಆ ದ್ವಿತೀಯ ಮುನೀಶ್ವರಂ ಅಗ್ರಮುನೀಶ್ವರನಾದೇಶದಿಂ .. .. ಬಂದು: ಸುಕುಮಾಚ, ೫. ೨೩ ವ)

ದ್ವಿಪ

ಎರಡು ಹಂತದಲ್ಲಿ ನೀರು ಕುಡಿಯುವುದು, ಆನೆ (ಧೂಳೀಪಟಲಪಿಹಿತಕೇತು ದ್ವಿಪಾನೀಕ ಘಂಟಾನಿವಹ ವ್ಯಾಪಾರಮಲ್ಲಿಂ: ಆದಿಪು, ೧೪. ೯೪)

ದ್ವಿರದ

ಎರಡು ಕೋರೆಗಳನ್ನುಳ್ಳುದು, ಆನೆ (ದಿಗಿಭಂಗಫ್ಪ ಸಮರ ದ್ವರಿರದಂಗಳ ಯುದ್ಧಕೇಳಿಯಂ ಬಗೆಗೊಳೆ: ಆದಿಪು, ೮. ೪೮)

ದ್ವಿರದ ಕದಳಿಕಾ

ಆನೆಯ ಮೇಲೆ ನಿಲ್ಲಿಸುವ ಪತಾಕೆ (ಉದ್ಯಾನಕೇಳೀ ಚಳತ್ಪತ್ರಿಳಶಾಖಾಕಾರಜೈತ್ರ ದ್ವಿರದ ಕದಳಿಕಾಡಂಬರಂ: ಆದಿಪು, ೧೩. ೮)

ದ್ವಿರದನಿ

ದ್ವಿರದ (ಭೂವರಶಿಖಾಮಣಿ ನೆಟ್ಟನೆ ಪಟ್ಟವರ್ಧನ ದ್ವಿರದನಿಯಿಂದೆ ಮುಂದಿೞದು ತದ್ವನಕೇಳಿಗೆ .. .. ಪುಗುತಂದಂ: ಶಾಂತೀಶ್ವಪು, ೧೦. ೭೩)

ದ್ವಿರೇಫ

ಭ್ರಮರ ಎಂಬುದರಲ್ಲಿ ಎರಡು ಬಾರಿ ರ ಕಾರ ಬರುವುದರಿಂದ ಈ ಹೆಸರು, ದುಂಬಿ (ನರಪಾಳ ಮೌಳಿ ಹರಿನೀಳಮಣಿಪ್ರಚಯ ದ್ವಿರೇಫ ಚುಂಬಿತ ಚರಣಾರವಿಂದಂ ಅವದಾತ ಯಶಂ ಕವಿತಾಮನೋಹರಂ: ಪಂಪರಾ, ೧೦. ೨೩೬)

ದ್ವಿವಿಧ

ಎರಡು ಬಗೆ (ವಸ್ತುಸ್ವರೂಪ (ನಿನ್ನ ಬೆಸಗೊಂಡ ತತ್ತ್ವಮುಂ ಹೇಯೋಪಾದೇಯರೂಪದಿಂ ದ್ವಿವಿಧಮಕ್ಕುಂ: ಆದಿಪು, ೧೦. ೬೩ ವ)

ದ್ವಿಶಿರ

ಎರಡು ತಲೆ[ಗಳುಳ್ಳ)], ಗಂಡಭೇರುಂಡ (ಸಾರಂಗಶಾಬಂ ದ್ವಿಶಿರಂ ತಾಯ್ದಪ್ಪಿ ಪಾಯ್ದು ಎಂಟಡಿಗೆ ಕುಟುಕನೊಲ್ದೂಡುಗುಂ: ಶಬರಶಂ, ೨. ೬೫)

