ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ದ್ವೀಂದ್ರಿಯ

[ಜೈನ] ಸ್ಪರ್ಶನ, ರಸನ ಎಂಬ ಎರಡು ಇಂದ್ರಿಯಗಳು ಮಾತ್ರ ಇರುವ ಜಂತು (ಸ್ಪರ್ಶನ ರಸನೇಂದ್ರಿಯೋಪೇತಂಗಳಪ್ಪ ಶಂಖಾದಿ ದ್ವೀಂದ್ರಿಯಂಗಳ್: ಆದಿಪು, ೧೦. ೬೩ ವ)

ದ್ವೀಪ

ನಡುಗಡ್ಡೆ (ನೆಗೞ್ದಾ ದ್ವೀಪದ ಮಧ್ಯದಲ್ಲಿ ಕಲಶಂ ಚಂಡಪ್ರಭು ಪಂಜರಂ ಭಗಣಂ: ಜಗನ್ನಾವಿ, ೧. ೨೫)

ದ್ವೀಪಾಂತರ

ಬೇರೆಯ ದ್ವೀಪ (ದ್ವೀಪಾಂತರಕಟಕ ಪ್ರಭಾವನುಂ ಎನಿಸಿದ ಪುಲಿಕೇಶಿದೇವಂ: ಗದಾಯು, ೨. ೭ ವ)

ದ್ವೀಪಿ

ಹುಲಿ, ಶಾರ್ದೂಲ (ಕಪಟತಾಪಸರೂಪಿಯಪ್ಪ ದ್ವೀಪಿಯ ಸಮೀಪಕ್ಕೆ ಬಂದು ಪೊಡೆವಟ್ಟು: ಪಂಚತಂತ್ರ, ೩೨೬ ವ)

ದ್ವೈತೀಯಕ

ಎರಡನೆಯ (ದ್ವೈತೀಯಕ ಜಿನಪಂಗೆ ಅದ್ವೈತಂಗೆ ಅಜಿತಂಗೆ ಭುವನದಯಿಂತಗಾಗಳ್ ದೈತೇಂದ್ರೆಲ್ಲರಂ ಗ್ಯೆಱಗಿದರಾತತ ಪುಣ್ಯಂಗೆ ಜಗದೊಳಗೆಱಗದರೊಳರೇ: ಅಜಿತಪು, ೫. ೩)

ದ್ವೈಧ

ಎರಡಾಗಿರುವುದು, ಭಿನ್ನವಾಗಿರುವುದು (ಅರ್ಥಂ ದ್ವೈಧಮಾಗೆ ಮನದ ಸಂಶಯಮಂ ಪರಿಚ್ಛೇದಿಸಿ: ಮಲ್ಲಿನಾಪು, ೩. ೧೧)

ದ್ವೈಧೀಭವತ್

ಎರಡಾಗಿ ಸೀಳಿದ (ವಿಷಮ ಕಠೋರ ಕೂರ್ಮ ಘರ್ಮನಿರ್ಭರೋಚ್ಛಾಸ ಭರದ್ವೈಧೀಭವತ್ ಅಂಭಃಪ್ರಕಟಿತ ಅಗಾಧ ರಂಧ್ರಾವರ್ತಮಾನ ಜಳಚರ ಸಂಚರಣ ವಿಸ್ಮಯನೀಯ ಭಯಾನಕೆಯುಂ: ಆದಿಪು, ೫. ೮೭ ವ)

ದ್ವೈಧೀಭಾವ

ರಾಜನ ಷಾಡ್ಗುಣ್ಯಗಳಲ್ಲಿ ಒಂದು, ಆರು ಬಗೆಯ ಭೇದೋಪಾಯಗಳಲ್ಲಿ ಒಂದು, ಬಲಿಷ್ಠ ಶತ್ರುಗಳಿಬ್ಬರಲ್ಲಿ ದುರ್ಬಲನ್ನು ಒಲಿಸಿಕೊಳ್ಳುವುದು, (ಬಲವಂತರಪ್ಪ ಶತ್ರುಗಳ ನಡುವೆ ದುರ್ಬಲನಪ್ಪ ನೃಪಂ ಆ ರಿಪುಗಳಂ ವಾಙತ್ರದಿಂ ಅತಿಸಂಧಾನಂಗೆಯ್ದು ತನ್ನ ಮನಮಂ ಎನ್ನರುಂ ಅಱಯದಂತು ಕಾಕಾಕ್ಷಿಗೋಳಕನ್ಯಾಯದಿಂದಿರ್ಪುದುಂ ದ್ವೈಧೀಭಾವಮೆಂಬುದಕ್ಕುಂ: ಪಂಚತಂತ್ರ, ೩೦೭ ವ) ನೋಡಿ, ಭೇದೋಪಾಯ

ದ್ವ್ಯರ್ಧಾಕ್ಷಿ

ಚಿತ್ರಗಳಲ್ಲಿ ಒಂದೂವರೆ ಕಣ್ಣು ಕಾಣುವ ಭಂಗಿ (ಗಿಳಿ ಋಜ್ವಾಗತದಿಂದಂ ಅರ್ಧಋಜುವಿಂದಂ ಕೋಕಿಳಂ ಸಾಚಿಯಿಂ ಕಳಹಂಸೀಕಳಭಂ ರಥಾಂಗಮಿಥುನಂ ಧ್ವ್ಯರ್ಧಾಕ್ಷಿಯಿಂ .. .. ಕಣ್ಗೊಳೆ: ಮಲ್ಲಿನಾಪು, ೫. ೩೬)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App