ದ್ವಿಷ

ಶತ್ರು (ದೇವ ಭೀಕರಕರ್ಮದ್ವಿಷರಂ ಪಡಲ್ವಡಿಸಲುಂ ಭವ್ಯರ್ಕಳಂ ಘೋರಸಂಸರಣಾಂಭೋನಿಧಿಪಾರಮಂ ಸಲಿಸಲುಂ ಸಾಲ್ಗುಂ ತ್ವದುದ್ಯೋಗಂ: ಆದಿಪು, ೯. ೬೧)

ದ್ವಿಷಜ್ಜಾತ

ಶತ್ರುವಿನಿಂದಾದುದು (ದ್ವಿಷಜ್ಜಾತಂ ಚೂತಂ .. .. ವಿಷಾದಾಯಂ ಕಾಯಂ ವನಿತೆಗವನಿಂ ಚಿತ್ತಭವನಿಂ: ಲೀಲಾವತಿ, ೭. ೮೩)

ದ್ವಿಷದ್ಬಲ

[ದ್ವಿಷತ್+ಬಲ] ದ್ವಿಷತ್ಸೇನೆ (ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷದ್ಬಲಮಂ ಸುಟ್ಟ್ಟಂ ಉದಾತ್ತಪುಣ್ಯನವಂ ಚೈತಾಗ್ನಿಯಿಂ ಸುಟ್ಟೆನಿಲ್ಲ ಒಲವಿಂದ ಇಂದಿಂತು ಎರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ: ಪಂಪಭಾ, ೧೩. ೬೦)

ದ್ವಿಸಪ್ತತಿಪ್ರಕೃತಿ

[ಜೈನ] ಅನುದಯವೆಂಬ ಅಸಾತಾವೇದನೀಯ, ದೇವಗತಿ, ದೇವಗತಿಪ್ರಯೋಗ್ಯಾನುಪೂರ್ವ್ಯ, ಐದು ಶರೀರ, ಐದು ಬಂಧನ, ಐದು ಸಂಘಾತ, ಐದು ವರ್ಣ, ಐದು ರಸ, ಆರು ಸಂಸ್ಥಾನ, ಆರು ಸಂಹನನ, ಮೂರು ಅಂಗೋಪಾಂಗ, ಎರಡು ಗಂಧ, ಎಂಟು ಸ್ಪರ್ಶ, ಅಗುರುಲಘುತ್ವ, ಎರಡು ವಿಹಾಯೋಗತಿ [ಪ್ರಶಸ್ತ+ಅಪ್ರಶಸ್ತ], ಸ್ಥಿರ, ಅಸ್ಥಿರ, ಶುಭ, ಅಶುಭ, ಸುಸ್ವರ, ದುಸ್ವರ, ಸುಭಗ, ದುರ್ಭಗ, ಪ್ರತ್ಯೇಕಶರೀರ, ಅಯಸ್ಕೀರ್ತಿ, ಅನಾದೇಯ, ನಿರ್ಮಾಣ, ಅಪರ್ಯಾಪ್ತ, ನೀಚೈರ್ಗೋತ್ರ ಎಂಬ ಎಪ್ಪತ್ತೆರಡು ಪ್ರಕೃತಿಗಳು (ನೀಚೈರ್ಗೋತ್ರವೆಂವ ದ್ವಿಸಪ್ತಕಪ್ರಕೃತಿಗಳಂ ನಿರವಶೇಷಂ ಕಿಡಿಸಿ: ಆದಿಪು, ೧೬. ೪೯ ವ)

ದ್ವಿಸಹಸ್ರಜಿಹ್ವ

ಎರಡು ಸಾವಿರ ನಾಲಗೆಗಳುಳ್ಳ, ಆದಿಶೇಷ (ಅಹಿರಾಜಂ ದ್ವಿಸಹಸ್ರಜಿಹ್ವಂ ಅಱಯಂ ವ್ಯಾವರ್ಣಿಸಲ್ ಬಲ್ಲನೇ ಮಹಿಯೊಳ್ ಮಾನವನೊಂದೆ ನಾಲಗೆಯೊಳ್: ಜಗನ್ನಾವಿ, ೨. ೩೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App